ಹೆಸರು ಬದಲಿಸುವುದರಿಂದ ಕಾರ್ಯ ವೈಖರಿ ಬದಲಾಗದು: I.N.D.I.A ಮೈತ್ರಿ ವಿರುದ್ಧ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ

ಲೋಕಸಭೆಯ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೂ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂಡಿಯಾ(I.N.D.I.A) ಮೈತ್ರಿಕೂಟದ ವಿರುದ್ಧ ವಿಡಿಯೋ ಮೂಲಕ ವಾಗ್ದಾಳಿ ನಡೆಸಿದ್ದು, ಹೆಸರು ಬದಲಾಯಿಸುವುದರಿಂದ ಕಾರ್ಯ ವೈಖರಿ ಬದಲಾಗದು ಎಂದು ಶೀರ್ಷಿಕೆ ನೀಡಿದ್ದಾರೆ.

ಹೆಸರು ಬದಲಿಸುವುದರಿಂದ ಕಾರ್ಯ ವೈಖರಿ ಬದಲಾಗದು: I.N.D.I.A ಮೈತ್ರಿ ವಿರುದ್ಧ ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ
ವಿದ್ಯಾರ್ಥಿ
Image Credit source: ZeeNews

Updated on: Aug 08, 2023 | 12:10 PM

ಲೋಕಸಭೆಯ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೂ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂಡಿಯಾ(I.N.D.I.A) ಮೈತ್ರಿಕೂಟದ ವಿರುದ್ಧ ವಿಡಿಯೋ ಮೂಲಕ ವಾಗ್ದಾಳಿ ನಡೆಸಿದ್ದು, ಹೆಸರು ಬದಲಾಯಿಸುವುದರಿಂದ ಕಾರ್ಯ ವೈಖರಿ ಬದಲಾಗದು ಎಂದು ಶೀರ್ಷಿಕೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ವೀಡಿಯೊದ ಮೂಲಕ ಇಂಡಿಯಾ ಮೈತ್ರಿಕೂಟವನ್ನು ಗುರಿಯಾಗಿಸಿದೆ, ಹಾಗೆಯೇ ಅಂತ್ಯದಲ್ಲಿ ಈ ವಿಡಿಯೋಗೂ ಯುಪಿಎಗೂ ಇಂಡಿಯಾ ಮೈತ್ರಿಕೂಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ಬರೆದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯಸಭೆಯಲ್ಲಿ ದೆಹಲಿ ಸರ್ಕಾರ ಹಾಗೂ  ಇಂಡಿಯಾ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಶಾಲೆಯ ತರಗತಿಯ ದೃಶ್ಯವೊಂದನ್ನು ತೋರಿಸಲಾಗಿದ್ದು, ಅದರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಯಲ್ಲಿ 100 ಕ್ಕೆ ಶೂನ್ಯ ಅಂಕ ಬಂದಿರುತ್ತದೆ, ಮನೆಗೆ ಹೋಗಿ ತಾಯಿಯ ಬಳಿ ಇದನ್ನು ಹೇಳಿದಾಗ ಒಂದು ಕೆಲಸ ಮಾಡೋಣ ನಿನ್ನ ಹೆಸರನ್ನೇ ಬದಲಾಯಿಸೋಣ ಎಂದು ಹೇಳುತ್ತಾರೆ.

ವಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ ಎನ್ನಬೇಡಿ ‘ಘಮಂಡಿಯಾ‘ ಎಂದು ಕರೆಯಿರಿ: ನರೇಂದ್ರ ಮೋದಿ

ಆಗ ವಿದ್ಯಾರ್ಥಿ ತಾನು 100 ಕ್ಕೆ 100 ಅಂಕ ಗಳಿಸಿರುವಂತೆ ಕನಸು ಕಾಣುತ್ತಾನೆ ಆಗ ಶಿಕ್ಷಕರು ಆತನನ್ನು ಎಚ್ಚರಿಸುತ್ತಾರೆ, ಆಗ ಉತ್ತರ ಪತ್ರಿಕೆಯಲ್ಲಿ 100ಕ್ಕೆ ಶೂನ್ಯ ಅಂಕವೇ ಇರುತ್ತದೆ. ಹೀಗಾಗಿ ಹೆಸರು ಬದಲಾಯಿಸುವುದರಿಂದ ಕಲಿಕೆಯಲ್ಲಿ ವ್ಯತ್ಯಾಸವೇನು ಆಗಿಲ್ಲ ಎಂಬುದರ ಬಗ್ಗೆ ಹೇಳಲಾಗಿದೆ.

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ವಿಪಕ್ಷಗಳು ಪಕ್ಷದ ಹೆಸರನ್ನು I.N.D.I.A ಎಂದು ಬದಲಾಯಿಸಿವೆ. ಬಿಜೆಪಿಯು ಈ ಮೈತ್ರಿ ಬಗ್ಗೆ ನಿರಂತರವಾಗಿ ಟೀಕಿಸುತ್ತಲೇ ಬಂದಿದೆ ಜತೆಗೆ ಪ್ರಧಾನಿ ಮೋದಿ ಇದನ್ನು ಈಸ್ಟ್​ ಇಂಡಿಯಾ ಕಂಪನಿ,  ಮುಜಾಹಿದ್ದೀನ್ ಹಾಗೂ ಪಿಎಫ್​ಐಗೆ ಹೋಲಿಕೆ ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:04 pm, Tue, 8 August 23

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us