
ದೆಹಲಿ: ಅಮೃತಸರದ ಹರ್ಮಿಂದರ್ ಸಾಹಿಬ್ ಅಥವಾ ಗೋಲ್ಡನ್ ಟೆಂಪಲ್‌ನಿಂದ ಗುರ್ಬಾನಿ ಉಚಿತ ಪ್ರಸಾರಕ್ಕಾಗಿ ಪಂಜಾಬ್ ಮುಖ್ಯಮಂತ್ರಿ (Punjab CM) ಭಗವಂತ್ ಮಾನ್ (Bhagwant Mann) ಅವರ ಪ್ರಸ್ತಾವಿತ ಮಸೂದೆಯ ಕುರಿತು ರಾಜಕೀಯ ವಾದ-ವಿವಾದಗಳ ನಡುವೆ, ಇದುವರೆಗಿನ ಪ್ರಸಾರದ ಹೊಣೆಗಾರಿಕೆ ಹೊಂದಿದ್ದ ಸುದ್ದಿಜಾಲದ ಮುಖ್ಯಸ್ಥರು ಇಡೀ ರಾಜ್ಯ ಸಚಿವ ಸಂಪುಟಕ್ಕೆ ಸವಾಲು ಹಾಕಿದ್ದಾರೆ. ಗುರ್ಬಾನಿಗೆ ಚಂದಾದಾರರಾಗಲು ಪಾವತಿಸಬೇಕಾದ ಒಂದೇ ಗ್ರಾಹಕ ಬಿಲ್ ಅನ್ನು ತಂದು ತೋರಿಸಿ, ಚಂದಾದಾರರಾಗಲು ಪಾವತಿಸಬೇಕು ಎಂದು ತೋರಿಸುವ ಬಿಲ್ ಅನ್ನು ತಂದುಕೊಟ್ಟರೆ ಅಂಥವರಿಗೆ ₹ 1 ಕೋಟಿ ಬಹುಮಾನ ನೀಡುವುದಾಗಿ ಪಿಟಿಸಿ ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕ ರಬೀಂದ್ರ ನಾರಾಯಣ್ (Rabindra Narayan) ಹೇಳಿದ್ದಾರೆ.
ಗುರ್ಬಾನಿ ಈಗಾಗಲೇ ಉಚಿತವಾಗಿದೆ. ಎಲ್ಲಾ ಪಿಟಿಸಿ ನೆಟ್‌ವರ್ಕ್ ಚಾನೆಲ್‌ಗಳು ಇದನ್ನು ಉಚಿತವಾಗಿಯೇ ಪ್ರಸಾರ ಮಾಡುವಂತೆ ಭಾರತ ಸರ್ಕಾರ ಮಾಡಿದೆ. ಯಾವುದೇ ಕೇಬಲ್ ಆಪರೇಟರ್, ಡಿಟಿಎಚ್ ಆಪರೇಟರ್ ಯಾವುದೇ ಹಣವನ್ನು ವಿಧಿಸುವುದಿಲ್ಲ. ಇದು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿಯೂ ಉಚಿತವಾಗಿ ಲಭ್ಯವಿದೆ. ಹಾಗಿದ್ದರೆ ಗುರ್ಬಾನಿಯನ್ನು ಮುಕ್ತವಾಗಿ ಪ್ರಸಾರ ಮಾಡುವುದಾಗಿ ಹೇಗೆ ಹೇಳಿಕೊಳ್ಳುತ್ತಿದ್ದಾರೆ? ಎಂದು ರಬೀಂದ್ರ ನಾರಾಯಣ್ ಕೇಳಿದ್ದಾರೆ.
GURBANI IS ALREADY FREE. All PTC Network channels are designated as FREE TO AIR channels by Government of India. No cable operator, DTH operator charges any money. It is also available for free on YouTube and Facebook. So how are they claiming to make Gurbani Free To Air? We… pic.twitter.com/IEYNuuPnke
— Rabindra Narayan (@RabindraPTC) June 20, 2023
ಇದಕ್ಕೆ ಪ್ರತಿಕ್ರಿಯಿಸಿದ ಭಗವಂತ್ ಮಾನ್, ಗುರ್ಬಾನಿ ಇದೀಗ ಉಚಿತವಾಗಿ ಪ್ರಸಾರವಾಗುತ್ತಿಲ್ಲ. 11 ವರ್ಷಗಳಿಂದ ಅದೇ ಚಾನೆಲ್ ಅದನ್ನು ಪ್ರಸಾರ ಮಾಡುತ್ತಿದೆ. ಪ್ರಧಾನ ಸಿಖ್ ಸಂಸ್ಥೆಯಾದ ಅಕಾಲ್ ತಖ್ತ್ ತನ್ನ ಸ್ವಂತ ಚಾನೆಲ್ ಅನ್ನು ಸ್ಥಾಪಿಸಲು SGPC ಗೆ ಆದೇಶಿದ್ದು, ಅದನ್ನು ಮಾಡಲಾಗಿಲ್ಲ ಎಂದು ಹೇಳಿದ್ದಾರೆ. ನನ್ನ ಚಾನೆಲ್ಗೆ ಕೊಡಿ ಎಂದು ನಾನು ಹೇಳಿದ್ದೇನೆಯೇ? ನನ್ನ ಬಳಿ ಯಾವುದೇ ಚಾನೆಲ್ ಇಲ್ಲ, ಹಾಗಾದರೆ ಬಾದಲ್‌ನ ಸಮಸ್ಯೆ ಏನು?
ಧಾಮಿ ಸಾಹಬ್ (ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ) ಇದು ಉಚಿತ-ಪ್ರಸಾರ ಎಂದು ಹೇಳುತ್ತಿದ್ದಾರೆ. ಇದು ಉಚಿತ-ಪ್ರಸಾರವಲ್ಲ, ಆಗಿದ್ದರೆ, ಗುರ್ಬಾನಿ ಎಲ್ಲಾ ಚಾನಲ್‌ಗಳಲ್ಲಿ ಏಕೆ ಬರುವುದಿಲ್ಲ? ಅದು ಕಾಪಿರೈಟ್ ಇರುವುದಾಗಿದೆ ಎಂದು ಮಾನ್ ವಾದಿಸಿದ್ದಾರೆ.
ಗುರ್ಬಾನಿ ಪ್ರತಿಯೊಬ್ಬರ ಹಕ್ಕು ಮತ್ತು ಅದನ್ನು ಉಚಿತವಾಗಿ ನೀಡಬೇಕು ಎಂದು ಮುಖ್ಯಮಂತ್ರಿ ಮಾನ್ ಹೇಳಿದ್ದರು.ರಾಜ್ಯ ಅಸೆಂಬ್ಲಿಯಲ್ಲಿ ಪ್ರಸ್ತಾವನೆಯನ್ನು ಮಂಡಿಸಿದ ನಂತರ ಸಿಖ್ ಗುರುದ್ವಾರ ಕಾಯಿದೆ, 1925 ಗೆ ಹೊಸ ವಿಭಾಗವನ್ನು ಸೇರಿಸುವ ಯೋಜನೆ ಇದೆ ಎಂದು ಅವರು ಹೇಳಿದರು.
“ದೇವರ ಆಶೀರ್ವಾದದೊಂದಿಗೆ, ನಾವು ನಾಳೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ, ಎಲ್ಲಾ ಭಕ್ತರ ಬೇಡಿಕೆಯಂತೆ, ನಾವು ಸಿಖ್ ಗುರುದ್ವಾರ ಕಾಯಿದೆ 1925 ರಲ್ಲಿ ಹೊಸ ಷರತ್ತು ಸೇರಿಸುತ್ತಿದ್ದೇವೆ, ಹರ್ಮಿಂದರ್ ಸಾಹಿಬ್‌ನಿಂದ ಗುರ್ಬಾನಿ ಪ್ರಸಾರ ಎಲ್ಲರಿಗೂ ಉಚಿತವಾಗಿದೆ. … ಟೆಂಡರ್ ಅಗತ್ಯವಿಲ್ಲ… ನಾಳೆ ಸಂಪುಟದಲ್ಲಿ… ಜೂನ್ 20 ರಂದು ರಾಜ್ಯ ವಿಧಾನಸಭೆಯಲ್ಲಿ ಮತದಾನ ನಡೆಯಲಿದೆ ಎಂದು ಮಾನ್ ಟ್ವೀಟ್ ಮಾಡಿದ್ದಾರೆ.
ಹರ್ಮಂದಿರ್ ಸಾಹಿಬ್ 1998 ರಿಂದ ಬೆಳಿಗ್ಗೆ ಮತ್ತು ಸಂಜೆ ಗುರ್ಬಾನಿಯನ್ನು ಪ್ರಸಾರ ಮಾಡುತ್ತಿದೆ.
ಗುರ್ಬಾನಿಯ ಪ್ರಸಾರದ ಹಕ್ಕುಗಳು 2007 ರಿಂದ ರಾಜಕೀಯವಾಗಿ ಪ್ರಬಲವಾದ ಬಾದಲ್ ಕುಟುಂಬದ ಒಡೆತನದ PTC ನೆಟ್‌ವರ್ಕ್‌ನಲ್ಲಿವೆ. ನೆಟ್‌ವರ್ಕ್ ಇದಕ್ಕಾಗಿ ಹರ್ಮಂದಿರ್ ಸಾಹಿಬ್ ಅನ್ನು ನಿರ್ವಹಿಸುವ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಗೆ ವಾರ್ಷಿಕವಾಗಿ ₹ 2 ಕೋಟಿ ಪಾವತಿಸುತ್ತದೆ.
SGPC ಮತ್ತು PTC ನೆಟ್‌ವರ್ಕ್‌ನ ಗುರ್ಬಾನಿ ಪ್ರಸಾರದ ಒಪ್ಪಂದವು ಜುಲೈ 2023 ರಲ್ಲಿ ಮುಕ್ತಾಯಗೊಳ್ಳುತ್ತದೆ. ಅದೇ ವೇಳೆ ಧಾರ್ಮಿಕ ವಿಷಯಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಎಸ್‌ಜಿಪಿಸಿ ಆರೋಪಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ