ಬೆಂಗಳೂರಿನ ಐಐಎಸ್ಸಿ ಮೇಲಿನ ದಾಳಿಯ ರುವಾರಿ ಉಗ್ರ ಸೈಫುಲ್ಲಾ ಖಾಲಿದ್ ಹತ್ಯೆ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಸೈಫುಲ್ಲಾ ಖಾಲಿದ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸೈಫುಲ್ಲಾ ಖಾಲಿದ್ 2006ರ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿ ಮೇಲೆ ದಾಳಿ, 2001ರ ರಾಂಪುರದ ಸಿಆರ್‌ಪಿಎಫ್ ಕ್ಯಾಂಪ್ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದನು. ಉಗ್ರ ಖಾಲಿದ್ ಎಲ್‌ಇಟಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದನು. ಈತ ನೇಪಾಳದ ಮೂಲಕ ಭಾರತಕ್ಕೆ ಉಗ್ರರನ್ನು ಕಳುಹಿಸುತ್ತಿದ್ದನು.

ನವದೆಹಲಿ, ಮೇ 18: ಭಾರತದ (India) ಮೂರು ಪ್ರಮುಖ ಸ್ಥಳಗಳಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್-ಎ-ತೊಯ್ಬಾ (LET) ಉಗ್ರ ಸಂಘಟನೆಯ ಕಮಾಂಡರ್ ಸೈಫುಲ್ಲಾ ಖಾಲಿದ್‌ನನ್ನು (Saifullah Khalid) ಪಾಕಿಸ್ತಾನದ (Pakistan) ಸಿಂಧ್ ಪ್ರಾಂತ್ಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸೈಫುಲ್ಲಾ ಖಾಲಿದ್ 2006 ರಲ್ಲಿ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ಮೇಲೆ ನಡೆದ ದಾಳಿಯ ಸಂಚುಕೋರನಾಗಿದ್ದನು. ಅಲ್ಲದೆ, 2001ರಲ್ಲಿ ರಾಂಪುರದಲ್ಲಿನ ಸಿಆರ್‌ಪಿಎಫ್ ಕ್ಯಾಂಪ್ ಮೇಲಿನ ದಾಳಿಯ ಪ್ರಮುಖ ಆರೋಪಿಯಾಗಿದ್ದನು. 2005ರಲ್ಲಿ ಬೆಂಗಳೂರಿನ IISc ಮೇಲೆ ನಡೆದ ದಾಳಿಯ ಹಿಂದೆಯೂ ಈತನ ಕೈವಾಡವಿತ್ತು.
ಉಗ್ರ ಸೈಫುಲ್ಲಾ ಖಾಲಿದ್, ವಿನೋದ್ ಕುಮಾರ್ ಅಲಿಯಾಸ್ ಮೊಹಮ್ಮದ್ ಸಲೀಂ ಅಲಿಯಾಸ್ ಖಾಲಿದ್ ಅಲಿಯಾಸ್ ವನಿಯಾಲ್ ಅಲಿಯಾಸ್ ವಾಜಿದ್ ಅಲಿಯಾಸ್ ಸಲೀಂ ಭಾಯ್ ಎಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದನು.
ಹತ್ಯೆಯಾದ ಉಗ್ರ ಸೈಫುಲ್ಲಾ ಖಾಲಿದ್ ನೇಪಾಳದಲ್ಲಿ ವಿನೋದ್ ಕುಮಾರ್ ಎಂದು ಹೆಸರು ಬದಲಾಯಿಸಿಕೊಂಡು ವಾಸವಾಗಿದ್ದನು. ಹತ್ಯೆಯಾದ ಉಗ್ರ ಸೈಫುಲ್ಲಾ ಖಾಲಿದ್ ನೇಪಾಳದಲ್ಲಿ ಬಾನು ಎಂಬ ಮಹಿಳೆಯನ್ನು ಮದುವೆಯಾಗಿದ್ದನು.
ಉಗ್ರ ಸೈಫುಲ್ಲಾ ಖಾಲಿದ್ ಎಲ್‌ಇಟಿ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದನು. ನೇಪಾಳದಲ್ಲೂ ಎಲ್‌ಇಟಿಯ ಭಯೋತ್ಪಾದಕ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದನು. ವರದಿಯ ಪ್ರಕಾರ, ಉಗ್ರ ಸೈಫುಲ್ಲಾ ಖಾಲಿದ್ ಎಲ್‌ಇಟಿ ಭಯೋತ್ಪಾದಕರನ್ನು ನೇಪಾಳದ ಮೂಲಕ ಭಾರತಕ್ಕೆ ಕಳುಹಿಸುತ್ತಿದ್ದನು.
ಇದನ್ನೂ ಓದಿ: ಭಾರತೀಯ ಸೇನೆಯ ಬಹುದೊಡ್ಡ ಬೇಟೆ: ಲಷ್ಕರ್ ಸಂಘಟನೆಯ ಟಾಪ್ ಕಮಾಂಡರ್ ಅಲ್ತಾಫ್ ಹತ್ಯೆ
ಉಗ್ರ ಸೈಫುಲ್ಲಾ ಖಾಲಿದ್ ತನ್ನ ನೆಲೆಯನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಮಟ್ಲಿಗೆ ಬದಲಾಯಿಸಿದ್ದನು. ಪಾಕಿಸ್ತಾನದಲ್ಲಿ, ಲಷ್ಕರ್-ಎ-ತೈಬಾ ಮತ್ತು ಜಮಾತ್-ಉದ್-ದವಾ ಪರ ಕೆಲಸ ಮಾಡುವುದನ್ನು ಮುಂದುವರೆಸಿದ್ದನು. ಇಲ್ಲಿ, ಭಯೋತ್ಪಾದಕ ಚಟುವಟಿಕೆಗಳನ್ನು ಜನರನ್ನು ನೇಮಕಾತಿ ಮಾಡಿಕೊಳ್ಳುವುದು ಮತ್ತು ಹಣ ಸಂಗ್ರಹಿಸುತ್ತಿದ್ದನು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Sun, 18 May 25