Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಲಿ ಕೇಳಲು ಹೋಗಿದ್ದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿದ ಮಾಲೀಕ

ಕೂಲಿ ಕೇಳಲು ಹೋಗಿದ್ದ ವ್ಯಕ್ತಿಯ ಮೇಲೆ ಮಾಲೀಕ ಮೂತ್ರ ವಿಸರ್ಜಿಸಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಕೂಲಿಗಾಗಿ ಒತ್ತಾಯಿಸಿದ್ದಕ್ಕಾಗಿ ತಂದೆ-ಮಗನಿಬ್ಬರು ಆತನ ಮುಖದ ಮೇಲೆ ಉಗುಳಿದ್ದಷ್ಟೇ ಅಲ್ಲದೆ ಮೂತ್ರ ವಿಸರ್ಜನೆ ಮಾಡಿದ್ದಾರೆ.

ಕೂಲಿ ಕೇಳಲು ಹೋಗಿದ್ದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿದ ಮಾಲೀಕ
Follow us
ನಯನಾ ರಾಜೀವ್
|

Updated on: Oct 10, 2024 | 10:46 AM

ಕೂಲಿ ಕೇಳಲು ಹೋಗಿದ್ದ ವ್ಯಕ್ತಿಯ ಮೇಲೆ ಮಾಲೀಕ ಮೂತ್ರ ವಿಸರ್ಜಿಸಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಕೂಲಿಗಾಗಿ ಒತ್ತಾಯಿಸಿದ್ದಕ್ಕಾಗಿ ತಂದೆ-ಮಗನಿಬ್ಬರು ಆತನ ಮುಖದ ಮೇಲೆ ಉಗುಳಿದ್ದಷ್ಟೇ ಅಲ್ಲದೆ ಮೂತ್ರ ವಿಸರ್ಜನೆ ಮಾಡಿದ್ದಾರೆ.

ವ್ಯಕ್ತಿಯ ದೂರಿನ ಪ್ರಕಾರ, ಅಕ್ಟೋಬರ್ 4 ರಂದು ರಿಂಕು ಮಾಂಝಿ ಎಂಬ ವ್ಯಕ್ತಿ ಆರೋಪಿ ರಮೇಶ್ ಪಟೇಲ್ ಅವರ ಕೋಳಿ ಫಾರಂಗೆ ಹೋದಾಗ ಈ ಘಟನೆ ಸಂಭವಿಸಿದೆ. ತನ್ನ ವೇತನದ ಬೇಡಿಕೆಯಿಂದ ಕೋಪಗೊಂಡ ರಿಂಕು ಅವರನ್ನು ರಮೇಶ್ ಪಟೇಲ್, ಅವರ ಸಹೋದರ ಅರುಣ್ ಪಟೇಲ್ ಮತ್ತು ಅವರ ಮಗ ಗೌರವ್ ಕುಮಾರ್ ಥಳಿಸಿದ್ದಾರೆ.

ರಮೇಶ್ ಪಟೇಲ್ ಮತ್ತು ಅವರ ಮಗ ಗೌರವ್ ಕುಮಾರ್ ಸಹ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಮತ್ತು ಅವರ ಮುಖದ ಮೇಲೆ ಉಗುಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ವೀಡಿಯೊವನ್ನು ರಿಂಕು ಮಾಂಝಿ ಅವರು ಅಕ್ಟೋಬರ್ 8 ರಂದು ಸಲ್ಲಿಸಿದ ದೂರಿನಲ್ಲಿ ಆರೋಪಿಯ ವಿರುದ್ಧ ಸಾಕ್ಷ್ಯವಾಗಿ ಪೊಲೀಸರಿಗೆ ಕೊಟ್ಟಿದ್ದಾರೆ.

ಮತ್ತಷ್ಟು ಓದಿ: ಕಿಡಿಗೇಡಿಗಳ ಕ್ರೌರ್ಯಕ್ಕೆ ಮನೆ ಧ್ವಂಸ: ಬೀದಿಗೆ ಬಿದ್ದ ಮಹಿಳೆ​, ಆರೋಪಿಗಳು ಪರಾರಿ

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಮುಜಾಫರ್‌ಪುರದಲ್ಲಿ ಮತ್ತೊಂದು ಪ್ರಕರಣದಲ್ಲಿ, ಮೋಟಾರ್‌ಸೈಕಲ್ ಕದ್ದಿದ್ದಕ್ಕಾಗಿ ಇಬ್ಬರು ಪುರುಷರನ್ನು ಕೆಲವರು ಥಳಿಸಿ ಮೂತ್ರ ವಿಸರ್ಜನೆ ಮಾಡಿದ್ದರು. ಇಬ್ಬರು ಊರಿನ ಜಾತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ