ಅಂಬೇಡ್ಕರ್ ವಿವಾದದ ಕುರಿತು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಂದ ಸ್ವಾರ್ಥ ರಾಜಕಾರಣ; ಮಾಯಾವತಿ ವಾಗ್ದಾಳಿ

ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಇಂದು ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎರಡೂ ಪಕ್ಷಗಳು 'ಸ್ವಾರ್ಥ ರಾಜಕಾರಣ'ದಲ್ಲಿ ತೊಡಗಿದ್ದು, ಬಿಆರ್‌ ಅಂಬೇಡ್ಕರ್‌ ಅವರ ಘನತೆಗೆ ಧಕ್ಕೆ ತರಲು ಬಯಸುತ್ತಿವೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಯಾವತಿ ಅಂಬೇಡ್ಕರ್‌ರ ವಿವಾದದ ಬಗ್ಗೆ ಕಾಂಗ್ರೆಸ್‌ನ ನಿಲುವನ್ನು ‘ಶುದ್ಧ ವಂಚನೆ’ ಮತ್ತು ‘ಸ್ವಾರ್ಥದ ರಾಜಕಾರಣ’ ಎಂದು ಕರೆದಿದ್ದಾರೆ.

ಅಂಬೇಡ್ಕರ್ ವಿವಾದದ ಕುರಿತು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಂದ ಸ್ವಾರ್ಥ ರಾಜಕಾರಣ; ಮಾಯಾವತಿ ವಾಗ್ದಾಳಿ
Mayawati
Follow us
ಸುಷ್ಮಾ ಚಕ್ರೆ
|

Updated on:Dec 22, 2024 | 4:37 PM

ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಎರಡೂ ಪಕ್ಷಗಳು ಬಿ.ಆರ್ ಅಂಬೇಡ್ಕರ್ ಹೆಸರಿನಲ್ಲಿ ಸ್ವಾರ್ಥ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಡಾ. ಬಿ.ಆರ್​. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳ ಕುರಿತು ಜನರಲ್ಲಿ ಆಕ್ರೋಶವಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಯಾವಾಗಲೂ ಅಂಬೇಡ್ಕರ್ ಅವರನ್ನು ‘ನಿರ್ಲಕ್ಷಿಸಿದೆ’ ಎಂದು ಅವರು ಟೀಕಿಸಿದ್ದಾರೆ.

ಮಾಯಾವತಿ ಅಂಬೇಡ್ಕರ್‌ರ ವಿವಾದದ ಬಗ್ಗೆ ಕಾಂಗ್ರೆಸ್‌ನ ನಿಲುವನ್ನು ‘ಶುದ್ಧ ವಂಚನೆ’ ಮತ್ತು ‘ಸ್ವಾರ್ಥದ ರಾಜಕಾರಣ’ ಎಂದು ಕರೆದಿದ್ದಾರೆ. ಎಲ್ಲಾ ಪಕ್ಷಗಳು ಬಿಎಸ್‌ಪಿಯನ್ನು ಕೆಡಿಸಲು ಮತ್ತು ಬಿ.ಆರ್ ಅಂಬೇಡ್ಕರ್ ಅವರ ಘನತೆಗೆ ಧಕ್ಕೆ ತರುವ ಷಡ್ಯಂತ್ರದಲ್ಲಿ ತೊಡಗಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್ ವಿವಾದವನ್ನು ಬೇರೆಡೆ ಸೆಳೆಯಲು ಬಿಜೆಪಿ ಸಂಸತ್ ಗಲಾಟೆಯನ್ನು ಬಳಸಿಕೊಳ್ಳುತ್ತಿದೆ; ರಾಹುಲ್ ಗಾಂಧಿ ಆರೋಪ

ಅಂಬೇಡ್ಕರ್ ಕುರಿತ ಹೇಳಿಕೆಗೆ ಅಮಿತ್ ಶಾ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 24ರಂದು ದೇಶಾದ್ಯಂತ ಬಿಎಸ್‌ಪಿ ಪ್ರತಿಭಟನೆ ನಡೆಸಲಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಈ ಹಿಂದೆ ಹೇಳಿದ್ದರು.

ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ವೇಳೆ, ಅಮಿತ್ ಶಾ ಡಾ. ಬಿ.ಆರ್​. ಅಂಬೇಡ್ಕರ್ ಬಗ್ಗೆ ನೀಡಿದ ಹೇಳಿಕೆಗಳು ರಾಜಕೀಯ ಗದ್ದಲಕ್ಕೆ ಕಾರಣವಾಯಿತು. ನಂತರ, ಅಮಿತ್ ಶಾ ಪತ್ರಿಕಾಗೋಷ್ಠಿಯನ್ನು ನಡೆಸಿ, ಕಾಂಗ್ರೆಸ್ ಸತ್ಯಗಳನ್ನು ತಿರುಚಿದೆ ಮತ್ತು ರಾಜ್ಯಸಭೆಯಲ್ಲಿ ತಮ್ಮ ಹೇಳಿಕೆಗಳನ್ನು ತಿರುಚಿದೆ ಎಂದು ಆರೋಪಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Sun, 22 December 24