ಮಗಳ ಮದುವೆ, ಕಾರಿನ ಸನ್​ರೂಫ್​ನಿಂದ ಜನರಿಗೆ ಸ್ವಾಗತ ಕೋರುತ್ತಾ ತನ್ನ ಚಾಲಕನಿಗೆ ಒದ್ದ ಶಾಸಕ ಅನಂತ್ ಸಿಂಗ್

ಬಿಹಾರ ಶಾಸಕ ಅನಂತ್ ಸಿಂಗ್ ಮಗಳ ಮದುವೆ ಸಂಭ್ರಮದಲ್ಲಿ ತಮ್ಮ ಚಾಲಕನಿಗೆ ಒದ್ದ ವಿಡಿಯೋ ಸಖತ್ ವೈರಲ್ ಆಗಿದೆ. ಸನ್‌ರೂಫ್‌ನಿಂದ ಹೊರಬಂದು ಜನರಿಗೆ ಸ್ವಾಗತ ಕೋರುವಾಗ ಶಾಸಕ ಅನಂತ್ ಸಿಂಗ್ ಚಾಲಕನಿಗೆ ಕಾಲಿನಿಂದ ಒದ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಶಾಸಕರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಾಟ್ನಾದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ.

ಮಗಳ ಮದುವೆ,  ಕಾರಿನ ಸನ್​ರೂಫ್​ನಿಂದ ಜನರಿಗೆ ಸ್ವಾಗತ ಕೋರುತ್ತಾ ತನ್ನ ಚಾಲಕನಿಗೆ ಒದ್ದ ಶಾಸಕ ಅನಂತ್ ಸಿಂಗ್
ಅನಂತ್ ಸಿಂಗ್

Updated on: Nov 27, 2026 | 9:10 AM

ಪಾಟ್ನಾ, ನವೆಂಬರ್ 27: ಬಿಹಾರದ ಮೋಕಾಮಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮ ಮಗಳ ಮದುವೆ ಸಮಾರಂಭದಲ್ಲಿ ಕಾರಿನ ಸನ್‌ರೂಫ್‌ನಿಂದ ಹೊರಬಂದು ಅತಿಥಿಗಳಿಗೆ ಕೈಬೀಸಿ ಸ್ವಾಗತಿಸುತ್ತಿದ್ದ ವೇಳೆ, ಚಾಲಕನಿಗೆ ಒದ್ದಿರುವ ವಿಡಿಯೋ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಶಾಸಕರ ವರ್ತನೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸನ್‌ರೂಫ್‌ನಿಂದ ನಿಂತು ಚಾಲಕನಿಗೆ ಒದ್ದ ಸಿಂಗ್

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಅನಂತ್ ಸಿಂಗ್ ಅವರು ಎಸ್‌ಯುವಿ ಕಾರಿನ ಸನ್‌ರೂಫ್‌ನಿಂದ ಹೊರಬಂದು ಜನರತ್ತ ಕೈಬೀಸುತ್ತಿರುವುದು ಕಾಣಿಸುತ್ತದೆ. ಕಾರಿನ ಸುತ್ತಲೂ ಬೆಂಬಲಿಗರು ಮತ್ತು ಅತಿಥಿಗಳು ಸೇರಿದ್ದು, ಶಾಸಕರನ್ನು ನೋಡಲು ಮುಗಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರು ಚಾಲಕನ ಮೇಲೆ ಕೋಪಗೊಂಡಂತೆ ಕಾಣಿಸಿಕೊಂಡು, ಸನ್‌ರೂಫ್‌ನಿಂದಲೇ ಆತನಿಗೆ ಕಾಲಿನಿಂದ ಒದೆಯುತ್ತಾರೆ. ಈ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಎಕ್ಸ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಶಾಸಕರ ವರ್ತನೆ ಕುರಿತು ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಅದ್ಧೂರಿಯಾಗಿ ನಡೆದ ಮಗಳ ಮದುವೆ

ಅನಂತ್ ಸಿಂಗ್ ಅವರ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹ ಸಮಾರಂಭದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ನವೆಂಬರ್ 25ರಂದು ಬಿಹಾರದ ಪಾಟ್ನಾ ಜಿಲ್ಲೆಯ ನದ್ವಾನ್ ಗ್ರಾಮದಲ್ಲಿ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಸಾವಿರಾರು ಅತಿಥಿಗಳು ಭಾಗವಹಿಸಿದ್ದ ಈ ಮದುವೆಯಲ್ಲಿ ಭವ್ಯವಾದ ಊಟದ ವ್ಯವಸ್ಥೆ, ಕುದುರೆ ಓಟ ಹಾಗೂ ಐಷಾರಾಮಿ ವಾಹನಗಳ ಪ್ರದರ್ಶನವೂ ಗಮನ ಸೆಳೆದಿತ್ತು. ಮದುವೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ಚಾಲಕನಿಗೆ ಒದೆಯುತ್ತಿರುವ ದೃಶ್ಯವೂ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಅನಂತ್ ಸಿಂಗ್ ಪುತ್ರಿ ಶಿವಾಂಗಿಯ ಮದುವೆಗೆ ಜನಸಾಗರ: ಟ್ರಾಫಿಕ್ ಜಾಮ್, ಕುದುರೆ ರೇಸ್‌ ನೋಡಲು ವಿದ್ಯುತ್ ಕಂಬವೇರಿದ ಜನ

ಯಾರು ಈ ಅನಂತ್ ಸಿಂಗ್?
‘ಛೋಟೆ ಸರ್ಕಾರ್’ ಎಂದೇ ಪರಿಚಿತರಾಗಿರುವ ಅನಂತ್ ಸಿಂಗ್ ಬಿಹಾರದ ಮೋಕಾಮಾ ಕ್ಷೇತ್ರದ ಶಾಸಕ. ಬಿಹಾರ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಅವರು, ಈ ಹಿಂದೆ ಹಲವು ವಿವಾದಗಳ ಕಾರಣದಿಂದಲೂ ಸುದ್ದಿಯಲ್ಲಿದ್ದರು. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಚಾಲಕನಿಗೆ ಒದೆಯಲು ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಈ ಘಟನೆಯ ಕುರಿತು ಅನಂತ್ ಸಿಂಗ್ ಅವರ ಪ್ರತಿಕ್ರಿಯೆಯೂ ವರದಿಯಾಗಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us