ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ರಾಜಕೀಯ ಪ್ರವೇಶ, ದಿಢೀರ್ ಚರ್ಚೆ ಶುರುವಾಗಿದ್ದೇಕೆ?
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರ ರಾಜಕೀಯ ಪ್ರವೇಶದ ಬಗ್ಗೆ ಮತ್ತೆ ಗುಸುಗುಸು ಶುರುವಾಗಿದೆ. ಅವರು ಇದನ್ನು ಎಷ್ಟು ಬಾರಿ ನಿರಾಕರಿಸಿದರೂ ಈ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡುವ ಘಟನೆಗಳು ನಡೆಯುತ್ತಲೇ ಇವೆ. ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ನಾಯಕರು ಕೂಡ ಅವರನ್ನು ರಾಜಕೀಯಕ್ಕೆ ಕರೆತರುವಂತೆ ಸಿಎಂಗೆ ಕಾಲಕಾಲಕ್ಕೆ ಒತ್ತಾಯಿಸುತ್ತಿದ್ದಾರೆ.
ಬಿಹಾರದಲ್ಲಿ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ವರ್ಷದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳು ತೀವ್ರಗೊಂಡಿವೆ. ನಿಶಾಂತ್ ರಾಜಕೀಯದಿಂದ ದೂರ ಉಳಿದಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ನಾಯಕರು ಕೂಡ ಅವರನ್ನು ರಾಜಕೀಯಕ್ಕೆ ಕರೆತರುವಂತೆ ಸಿಎಂಗೆ ಕಾಲಕಾಲಕ್ಕೆ ಒತ್ತಾಯಿಸುತ್ತಿದ್ದಾರೆ. ನಿಶಾಂತ್ ಅವರ ರಾಜಕೀಯ ರಂಗಪ್ರವೇಶದ ಬಗ್ಗೆ ಊಹಾಪೋಹಗಳು ಹೆಚ್ಚಿವೆ.
ಹೋಳಿ ಹಬ್ಬದ ನಂತರ ನಿಶಾಂತ್ ರಾಜಕೀಯ ಪಾದಾರ್ಪಣೆಯ ಔಪಚಾರಿಕ ಘೋಷಣೆಯಾಗುವ ಸಾಧ್ಯತೆಗಳೂ ಇವೆ. ವರದಿಗಳ ಪ್ರಕಾರ, 48 ವರ್ಷದ ನಿಶಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆಯಾಗುವ ನಿರೀಕ್ಷೆ ಇದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ.
ನಿಶಾಂತ್ ರಾಜಕೀಯಕ್ಕೆ ಬರುವುದಿಲ್ಲ ಎಂದು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದ್ದಾರೆ. ಸಿಎಂ ನಿತೀಶ್ ಕೂಡ ಪಕ್ಷದಿಂದಲೇ ಮಗನನ್ನು ಕಣಕ್ಕಿಳಿಸುವ ಬೇಡಿಕೆಯನ್ನು ತಿರಸ್ಕರಿಸುತ್ತಿದ್ದಾರೆ. ಹೀಗಿರುವಾಗ ದಿಢೀರ್ ನಿಶಾಂತ್ ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಇಷ್ಟೊಂದು ಚರ್ಚೆ ಏಕೆ ಎಂಬ ಪ್ರಶ್ನೆ ಮೂಡಿದೆ. ವಾಸ್ತವವಾಗಿ, ನಿಶಾಂತ್ ಕುಮಾರ್ ಇತ್ತೀಚೆಗೆ ಅವರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವರ ಪೂರ್ವಜರ ಮನೆ ಭಕ್ತಿಯಾರ್‌ಪುರಕ್ಕೆ ಹೋಗಿದ್ದರು.
ಮತ್ತಷ್ಟು ಓದಿ: ನಿಮಗೆ ಬಾಗಿಲು ತೆರೆದಿದೆ ಎಂದ ಲಾಲು ಯಾದವ್ಗೆ ನಿತೀಶ್ ಕುಮಾರ್ ಹೇಳಿದ್ದೇನು?
ಈ ಕಾರ್ಯಕ್ರಮದಲ್ಲಿ ಅವರ ತಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಉಪಸ್ಥಿತರಿದ್ದರು. ರಾಜಕೀಯಕ್ಕೆ ಬರುತ್ತಿರುವ ಬಗ್ಗೆ ತಂದೆಯ ಸಮ್ಮುಖದಲ್ಲಿ ನಿಶಾಂತ್ ಅವರನ್ನು ಪ್ರಶ್ನಿಸಿದಾಗ ಅವರು ನಿರಾಕರಿಸಿದರು. ಆದರೆ, ನಿಶಾಂತ್ ಅವರ ರಾಜಕೀಯ ಚೊಚ್ಚಲ ಊಹಾಪೋಹಗಳಿಗೆ ವೇಗ ಸಿಕ್ಕಿದೆ ಎಂದು ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಗೆಲ್ಲಿಸುವಂತೆ ನಿಶಾಂತ್ ಕುಮಾರ್ ಮನವಿ ಮಾಡಿದರು.
ರಾಜಕೀಯ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳುವ ನಿಶಾಂತ್, ಬಿಹಾರ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದು, ಜೆಡಿಯು ಅವರನ್ನು ಗೆಲ್ಲಿಸುವ ಮೂಲಕ ನಿತೀಶ್ ಕುಮಾರ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವಂಶಾಡಳಿತದ ಕಟ್ಟಾ ವಿರೋಧಿ ಎಂದೇ ಬಿಂಬಿತವಾಗಿರುವ ಸಿಎಂ ನಿತೀಶ್ ಕೂಡ ಪಕ್ಷದ ಮುಖಂಡರ ಬೇಡಿಕೆಯನ್ನು ತಿರಸ್ಕರಿಸುತ್ತಲೇ ಬಂದಿದ್ದು, ಈಗ ಅವರ ವಯಸ್ಸು ಹೆಚ್ಚುತ್ತಿರುವ ಹಾಗೂ ಪಕ್ಷದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿಶಾಂತ್ ಪದಗ್ರಹಣಕ್ಕೆ ಸಮ್ಮತಿ ನೀಡಬಹುದು ಎನ್ನಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ