AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ಸೆಂಟ್ರಲ್ ವಿಸ್ತಾ ಯೋಜನೆ; ಪ್ರಧಾನಿ ಹೊಸ ಕಚೇರಿ ನಿರ್ಮಾಣದ ಪ್ರಸ್ತಾವನೆಗೆ ದೆಹಲಿ ಸಮಿತಿ ಗ್ರೀನ್ ಸಿಗ್ನಲ್

Central Vista: ಉತ್ತರ- ದಕ್ಷಿಣ ಬ್ಲಾಕ್ ಗಳನ್ನು ಒಳಗೊಂಡ ಅಸ್ತಿತ್ವದಲ್ಲಿರುವ ಆಡಳಿತ ಕೇಂದ್ರವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಸೆಂಟ್ರಲ್ ವಿಸ್ತಾ ಯೋಜನೆ ಇದು.

Big News: ಸೆಂಟ್ರಲ್ ವಿಸ್ತಾ ಯೋಜನೆ; ಪ್ರಧಾನಿ ಹೊಸ ಕಚೇರಿ ನಿರ್ಮಾಣದ ಪ್ರಸ್ತಾವನೆಗೆ ದೆಹಲಿ ಸಮಿತಿ ಗ್ರೀನ್ ಸಿಗ್ನಲ್
ಸೆಂಟ್ರಲ್ ವಿಸ್ತಾ
TV9 Web
| Updated By: ಸುಷ್ಮಾ ಚಕ್ರೆ|

Updated on: Sep 02, 2022 | 2:57 PM

Share

ನವದೆಹಲಿ: ಪ್ರಧಾನಮಂತ್ರಿಗಳ ನೂತನ ಕಚೇರಿ ಮತ್ತು ಕ್ಯಾಬಿನೆಟ್‌ ಸೆಕ್ರೆಟರಿಯೇಟ್‌ ಅನ್ನು ಒಳಗೊಂಡಿರುವ ‘ಸೆಂಟ್ರಲ್ ವಿಸ್ತಾ’ ನಿರ್ಮಾಣದ ಪ್ರಸ್ತಾವನೆಗೆ ದೆಹಲಿ ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರವು ಅನುಮತಿ ನೀಡಿದೆ. ದೆಹಲಿ ರಾಜ್ಯ ತಜ್ಞರ ಮೌಲ್ಯಮಾಪನ ಸಮಿತಿಯು ಕಳೆದ ವಾರ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರಕ್ಕೆ ಯೋಜನೆಗೆ ಹಸಿರು ನಿಶಾನೆ ತೋರುವಂತೆ ಶಿಫಾರಸು ಮಾಡಿತ್ತು.

ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರ ಬುಧವಾರ ನಡೆದ ಸಭೆಯಲ್ಲಿ ಈ ಯೋಜನೆ ಕುರಿತು ಚರ್ಚಿಸಿ ಅನುಮೋದನೆ ನೀಡಿದೆ. ಅರಣ್ಯ ಇಲಾಖೆಯು ಆಗಸ್ಟ್ 23ರಂದು ದೆಹಲಿ ಮರಗಳ ಸಂರಕ್ಷಣೆ ಕಾಯಿದೆ, 1994ರ ಅಡಿಯಲ್ಲಿ ಆ ಸ್ಥಳದಲ್ಲಿರುವ 807 ಮರಗಳ ಪೈಕಿ 487 ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಬಳಕೆದಾರರ ಸಂಸ್ಥೆಯಾದ ಕೇಂದ್ರ ಲೋಕೋಪಯೋಗಿ ಇಲಾಖೆಗೆ ಅನುಮತಿ ನೀಡಿತ್ತು. ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರವು ಈ ಯೋಜನೆಯಿಂದ ಆ ಸ್ಥಳದಲ್ಲಿನ ಶೇ. 60ರಷ್ಟು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಂದಾಜಿಸಿತ್ತು.

ಇದನ್ನೂ ಓದಿ: ಮೋದಿ ಬರ್ತಾರೆಂದು 23 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ್ದ ರಸ್ತೆ ಅಧೋಗತಿಗೆ! ರಾಜ್ಯ ಸರ್ಕಾರಕ್ಕೆ ವರದಿ ಕೇಳಿದ ಪ್ರಧಾನಿ ಕಚೇರಿ

1,381 ಕೋಟಿ ರೂ. ಯೋಜನೆಗೆ ಪರಿಷ್ಕೃತ ಪ್ರಸ್ತಾವನೆಯ ಅನುಸಾರ ಕೇಂದ್ರ ಪರಿಸರ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಪ್ರತಿ 80 ಚದರ ಮೀಟರ್ ಪ್ಲಾಟ್ ಪ್ರದೇಶದಲ್ಲಿ ಒಂದು ಮರವನ್ನು ಹೊಂದಲು ಸಿಪಿಡಬ್ಲ್ಯೂಡಿ ಸೈಟ್‌ನಲ್ಲಿ 1,022 ಮರಗಳನ್ನು ನಿರ್ವಹಿಸುತ್ತದೆ. 47,000 ಚ. ಮೀ. ವಿಸ್ತೀರ್ಣದ ನಿರ್ಮಿತ ಪ್ರದೇಶವನ್ನು ನೆಲಸಮಗೊಳಿಸಿದ ನಂತರ 90,000 ಚ. ಮೀ. ವಿಸ್ತೀರ್ಣದ ಒಟ್ಟು 5 ಕಟ್ಟಡಗಳನ್ನು ನಿರ್ಮಿಸಲಾಗುವುದು.

ಈ ಯೋಜನೆಯನ್ನು ಎಸ್‌ಇಐಎಎಗೆ ಅನುಮೋದನೆಗಾಗಿ ಕಳುಹಿಸುವ ಮೊದಲು ಮೌಲ್ಯಮಾಪನ ಮಾಡುವ ಎಸ್‌ಇಎಸಿ, ಈ ತಿಂಗಳ ಆರಂಭದಲ್ಲಿ ಮರಗಳನ್ನು ಕಿತ್ತು ಮರು ನೆಡುವ ದೆಹಲಿ ಸರ್ಕಾರದ ನೀತಿಯ ಅನುಷ್ಠಾನವನ್ನು ಪರಿಶೀಲಿಸಲು ಉಪಸಮಿತಿಯನ್ನು ರಚಿಸಿತ್ತು.

ಉತ್ತರ-ದಕ್ಷಿಣ ಬ್ಲಾಕ್ ಗಳನ್ನು ಒಳಗೊಂಡ ಅಸ್ತಿತ್ವದಲ್ಲಿರುವ ಆಡಳಿತ ಕೇಂದ್ರವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಸೆಂಟ್ರಲ್ ವಿಸ್ತಾ ಯೋಜನೆ ಇದು. ಇದು ಸಂಸತ್ ಭವನವನ್ನು ಮಾತ್ರವಲ್ಲ, ಪ್ರಧಾನ ಮಂತ್ರಿಯ ನಿವಾಸ ಮತ್ತು ಹೊಸ ಕೇಂದ್ರ ಸಚಿವಾಲಯದ ಭೂಗತ ಸುರಂಗವನ್ನೂ ಒಳಗೊಂಡಿತ್ತು. ಕೊವಿಡ್ ಮತ್ತು ಆರ್ಥಿಕ ಬಿಕ್ಕಟ್ಟು ದೇಶವನ್ನು ಹಿಡಿದಿಟ್ಟುಕೊಂಡಿದ್ದರೂ, ಅಂತಹ ಯೋಜನೆ ಏಕೆ ಜಾರಿಯಲ್ಲಿದೆ ಎಂಬ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಸರ್ಕಾರದ ಕೇಂದ್ರವನ್ನು ಸುಂದರಗೊಳಿಸುವ ಸೆಂಟ್ರಲ್ ವಿಸ್ಟಾ ಯೋಜನೆಯ ಮೊದಲ ಭಾಗವೇ ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣ. ನಿರ್ಮಾಣ ವೆಚ್ಚ ಮಾತ್ರವಲ್ಲದೆ ಸೆಂಟ್ರಲ್ ವಿಸ್ಟಾ ಯೋಜನೆಗೆ ಹಲವಾರು ನಿಯಮಗಳನ್ನು ಮೀರಿ ಅನುಮೋದನೆ ನೀಡಲಾಗಿದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಮಹತ್ವದ ನೂತನ ಸಂಸತ್​ ಭವನ ‘ಸೆಂಟ್ರಲ್ ವಿಸ್ತಾ’ ನಿರ್ಮಾಣಕ್ಕೆ ಸುಪ್ರಿಂ ಕೋರ್ಟ್ ಅಸ್ತು!

ಹೊಸ ಸೆಂಟ್ರಲ್ ವಿಸ್ಟಾ ದೆಹಲಿಯನ್ನು ನವೀಕರಿಸುವ ನಿರ್ಧಾರವನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿತು. ರಾಷ್ಟ್ರಪತಿ ಭವನದಿಂದ ಇಂಡಿಯಾಗೇಟ್ ವರೆಗಿನ ನ ರಾಜ್‌ಪಥ್ ನಲ್ಲಿರುವ ಎಲ್ಲಾ 3.5 ಕಿ.ಮೀ ಕಟ್ಟಡಗಳನ್ನು ನೆಲಸಮ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮೊದಲು ಸಂಸತ್ ಭವನ. ಈಗಿನ ಇಂದಿರಾ ಗಾಂಧಿ ಕೇಂದ್ರ ರಾಷ್ಟ್ರೀಯ ಕಲೆಗಳ ಕೇಂದ್ರದಲ್ಲಿ 2023 ರ ವೇಳೆಗೆ ಕೇಂದ್ರ ಸಚಿವಾಲಯದ 3 ಸಂಕೀರ್ಣಗಳು ಇರಲಿವೆ .ಇಂದಿರಾ ಗಾಂಧಿ ಕೇಂದ್ರವನ್ನು ಈಗಿರುವ ಜನಪಥ್ ಹೋಟೆಲ್‌ಗೆ ಸ್ಥಳಾಂತರಿಸಲಾಗುವುದು. ಪ್ರಸ್ತುತ ಕೇಂದ್ರ ಸಚಿವಾಲಯ ಸಂಕೀರ್ಣದಲ್ಲಿ 22 ಕೇಂದ್ರ ಇಲಾಖೆಗಳಿವೆ. ಮತ್ತು 41,000 ಉದ್ಯೋಗಿಗಳು. ಅನೇಕ ಕಚೇರಿಗಳು ನಗರದ ವಿವಿಧ ಭಾಗಗಳಲ್ಲಿವೆ ಮತ್ತು ಇದು ಕಾರ್ಯಾಚರಣೆಯ ಉತ್ಕೃಷ್ಟತೆಗೆ ಅಡ್ಡಿಯಾಗಿದೆ ಎಂದು ಕೇಂದ್ರ ವಾದಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ