ಮೋದಿ ಹುಟ್ಟುಹಬ್ಬ ಪ್ರಯುಕ್ತ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಷನ್ನಿಂದ ವಿಕಸಿತ ಭಾರತ ಫೆಲೋಶಿಪ್ ಆರಂಭ
ಈ ಫೆಲೋಶಿಪ್ ಭಾರತದ ಬಗ್ಗೆ ಅರ್ಥಪೂರ್ಣ ನಿರೂಪಣೆಗೆ ಕೊಡುಗೆ ನೀಡಲು ಉದಯೋನ್ಮುಖ ಪ್ರತಿಭೆಗಳು, ಅನುಭವಿ ಮತ್ತು ಅಸಾಧಾರಣ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ರಾಷ್ಟ್ರದ ಒಳಗೆ ಮತ್ತು ಜಗತ್ತಿನಾದ್ಯಂತದ ಪರಿಣಿತರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಪ್ರಕಾಶನ ಮತ್ತು ಜ್ಞಾನ ಕೇಂದ್ರ ಮತ್ತು ‘ವಿಕಸಿತ್ ಭಾರತ್ ಫೆಲೋಶಿಪ್’ ಅನ್ನು ಪ್ರಾರಂಭಿಸಿದೆ. ಈ ಫೌಂಡೇಶನ್‌ನಿಂದ ಒಟ್ಟು 25 ಫೆಲೋಶಿಪ್‌ಗಳನ್ನು ನೀಡಲಾಗುವುದು. ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, ಬ್ಲೂಕ್ರಾಫ್ಟ್ ಅಸೋಸಿಯೇಟ್ ಫೆಲೋಶಿಪ್, ಬ್ಲೂಕ್ರಾಫ್ಟ್ ಸೀನಿಯರ್ ಫೆಲೋಶಿಪ್ ಮತ್ತು ಬ್ಲೂಕ್ರಾಫ್ಟ್ ಡಿಸ್ಟಿಂಗ್ವಿಶ್ಡ್ ಫೆಲೋಶಿಪ್.
ಈ ಫೆಲೋಶಿಪ್ ನಾನ್-ಫಿಕ್ಷನ್ ಪುಸ್ತಕಗಳು, ಲೇಖನಗಳು, ಸಂಶೋಧನಾ ಪ್ರಬಂಧಗಳು, ಸಾಮಾಜಿಕ ವಿಷಯಗಳು ಮತ್ತು ಮೌಲ್ಯಗಳನ್ನು ತಿಳಿಸುವ ಮಕ್ಕಳ ಸಾಹಿತ್ಯ, ಕಾಫಿ ಟೇಬಲ್ ಪುಸ್ತಕಗಳು ಮತ್ತು ಕೇಸ್ ಸ್ಟಡೀಸ್ ಸೇರಿದಂತೆ ವಿವಿಧ ಸ್ವರೂಪಗಳ ಮೂಲಕ ರಾಷ್ಟ್ರದ ವೈವಿಧ್ಯಮಯ ಪ್ರಯಾಣಗಳನ್ನು ದಾಖಲಿಸಲು ಪ್ರಯತ್ನಿಸುತ್ತದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 1ರೊಳಗೆ bluekraft.in/fellowship ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ದೇಶಾದ್ಯಂತ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ; ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಬ್ಲೂಕ್ರಾಫ್ಟ್ ಅಸೋಸಿಯೇಟ್ ಫೆಲೋಶಿಪ್ ಮೂಲಕ ಮಾಸಿಕ 75,000 ಸ್ಟೈಫಂಡ್ ನೀಡಲಾಗುತ್ತದೆ. ಬ್ಲೂಕ್ರಾಫ್ಟ್ ಹಿರಿಯ ಫೆಲೋ 1,25,000 ಮಾಸಿಕ ಸ್ಟೈಫಂಡ್ ಅನ್ನು ಸ್ವೀಕರಿಸುತ್ತಾರೆ. ಮತ್ತು ಬ್ಲೂಕ್ರಾಫ್ಟ್ ಡಿಸ್ಟಿಂಗ್ವಿಶ್ಡ್ ಫೆಲೋ ಒಂದು ವರ್ಷದ ಅವಧಿಯಲ್ಲಿ 2,00,000 ರೂ. ಮಾಸಿಕ ಸ್ಟೈಫಂಡ್ ಅನ್ನು ಪಡೆಯುತ್ತಾರೆ.
On the occasion of PM Narendra Modi ji’s Birthday, @BlueKraft is delighted to announce the following:
Viksit Bharat Fellowship Programme to encourage writing & creative talent across various domains. BlueKraft also launches its publication division.https://t.co/5MxsX1mPsj 1/3
— Akhilesh Mishra (@amishra77) September 17, 2024
ಈ ಫೆಲೋಶಿಪ್ ಪಡೆಯುವವರು ಸಂಶೋಧನೆ ಮತ್ತು ಬರವಣಿಗೆಗಾಗಿ ವಿಶೇಷ ಸಂಪನ್ಮೂಲಗಳೊಂದಿಗೆ ಅನುಭವಿ ವಿಷಯ ತಜ್ಞರು, ವೃತ್ತಿಪರರು ಮತ್ತು ಚಿಂತನೆಯ ನಾಯಕರೊಂದಿಗೆ ಮಾರ್ಗದರ್ಶನ ಮತ್ತು ಅವಕಾಶಗಳಿಗೆ ಪ್ರವೇಶವನ್ನು ಪಡೆಯುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. ಪೂರ್ಣಗೊಂಡ ಕೃತಿಗಳನ್ನು ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಪ್ರಕಟಿಸಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ