
ಬಿಹಾರ, ಮಾರ್ಚ್ 10: ಬಿಹಾರದ (Bihar) ಮುಖ್ಯಮಂತ್ರಿ ತಮ್ಮನ್ನ ತಾವೇ ಅಥವಾ ಅವರ ಪಾರ್ಟಿಯ ನಾಯಕರು ಸುಶಾಸನ ಬಾಬು ಅಂತಾ ಬೆನ್ನು ತಟ್ಟಿಕೊಳ್ಳಾರೆ. ಆದರೆ ಅಸಲಿಗೆ ಬಿಹಾರದಲ್ಲಿ ಈಗ ಹಾಡಹಗಲೇ ದರೋಡೆಗಳು (Robbery) ನಡೆಯುತ್ತಿವೆ. ಇದಕ್ಕೆ ಉದಾಹರಣೆ ಇಂದು ಬಿಹಾರ ಆರಾ ನಗರದಲ್ಲಿ ನಡೆದ ಚಿನ್ನಾಭರಣ ಅಂಗಡಿಯ ದರೋಡೆ. ಒಟ್ಟು 25 ಕೋಟಿಗೂ ಅಧಿಕ ಬೆಲೆಯ ಆಭರಣಗಳನ್ನ ದರೋಡೆಕೋರರು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಬಿಹಾರದ ಬೋಜಪುರ ಜಿಲ್ಲೆಯ ಆರಾ ನಗರದಲ್ಲಿರುವ ತನಿಷ್ಕ ಚಿನ್ನಾಭರಣ ಶಾಪ್‌ಗೆ ಬೆಳಗ್ಗೆ 10.30 ಸುಮಾರಿಗೆ ನುಗ್ಗಿದ ದರೋಡೆಕೋರರು, ಸಿಬ್ಬಂದಿಗೆ ಮಾರಕಾಸ್ತ್ರಗಳನ್ನ ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಯಾರಾದ್ರೂ ಹೆಚ್ಚುಕಮ್ಮಿ ಮಾಡಿದ್ರೆ ಶೂಟ್ ಮಾಡೋದಾಗಿ ಹೆದರಿಸಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಶೋರೂಮ್‌ನಲ್ಲಿದ್ದ ದರೋಡೆಕೋರರು ಚಿನ್ನಭರಣದ ಜತೆಗೆ ಶಾಪ್‌ನಲ್ಲಿದ್ದ ನಗದು ಹಣವನ್ನೂ ಲೂಟಿ ಮಾಡಿದ್ದಾರೆ.
ಅಚ್ಚರಿ ಆಘಾತಕಾರಿ ವಿಷಯ ಅಂದರೆ ಈ ಘಟನೆ ಆರಾನಗರದ ಪೊಲೀಸ್ ಸ್ಟೇಷನ್‌ನಿಂದ ಕೇವಲ 600 ಮೀಟರ್ ದೂರದಲ್ಲಿದ್ದ ಶಾಪ್‌ನಲ್ಲಿ ನಡೆದಿದೆ. ಇನ್ನೂ ಶಾಕಿಂಗ್ ಅಂದ್ರೆ ಸುಮಾರು 30 ನಿಮಿಷಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ಶಾಪ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಮಾತ್ರ ಲೇಟ್ ಲತಿಫ್‌ರಂತೆ ತಡವಾಗಿ ಆಗಮಿಸಿದ್ದಾರೆಂದು ಶಾಪ್ ಸಿಬ್ಬಂದಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನದ ಟಾಯ್ಲೆಟ್ ಬ್ಲಾಕ್: ಮಾರ್ಗ ಮಧ್ಯದಲ್ಲೇ ಅಮೆರಿಕಕ್ಕೆ ಹಿಂದಿರುಗಿದ ವಿಮಾನ
ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ದರೋಡೆಕೋರರು ಎಸ್ಕೇಪ್ ಆಗಿದ್ದರು. ಆದರೂ ಸಿಕ್ಕ ಮಾಹಿತಿ ಮೇಲೆ ಭೇಟೆ ಆರಂಭಿಸಿದ ಪೊಲೀಸರು, ಲೂಟಿಕೋರರ ಅಡಗುದಾಣ ಪತ್ತೆ ಹಚ್ಚಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಲ್ಲಿ ಇಬ್ಬರು ಗಾಯಗೊಂಡಿದ್ದು, ಇನ್ನುಳಿದವರು ಎಸ್ಕೇಪ್ ಆಗಿದ್ದಾರೆ. ಗಾಯಗೊಂಡವರನ್ನ ಅರೆಸ್ಟ್ ಮಾಡಲಾಗಿದ್ದು, ಇತರರ ಭೇಟೆ ಮುಂದುವರಿದಿದೆ. ಅಂದ ಹಾಗೆ ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
ವರದಿ: ಬ್ಯೂರೋ ರಿಪೋರ್ಟ್, ಟಿವಿ9.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.