ವಿಮಾನ ಹಾರಾಟದ ವೇಳೆ ಪೈಲಟ್​ಗೆ ಹೃದಯಾಘಾತ; ನಾಗ್ಪುರದಲ್ಲಿ ಬಾಂಗ್ಲಾ ವಿಮಾನ ತುರ್ತು ಭೂಸ್ಪರ್ಶ

Biman Bangladesh plane | ಇಂದು 126 ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ವಿಮಾನದ ಪೈಲಟ್​ಗೆ ಹೃದಯಾಘಾತ ಆಗಿದ್ದರಿಂದ ಸಮೀಪದ ನಾಗ್ಪುರ ಏರ್​ಪೋರ್ಟ್​ನಲ್ಲಿ ಮಧ್ಯಾಹ್ನ 11.40ಕ್ಕೆ ತುರ್ತು ಭೂಸ್ಪರ್ಶ ಮಾಡಿದೆ.

ವಿಮಾನ ಹಾರಾಟದ ವೇಳೆ ಪೈಲಟ್​ಗೆ ಹೃದಯಾಘಾತ; ನಾಗ್ಪುರದಲ್ಲಿ ಬಾಂಗ್ಲಾ ವಿಮಾನ ತುರ್ತು ಭೂಸ್ಪರ್ಶ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 27, 2021 | 6:40 PM

ನಾಗ್ಪುರ: ಮಸ್ಕತ್​ನಿಂದ ಢಾಕಾಗೆ ತೆರಳುತ್ತಿದ್ದ ಬಿಮನ್ ಬಾಂಗ್ಲಾದೇಶ ವಿಮಾನದ (Biman Bangladesh Plane) ಪೈಲಟ್​ಗೆ ವಿಮಾನ ಹಾರಾಟದ ವೇಳೆಯೇ ಹೃದಯಾಘಾತ ಉಂಟಾಗಿದೆ. ಹೀಗಾಗಿ, ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದೆ. ಇಂದು 126 ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬೋಯಿಂಗ್ ವಿಮಾನದ ಪೈಲಟ್​ಗೆ ಹೃದಯಾಘಾತ ಆಗಿದ್ದರಿಂದ ಸಮೀಪದ ನಾಗ್ಪುರ ಏರ್​ಪೋರ್ಟ್​ನಲ್ಲಿ ಮಧ್ಯಾಹ್ನ 11.40ಕ್ಕೆ ತುರ್ತು ಭೂಸ್ಪರ್ಶ ಮಾಡಿದೆ ಎಂದು ಏರ್​ಪೋರ್ಟ್​ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದ ಪೈಲಟ್ ಅನ್ನು ನಾಗ್ಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯ್ಪುರದ ಬಳಿ ವಿಮಾನ ತೆರಳುತ್ತಿದ್ದಂತೆ ಪೈಲಟ್​ಗೆ ಹೃದಯಾಘಾತ ಉಂಟಾಗಿದೆ. ಹೀಗಾಗಿ, ಕೂಡಲೇ ಕೊಲ್ಕತ್ತಾದ ಎಟಿಸಿಯನ್ನು ಸಂಪರ್ಕ ಮಾಡಲಾಯಿತು. ಬಳಿಕ ಸಮೀಪದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.

ಕೊವಿಡ್​ನಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಕೆಲವು ದೇಶಗಳಲ್ಲಿ ಇದೀಗ ಮತ್ತೆ ಆರಂಭವಾಗಿದೆ. ಬಿಮನ್ ಬಾಂಗ್ಲಾದೇಶ ವಿಮಾನ ಕೂಡ ಕೆಲವು ದಿನಗಳಿಂದ ಭಾರತಕ್ಕೆ ಸಂಚಾರ ಸೇವೆಯನ್ನು ಆರಂಭಿಸಿದೆ. ಕೊವಿಡ್​ನಿಂದ ಬಾಂಗ್ಲಾದೇಶ ಮತ್ತು ಭಾರತದ ನಡುವೆ ವಿಮಾನ ಸಂಚಾರ ಸ್ಥಗಿತವಾಗಿತ್ತು.

ಹೃದಯಾಘಾತಕ್ಕೆ ಒಳಗಾಗಿದ್ದ ಪೈಲಟ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಇದನ್ನೂ ಓದಿ: Kabul Blast: ಕಾಬೂಲ್ ವಿಮಾನ ನಿಲ್ದಾಣದಲ್ಲಿ 3ನೇ ಬಾಂಬ್ ಸ್ಫೋಟ, ಅಮೆರಿಕ ಯೋಧರ ಸಾವಿನ ಶಂಕೆ

ಅಫ್ಘಾನಿಸ್ತಾನದಿಂದ ಸ್ಥಳಾಂತರದ ವೇಳೆ ಜನಿಸಿದ ಮಗುವಿಗೆ ವಿಮಾನದ ಕರೆ ಚಿಹ್ನೆ ರೀಚ್ ಎಂದು ನಾಮಕರಣ

(Biman Bangladesh Pilot Suffers Heart Attack Mid-Air Flight Makes Emergency Landing in Nagpur)

Published On - 6:38 pm, Fri, 27 August 21