ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಬಾನ್ಸುರಿ ಸ್ವರಾಜ್​ ಕಣ್ಣಿಗೆ ಗಾಯ, ಬ್ಯಾಂಡೇಜ್​ ಹಾಕಿಕೊಂಡು ದೇವಸ್ಥಾನದಲ್ಲಿ ಪೂಜೆ

ನವದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಾನ್ಸುರಿ ಸ್ವರಾಜ್ ಚುನಾವಣಾ ಪ್ರಚಾರದ ವೇಳೆ ಗಾಯಗೊಂಡಿದ್ದಾರೆ. ಅವರಿಗೆ ಕಣ್ಣಿಗೆ ಗಂಭೀರವಾದ ಗಾಯವಾಗಿದ್ದರೂ ಬ್ಯಾಂಡೇಜ್​ ಹಾಕಿಕೊಂಡೇ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಬಾನ್ಸುರಿ ಅವರು ತಮ್ಮ ಕಣ್ಣಿನ ಚಿಕಿತ್ಸೆ ನಂತರ ವೈದ್ಯರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿಕಿತ್ಸೆ ಮತ್ತು ಆರೈಕೆಗಾಗಿ ಮೋತಿ ನಗರದ ಡಾ.ನೀರಜ್ ವರ್ಮಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಬಾನ್ಸುರಿ ಸ್ವರಾಜ್​ ಕಣ್ಣಿಗೆ ಗಾಯ, ಬ್ಯಾಂಡೇಜ್​ ಹಾಕಿಕೊಂಡು ದೇವಸ್ಥಾನದಲ್ಲಿ ಪೂಜೆ
ಬಾನ್ಸುರಿ

Updated on: Apr 10, 2024 | 3:09 PM

ನವದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾನ್ಸುರಿ ಸ್ವರಾಜ್(Bansuri Swaraj) ಚುನಾವಣಾ ಪ್ರಚಾರದ ವೇಳೆ ಗಾಯಗೊಂಡಿದ್ದಾರೆ. ಅವರಿಗೆ ಕಣ್ಣಿಗೆ ಗಂಭೀರವಾದ ಗಾಯವಾಗಿದ್ದರೂ ಬ್ಯಾಂಡೇಜ್​ ಹಾಕಿಕೊಂಡೇ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಬಾನ್ಸುರಿ ಅವರು ತಮ್ಮ ಕಣ್ಣಿನ ಚಿಕಿತ್ಸೆ ನಂತರ ವೈದ್ಯರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿಕಿತ್ಸೆ ಮತ್ತು ಆರೈಕೆಗಾಗಿ ಮೋತಿ ನಗರದ ಡಾ.ನೀರಜ್ ವರ್ಮಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಇಂದು ಚುನಾವಣಾ ಪ್ರಚಾರದ ವೇಳೆ ನನ್ನ ಕಣ್ಣಿಗೆ ಸ್ವಲ್ಪ ಗಾಯವಾಗಿದೆ ಎಂದು ಬಾನ್ಸುರಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕಣ್ಣಿಗೆ ಗಾಯವಾದ ನಂತರವೂ ಬಾನ್ಸುರಿ ಸ್ವರಾಜ್ ಅವರು ಸಾರ್ವಜನಿಕ ಸಂಪರ್ಕ ಅಭಿಯಾನವನ್ನು ನಡೆಸಿದರು.

ಬಾನ್ಸುರಿ ಸ್ವರಾಜ್ ಅವರು ರಮೇಶ್ ನಗರದ ಸನಾತನ ಧರ್ಮ ಮಂದಿರದಲ್ಲಿ ಆಯೋಜಿಸಿದ್ದ ಮಾತಾ ಕಿ ಚೌಕಿಯಲ್ಲಿ ಭಾಗವಹಿಸಿದ್ದರು. ಇಲ್ಲಿ ದುರ್ಗೆಯನ್ನು ಪೂಜಿಸಿ ಆಶೀರ್ವಾದ ಪಡೆದರು.

ಮತ್ತಷ್ಟು ಓದಿ: Lok Sabha Election 2024: ಎಂಟು ಅಭ್ಯರ್ಥಿಗಳ 10ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ನವದೆಹಲಿ ಕ್ಷೇತ್ರದಿಂದ ಮೀನಾಕ್ಷಿ ಲೇಖಿ ಅವರ ಟಿಕೆಟ್ ಅನ್ನು ಬಿಜೆಪಿ ರದ್ದುಗೊಳಿಸಿದೆ ಮತ್ತು ಅವರ ಸ್ಥಾನದಲ್ಲಿ ಬಾನ್ಸುರಿ ಸ್ವರಾಜ್ ಅವರನ್ನು ಕಣಕ್ಕಿಳಿಸಿದೆ.

ಬಾನ್ಸುರಿ ನಿರಂತರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಾನ್ಸುರಿ ಸ್ವರಾಜ್ ಅವರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ. ಅವರು 1982 ರಲ್ಲಿ ದೆಹಲಿಯಲ್ಲಿ ಜನಿಸಿದರು. ಬಾನ್ಸುರಿ ಸ್ವರಾಜ್ ಅವರು 2007 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ಗೆ ಸೇರಿದ್ದರು, ವಕೀಲ ವೃತ್ತಿಯಲ್ಲಿ ಸುಮಾರು ಒಂದೂವರೆ ದಶಕದ ಅನುಭವ ಹೊಂದಿದ್ದಾರೆ.

ಅವರು ವಾರ್ವಿಕ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಬಿಎ (ಆನರ್ಸ್) ಪದವಿ ಪಡೆದರು. ಇದಾದ ನಂತರ, ಲಂಡನ್‌ನ ಪ್ರತಿಷ್ಠಿತ ಬಿಪಿಪಿ ಕಾನೂನು ಶಾಲೆಯಲ್ಲಿ ಬಾನ್ಸುರಿ ಕಾನೂನು ಅಧ್ಯಯನ ಮಾಡಿದರು. ಅವರು ಬ್ಯಾರಿಸ್ಟರ್ ಎಟ್ ಲಾ ಆಗಿ ಅರ್ಹತೆ ಪಡೆದರು. ನಂತರ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸೇಂಟ್ ಕ್ಯಾಥರೀನ್ ಕಾಲೇಜಿನಲ್ಲಿ ತಮ್ಮ ಮಾಸ್ಟರ್ ಆಫ್ ಸ್ಟಡೀಸ್ ಅನ್ನು ಪೂರ್ಣಗೊಳಿಸಿದರು.

ಕಳೆದ ವರ್ಷ ಬಿಜೆಪಿಯು ಬಾನ್ಸುರಿ ಸ್ವರಾಜ್ ಅವರನ್ನು ದೆಹಲಿ ರಾಜ್ಯದ ಕಾನೂನು ಘಟಕದ ರಾಜ್ಯ ಸಹ ಸಂಚಾಲಕರನ್ನಾಗಿ ಮಾಡಿತ್ತು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವರನ್ನು ಕಣಕ್ಕಿಳಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us