Watch ರೈಲಿನ ಕಿಟಕಿ ಮೂಲಕ ಫೋನ್ ಕಸಿಯಲೆತ್ನಿಸಿದವನ ಕೈ ಹಿಡಿದೆಳೆದ ಪ್ರಯಾಣಿಕ; ಬಿಹಾರದಲ್ಲಿ ಕಳ್ಳನಿಗೆ ತಕ್ಕ ಶಾಸ್ತಿ

ಸುಮಾರು 10 ಕಿಮಿಗಳಷ್ಟು ದೂರ ಆತ ರೈಲಿನ ಕಿಟಕಿ ಬದಿಯಲ್ಲಿ ನೇತಾಡುತ್ತಾ ಪ್ರಯಾಣಿಸಿದ್ದಾನೆ. ಕೊನೆಗೆ ಖಗರಿಯಾ ಬಳಿ ಬಂದಾಗ ಆತನನ್ನು ಬಿಡಲಾಯಿತು

Watch ರೈಲಿನ ಕಿಟಕಿ ಮೂಲಕ ಫೋನ್ ಕಸಿಯಲೆತ್ನಿಸಿದವನ ಕೈ ಹಿಡಿದೆಳೆದ ಪ್ರಯಾಣಿಕ; ಬಿಹಾರದಲ್ಲಿ ಕಳ್ಳನಿಗೆ ತಕ್ಕ ಶಾಸ್ತಿ
ಬಿಹಾರದ ಫೋನ್ ಕಳ್ಳ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 15, 2022 | 9:56 PM

ಪಾಟ್ನಾ: ರೈಲು ಪ್ರಯಾಣಿಕರ ಬಳಿಯಿಂದ ಕಿಟಕಿಯ ಮೂಲಕ ಮೊಬೈಲ್ ಫೋನ್ ಕಸಿದುಕೊಳ್ಳಲು ವ್ಯಕ್ತಿಯೊಬ್ಬ ಯತ್ನಿಸಿದ್ದು ಈ ಕೃತ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 14 ರಂದು ಈ ಘಟನೆ ಬಿಹಾರದಲ್ಲಿ (Bihar) ನಡೆದಿದ್ದು, ಮೊಬೈಲ್ ಚೋರ ಪ್ರಯಾಣಿಕನ ಮೊಬೈಲ್ ಕಸಿಯಲು ಯತ್ನಿಸಿದ್ದಾನೆ. ರೈಲು ಬೇಗುಸರಾಯ್‌ನಿಂದ ಖಗರಿಯಾಗೆ ಹೋಗುತ್ತಿದ್ದಾಗ ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಮೊಬೈಲ್ ಕಸಿಯಲು ರೈಲಿನ ಕಿಟಕಿಯೊಳಗೆ ಕೈ ಹಾಕಿದ್ದಾನೆ. ಆದರೆ ಎಚ್ಚೆತ್ತ ಪ್ರಯಾಣಿಕರು ಅವನ ಕೈಯನ್ನು ಹಿಡಿದುಕೊಂಡನು. ಆಮೇಲೆ ಅವನ ಎರಡೂ ಕೈಗಳನ್ನು ಹಿಡಿದುಕೊಂಡಿದ್ದು ಆತ ಕಿಟಕಿಯಲ್ಲಿ ನೇತಾಡುವಂತೆ ಮಾಡಿದರು. ರೈಲು ಚಲಿಸುತ್ತಿದ್ದಂತೆ ಆತ ಕೈ ಬಿಡುವಂತೆ ಮನವಿ ಮಾಡಿದನು. ರೈಲು ಸ್ವಲ್ಪ ದೂರ ಪ್ರಯಾಣಿಸಿದ ನಂತರ ಪ್ರಯಾಣಿಕರು ಆತನ ಕೈ ಬಿಟ್ಟಿದ್ದಾರೆ.

ಸುಮಾರು 10 ಕಿಮಿಗಳಷ್ಟು ದೂರ ಆತ ರೈಲಿನ ಕಿಟಕಿ ಬದಿಯಲ್ಲಿ ನೇತಾಡುತ್ತಾ ಪ್ರಯಾಣಿಸಿದ್ದಾನೆ. ಕೊನೆಗೆ ಖಗರಿಯಾ ಬಳಿ ಬಂದಾಗ ಆತನನ್ನು ಬಿಡಲಾಯಿತು. ತಕ್ಷಣವೇ ಆತ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಈ ಕಳ್ಳ ತಪ್ಪಿಸಿಕೊಂಡಿದ್ದು, ಜೂನ್‌ನಲ್ಲಿ ಇಂತದ್ದೇ ವಿಡಿಯೊವೊಂದು ವೈರಲ್ ಆಗಿತ್ತು. ಆ ವಿಡಿಯೊದಲ್ಲಿದ್ದ ಕಳ್ಳ ತುಂಬಾನೇ ವೇಗವಾಗಿದ್ದ. ಆತನನ್ನು ಜನರು ಹೊಸ ಸ್ಪೈಡರ್ ಮ್ಯಾನ್ ಎಂದಿದ್ದರು. ಬಿಹಾರದ ರೈಲಿನೊಳಗಿಂದ ಚಿತ್ರೀಕರಿಸಲಾದ ಆ ವಿಡಿಯೊದಲ್ಲಿ ಸೇತುವೆಯ ಮೇಲೆ ಕುಳಿತಿದ್ದ ವ್ಯಕ್ತಿ ಕಿಟಕಿಯ ಮೂಲಕ ಪ್ರಯಾಣಿಕರೊಬ್ಬರ ಕೈಚೀಲವನ್ನು ಕಸಿಯುವುದನ್ನು ತೋರಿಸುತ್ತದೆ. ಜೂನ್‌ನಲ್ಲಿ, ಇದೇ ರೀತಿಯ ಕಸಿದುಕೊಳ್ಳುವ ಪ್ರಯತ್ನವು ಬಿಹಾರದ ಕತಿಹಾರ್ ರೈಲು ನಿಲ್ದಾಣದ ಬಳಿ ನಡೆದಿತ್ತು. ಈ ಮಹಿಳಾ ಪೊಲೀಸ್ ಗಂಭೀರ ಗಾಯಗೊಂಡಿದ್ದರು. ನಾವಡಾದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಆರತಿ ಕುಮಾರಿ ತನ್ನ ಮೊಬೈಲ್ ಫೋನ್ ಅನ್ನು ಕೈಯಲ್ಲಿ ಹಿಡಿದುಕೊಂಡು ಬಾಗಿಲಿನ ಹತ್ತಿರ ನಿಂತಿದ್ದಾಗ ನಿಲ್ದಾಣದ ಬಳಿ ರೈಲು ನಿಧಾನಗೊಂಡಾಗ ಆಕೆಯ ಮೊಬೈಲ್ ಹಿಡಿದೆಳೆದಿದ್ದಾರೆ. ಆಕೆ ಹಿಡಿತ ಬಿಡದೇ ಇದ್ದಾಗ ಆ ವ್ಯಕ್ತಿಗಳು ಆಕೆಯನ್ನು ರೈಲಿನಿಂದ ಹೊರಗೆಳೆದಿದ್ದರು.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ