ಹೈದರಾಬಾದ್: ಹೈದರಾಬಾದ್ನ (Hyderabad) ಜುಬಿಲಿ ಹಿಲ್ಸ್ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ (gangrape case) ಪ್ರಕರಣದಲ್ಲಿ ಶಾಸಕರ ಪುತ್ರ ಭಾಗಿಯಾಗಿದ್ದಾನೆ ಎಂದು ತೋರಿಸುವ ವಿಡಿಯೊವನ್ನು ಬಿಜೆಪಿ ಶಾಸಕ ಎಂ ರಘುನಂದನ್ ರಾವ್ (BJP MLA M Raghunandan Rao) ಪತ್ರಕರ್ತರಿಗೆ ತೋರಿಸಿದ್ದಾರೆ. ರಾವ್ ಅವರು ಶನಿವಾರ ಸಂತ್ರಸ್ತೆ , ಆರೋಪಿಯ ಚಿತ್ರ ಮತ್ತು ವಿಡಿಯೊಗಳನ್ನು ಬಿಡುಗಡೆ ಮಾಡಿದ್ದು, ಫೋಟೊದಲ್ಲಿರುವ ಹುಡುಗ ಎಐಎಂಐಎಂ ಶಾಸಕನ ಮಗನೇ ಎಂದು ಸ್ಪಷ್ಟಪಡಿಸುವಂತೆ ಪೊಲೀಸರನ್ನು ಕೇಳಿದ್ದಾರೆ. ಕಿರು ವಿಡಿಯೊ ಪ್ರದರ್ಶಿಸಿ ತನಿಖೆ ನಡೆಸುವುದು ತನ್ನ ಕೆಲಸವಲ್ಲ ಎಂದು ಹೇಳಿದ ಅವರು, ಸಾಕ್ಷ್ಯಾಧಾರಗಳನ್ನು ನೀಡುವಂತೆ ಸವಾಲು ಹಾಕಿದ್ದರಿಂದ ನಾನು ವಿಡಿಯೊ ಮುಂದಿಟ್ಟಿದ್ದೇನೆ ಎಂದಿದ್ದಾರೆ. 10 ನಿಮಿಷದ ಆ ವಿಡಿಯೊದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಇದೆ. ಕೆಂಪು ಬಣ್ಣದ ಮರ್ಸಿಡೆಸ್ ಕಾರಿನಲ್ಲಿ ನಾಲ್ವರು ಇದ್ದರು, ಅವರನ್ನು ಪೊಲೀಸರು ಆರೋಪಿಗಳು ಎಂದು ತೋರಿಸಿಲ್ಲ ಎಂದು ಎನ್ಡಿಟಿವಿ ಜತೆ ಮಾತನಾಡಿದ ರಾವ್ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ನಡೆದಿರುವುದು ವಿಡಿಯೊದಲ್ಲಿ ಕಾಣುತ್ತದೆ. ಬಾಲಕಿಯ ಗುರುತು ಬಹಿರಂಗವಾಗ ಬಾರದು ಎಂದು ನಾನು ಆಕೆಯ ಮುಖ ತೋರಿಸುತ್ತಿಲ್ಲ. ಪೊಕ್ಸೊ ಕಾಯ್ದೆಗೆ ಸಂಬಧಪಟ್ಟಂತೆ ಎಲ್ಲ ಮುಂಜಾಗ್ರತೆ ವಹಿಸಿದ್ದೇನೆ.ಆರೋಪಿಗಳ ಮುಖ ಇದರಲ್ಲಿ ಕಾಣಬಹುದು. ಅವರು ಅಪ್ರಾಪ್ತರೇ ಅಲ್ಲವೋ ಹೌದೋ ಎಂಬುದನ್ನು ನ್ಯಾಯಾಲಯ ಅಥವಾ ಪೊಲೀಸರು ನಿರ್ಧರಿಸಲಿ. ನಾನು ಸಾಕ್ಷ್ಯಗಳನ್ನು ಪೊಲೀಸರು,ಸಾರ್ವಜನಿಕರ ಮುಂದೆ ಇರಿಸಿದ್ದೀನಿ. ಶಾಸಕರ ಮಗ ಭಾಗಿಯಾಗಿದ್ದಾನೆಯೇ ಎಂಬುದನ್ನು ಪೊಲೀಸರು ನಿರ್ಧರಿಸಲಿ ಎಂದು ರಾವ್ ಹೇಳಿದ್ದಾರೆ.
ಏತನ್ಮಧ್ಯೆ ವಿಡಿಯೊ ಶೇರ್ ಮಾಡಿದ್ದಕ್ಕೆ ರಾವ್ ವಿರುದ್ಧ ಗುಡುಗಿದ ತೆಲಂಗಾಣ ಕಾಂಗ್ರೆಸ್ ನಾಯಕ ಮಾಣಿಕಂ ಟಾಗೋರ್, ಈ ವಿಡಿಯೊ ಅವರಿಗೆ ಹೇಗೆ ಸಿಕ್ಕಿತು? ಇಂಥಾ ವಿಡಿಯೊಗಳನ್ನು ಪ್ರದರ್ಶಿಸುವ ಮೂಲಕ ಸಂತ್ರಸ್ತೆಯ ಗುರುತು ಬಹಿರಂಗ ಪಡಿಸಿದ್ದಕ್ಕಾಗಿ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದಿದ್ದಾರೆ.
Mr Rao,We don’t care about cheap TRPs
We care about victim& her family
We respect the SC
We want peace &pride for our mothers& sisters
Unlike for you, ‘Bharat Mata ki Jai’ is not just a slogan.
Every sister & mother is Bharat Mata for us.
Our fight is for truth.#HyderabadRape https://t.co/WSU8IteIns— Manickam Tagore .B??✋மாணிக்கம் தாகூர்.ப (@manickamtagore) June 4, 2022
“ತಮ್ಮ ರಕ್ತ ಸಹೋದರರಾದ ಎಂಐಎಂ+ಟಿಆರ್‌ಎಸ್ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್ ಏಕೆ ಭಯಭೀತರಾಗುತ್ತದೆ? ಪೊಲೀಸರ ಸುಳ್ಳನ್ನು ಬೆಚ್ಚಿ ಬೀಳಿಸಲು ಮತ್ತು ಹೈದರಾಬಾದ್ ಅತ್ಯಾಚಾರದಲ್ಲಿ ಶಾಸಕರ ಪುತ್ರನ ಕೈವಾಡದ ಬಗ್ಗೆ ಕ್ರಮ ಕೈಗೊಳ್ಳಲು ಪುರಾವೆಗಳನ್ನು ಹಾಕಲಾಗಿದೆ” ರಘುನಂದನ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮಾಣಿಕಂ ಟಾಗೋರ್, ನಮ್ಮ ಪಕ್ಷವು ‘ಅಗ್ಗದ ಟಿಆರ್‌ಪಿ’ಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ, ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಮತ್ತು ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಬಗ್ಗೆ ಕಾಳಜಿ ವಹಿಸುತ್ತದೆ. ನಿಮ್ಮಂತೆ ‘ಭಾರತ್ ಮಾತಾ ಕಿ ಜೈ’ ಕೇವಲ ಘೋಷಣೆಯಲ್ಲ. ಪ್ರತಿಯೊಬ್ಬ ಸಹೋದರಿ ಮತ್ತು ತಾಯಿ ನಮಗೆ ಭಾರತ ಮಾತೆಯೇ. ನಮ್ಮ ಹೋರಾಟ ಸತ್ಯಕ್ಕಾಗಿರುವುದಾಗಿ ಎಂದಿದ್ದಾರೆ.
“ನಿಮ್ಮ ರಾಜಕೀಯ ಲಾಭಕ್ಕಾಗಿ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನೀವು ತೆಲುಗು ಮಗಳ ಗುರುತನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಂಚಿಕೊಂಡಿದ್ದೀರಿ. ತೆಲಂಗಾಣದ ಮಗಳನ್ನು ಸಂಘಿಗಳು / ಟಿಆರ್‌ಎಸ್ / ಮಜ್ಲೀಸ್ ಅವಮಾನಿಸಲು ನಾವು ಬಿಡುವುದಿಲ್ಲ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ನಾವೇನೂ ಸಂಘಿಗಳು ಅಥವಾ ಮಜ್ಲೀಸ್ಗಳು ಅಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ವಕೀಲನಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಬಗ್ಗೆ ನನಗೆ ತಿಳಿದಿದೆ. ವಿಡಿಯೊದಲ್ಲಿ ಅಪ್ರಾಪ್ತ ಬಾಲಕಿಯ ಗುರುತನ್ನು ಮರೆ ಮಾಚಲಾಗಿದೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
What happened after BJP MLA Raghunandan released pictures of Victim with the Boy in Media ? ?
Trial of the Girl and her Family has begun on Social Media !
Why ? Why drag girl into Politics ? pic.twitter.com/vJGw27v0JZ
— krishanKTRS (@krishanKTRS) June 5, 2022
ಬಿಜೆಪಿ ನಾಯಕ ಬಾಲಕಿಯ ವಿಡಿಯೊವನ್ನು ಹಂಚಿಕೊಂಡ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಸಂತ್ರಸ್ತೆಯನ್ನು ದೂಷಿಸಲು ಪ್ರಾರಂಭಿಸಿದರು ಎಂದು ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ಸಂಚಾಲಕ ಕ್ರಿಶನ್ ಹೇಳಿದ್ದಾರೆ. “ಬಿಜೆಪಿ ಶಾಸಕ ರಘುನಂದನ್ ಸಂತ್ರಸ್ತೆ ಹುಡುಗನ ಜೊತೆಗಿನ ಚಿತ್ರಗಳನ್ನು ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ ನಂತರ ಏನಾಯಿತು? ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿ ಮತ್ತು ಅವಳ ಕುಟುಂಬದ ವಿಚಾರಣೆ ಪ್ರಾರಂಭವಾಗಿದೆ.ಹುಡುಗಿಯನ್ನು ರಾಜಕೀಯಕ್ಕೆ ಎಳೆಯುವುದೇಕೆ?” ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ