Covaxin Vaccine: ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿ ಶೀಘ್ರದಲ್ಲೇ ಕೊವ್ಯಾಕ್ಸಿನ್​​ಗೆ ಸಿಗಲಿದೆ ಸ್ಥಾನ !

| Updated By: Lakshmi Hegde

Updated on: Jul 10, 2021 | 5:36 PM

ವಿಜ್ಞಾನ ಮತ್ತು ಪರಿಸರ ಕೇಂದ್ರದ ಆಯೋಜಿಸಿದ್ದ ವೆಬಿನಾರ್​ನಲ್ಲಿ ಮಾತನಾಡಿದ ಡಬ್ಲ್ಯೂಎಚ್​ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್​, ಕೊವ್ಯಾಕ್ಸಿನ್​ ಲಸಿಕೆಗೆ ಸಂಬಂಧಪಟ್ಟ ಸಮಗ್ರ ಡಾಟಾವನ್ನೂ ಭಾರತ್ ಬಯೋಟೆಕ್​ ಡಬ್ಲ್ಯೂಎಚ್​ಒದ ಪೋರ್ಟಲ್​​ನಲ್ಲಿ ಅಪ್ಲೋಡ್ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

Covaxin Vaccine: ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿ ಶೀಘ್ರದಲ್ಲೇ ಕೊವ್ಯಾಕ್ಸಿನ್​​ಗೆ ಸಿಗಲಿದೆ ಸ್ಥಾನ !
ಕೊವ್ಯಾಕ್ಸಿನ್
Follow us on

ದೆಹಲಿ: ಭಾರತದಲ್ಲಿ ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್ ಎಂಬ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಬಳಕೆ ಮಾಡಲಾಗುತ್ತಿದೆ. ಆದರೆ ಸೀರಮ್ ಇನ್​​ಸ್ಟಿಟ್ಯೂಟ್​ನ ಕೊವಿಶೀಲ್ಡ್​ ಲಸಿಕೆ ವಿಶ್ವ ಆರೋಗ್ಯ ಸಂಸ್ಥೆ (WHO)ಯ ತುರ್ತು ಬಳಕೆಯ ಪಟ್ಟಿಯಲ್ಲಿದೆ. ಆದರೆ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್​ ಲಸಿಕೆಯನ್ನು ಇನ್ನೂ ವಿಶ್ವ ಆರೋಗ್ಯ ಸಂಸ್ಥೆ ತನ್ನ ತುರ್ತು ಬಳಕೆ ಲಿಸ್ಟ್​ನಲ್ಲಿ ಸೇರ್ಪಡೆ ಮಾಡಿಲ್ಲ. ಹಾಗಾಗಿ ಈ ಲಸಿಕೆ ಪಡೆದವರಿಗೆ ವಿದೇಶಕ್ಕೆ ಹೋಗಲು ಅನುಮತಿ ಸಿಗುತ್ತಿಲ್ಲ.

ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೊವ್ಯಾಕ್ಸಿನ್​ ಲಸಿಕೆಯನ್ನೂ ಪರಿಗಣಿಸಲು ನಿರ್ಧರಿಸಿದ್ದಾಗಿ ವರದಿಯಾಗಿದೆ. ಕೊವ್ಯಾಕ್ಸಿನ್​ ಲಸಿಕೆಯನ್ನು ಆಗಸ್ಟ್​ ತಿಂಗಳ ಹೊತ್ತಿಗೆ ತುರ್ತು ಬಳಕೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಡಬ್ಲ್ಯೂಎಚ್​ಒ ತೀರ್ಮಾನಿಸಿದೆ. ಒಂದೊಮ್ಮೆ ಕೊವ್ಯಾಕ್ಸಿನ್​​ನ್ನು ಆಗಸ್ಟ್​​ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆ ಪಟ್ಟಿ ( Emergency Use Listing-EUL)ಯಲ್ಲಿ ಸೇರ್ಪಡೆಗೊಳಿಸಿದರೆ ಈ ಲಸಿಕೆಯನ್ನು ಔಷಧೀಯ ಕಂಪನಿಗಳು ಜಗತ್ತಿನ ಇತರ ದೇಶಗಳಿಗೆ ಮಾರಾಟ ಮಾಡಬಹುದು. ಬೇರೆ ದೇಶಗಳಿಗೆ ಪೂರೈಕೆ ಮಾಡಬಹುದು. ಅಲ್ಲದೆ ಕೊವ್ಯಾಕ್ಸಿನ್​ ಲಸಿಕೆ ತೆಗೆದುಕೊಂಡವರಿಗೂ ವಿದೇಶ ಪ್ರಯಾಣಕ್ಕೆ ಅನುಮತಿ ಸಿಗಲಿದೆ. ಸದ್ಯ 8 ಲಸಿಕೆಗಳಿಗಷ್ಟೇ ಡಬ್ಲ್ಯೂಎಚ್​ಒದ ತುರ್ತು ಬಳಕೆ ಪಟ್ಟಿಯಲ್ಲಿ ಜಾಗ ಸಿಕ್ಕಿದ್ದು, ಕೊವ್ಯಾಕ್ಸಿನ್​ಗೆ ಅನುಮತಿ ಸಿಕ್ಕರೆ 9ನೇಯದಾಗಲಿದೆ.

ವಿಜ್ಞಾನ ಮತ್ತು ಪರಿಸರ ಕೇಂದ್ರದ ಆಯೋಜಿಸಿದ್ದ ವೆಬಿನಾರ್​ನಲ್ಲಿ ಮಾತನಾಡಿದ ಡಬ್ಲ್ಯೂಎಚ್​ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್​, ಕೊವ್ಯಾಕ್ಸಿನ್​ ಲಸಿಕೆಗೆ ಸಂಬಂಧಪಟ್ಟ ಸಮಗ್ರ ಡಾಟಾವನ್ನೂ ಭಾರತ್ ಬಯೋಟೆಕ್​ ಡಬ್ಲ್ಯೂಎಚ್​ಒದ ಪೋರ್ಟಲ್​​ನಲ್ಲಿ ಅಪ್ಲೋಡ್ ಮಾಡುತ್ತಿದೆ. ನಾವದನ್ನು ಮರುಪರಿಶೀಲನೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಯಾವುದೇ ಲಸಿಕೆಯನ್ನು ಡಬ್ಲ್ಯೂಎಚ್​ಒದ ತುರ್ತು ಬಳಕೆ ಪಟ್ಟಿ(EUL)ಯಲ್ಲಿ ಸೇರಿಸಬೇಕು ಎಂದರೆ ಅದು ಮೂರೂ ಹಂತದ ಕ್ಲಿನಿಕಲ್​ ಪ್ರಯೋಗಗಳನ್ನು ಮುಗಿಸಿರಬೇಕು. ಮತ್ತದರ ಸಮಗ್ರ ದತ್ತಾಂಶವನ್ನೂ ಡಬ್ಲ್ಯೂಎಚ್​​ಒದ ನಿಯಂತ್ರಣಾ ವಿಭಾಗಕ್ಕೆ ಸಲ್ಲಿಸಿರಬೇಕು ಎಂದೂ ಸೌಮ್ಯಾ ತಿಳಿಸಿದ್ದಾರೆ. ಕೊವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗದ ಫಲಿತಾಂಶದ ಅನ್ವಯ​ ಕೊರೊನಾ ಸೋಂಕಿನ ವಿರುದ್ಧ 77.8 ಪರ್ಸಂಟ್​ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ಬ್ರೇಕಪ್​ ನೋವಿನಲ್ಲಿ ನಟಸಾರ್ವಭೌಮ ನಟಿ; ಅಭಿಮಾನಿಗಳ ಎದುರು ಮೌನ ಮುರಿದ ಅನುಪಮಾ ಪರಮೇಶ್ವರನ್

Bharat Biotechs Covaxin expected to include emergency use List Of WHO

 

Published On - 5:35 pm, Sat, 10 July 21