BIG NEWS: 38 ತೃಣಮೂಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಮಿಥುನ್ ಚಕ್ರವರ್ತಿ
38 ತೃಣಮೂಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯ ಮುಖಂಡ ಮತ್ತು ನಟ ಮಿಥುನ್ ಚಕ್ರವರ್ತಿ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ (TMC) 38 ಶಾಸಕರು ನಮ್ಮ ಪಕ್ಷದೊಂದಿಗೆ ಉತ್ತಮ ಸಂಬಂಧದಲ್ಲಿದ್ದಾರೆ ಎದು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ(Mithun Chakraborty) ಹೇಳಿದ್ದಾರೆ. 38 ಶಾಸಕರ ಪೈಕಿ 21 ಮಂದಿ ನೇರ ಸಂಪರ್ಕದಲ್ಲಿದ್ದಾರೆ ಎಂದು ಕೊಲ್ಕತ್ತಾದಲ್ಲಿ ಮಾತನಾಡಿದ ಅವರು ಹೇಳಿದ್ದಾರೆ. ನೀವು ಬ್ರೇಕಿಂಗ್ ನ್ಯೂಸ್ ಕೇಳಲು ಬಯಸುತ್ತಿದ್ದೀರಾ? ಈ ಹೊತ್ತಲ್ಲಿ 38 ಟಿಎಂಸಿ ಶಾಸಕರು ನಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಇದರಲ್ಲಿ 21 ಮಂದಿ ನೇರವಾಗಿ ಸಂಪರ್ಕ ಹೊಂದಿದ್ದಾರೆ ಎಂದು ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಹೇಳಿದ್ದಾರೆ.
#WATCH | West Bengal: Do you want to hear breaking news? At this moment, 38 TMC MLAs have very good relations with us, out of which 21 are in direct (contact with us): BJP leader Mithun Chakraborty in Kolkata pic.twitter.com/1AI7kB4H5I
ಇದನ್ನೂ ಓದಿ— ANI (@ANI) July 27, 2022
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಎಂಸಿ, ಖ್ಯಾತ ನಟರು ಸುಳ್ಳು ಹೇಳಿ ಜನರನ್ನು ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ. ಬಿಜೆಪಿ ಈಗ 18 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಪಕ್ಷದ ಬಾವುಟ ಇನ್ನು ಕೆಲವು ರಾಜ್ಯಗಳಲ್ಲಿ ಶೀಘ್ರದಲ್ಲೇ ಎತ್ತರದಲ್ಲಿ ಹಾರಲಿದೆ. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ರಾಜ್ಯದಲ್ಲಿ ಮುಕ್ತ ಮತ್ತು ಸರಿಯಾದ ರೀತಿಯಲ್ಲಿ ಚುನಾವಣೆ ನಡೆದಿದ್ದರೆ ನಮ್ಮ ಪಕ್ಷ ಈಗ ಅಧಿಕಾರದಲ್ಲಿರುತ್ತಿತ್ತು ಎಂದಿದ್ದಾರೆ ಮಿಥುನ್ ದಾ.
ಇಂಥಾ ಹೇಳಿಕೆಗಳು ಜನ ಸಮೂಹವನ್ನು ಮೂರ್ಖರನ್ನಾಗಿಸುವ ಪ್ರಯತ್ನವಾಗಿದೆ. ಇದು ವಾಸ್ತವಕ್ಕೆ ದೂರವಾದ ಸಂಗತಿ ಎಂದು ಟಿಎಂಸಿ ಸಂಸದ ಶಂತನು ಸೇನ್ ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ- ಟಿಎಂಸಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು ಟಿಎಂಸಿ 213 ಸೀಟುಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರಿತ್ತು.
Published On - 5:24 pm, Wed, 27 July 22