ಪ್ರಧಾನಿ ಮೋದಿಗೆ ಖರ್ಗೆ ಪತ್ರ ಬರೆದ ನಂತರವೂ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಗೇಲಿ ಮಾಡಿದ ಕೇಂದ್ರ ಸಚಿವ

“ಅವರು (ಕಾಂಗ್ರೆಸ್) ಅವರನ್ನು (ಗಾಂಧಿ) (ಲೋಕಸಭೆಯಲ್ಲಿ) ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದರು. ಆದರೆ ‘ಪಪ್ಪು’, ‘ಪಪ್ಪು’ ಹೀ ರಹಾ (ಪಪ್ಪು ಪಪ್ಪುವಾಗಿಯೇ ಉಳಿದುಬಿಟ್ಟರು). ಇತರರಿಗೆ ಉಪನ್ಯಾಸ ನೀಡುವ ಬದಲು ಮಲ್ಲಿಕಾರ್ಜುನ ಖರ್ಗೆ ‘ಪಪ್ಪು’ಗೆ ಕಲಿಸಬೇಕು’’ ಎಂದು ಎಎನ್ಐ ಜತೆ ಮಾತನಾಡಿದ ಕೇಂದ್ರ ಸಚಿವ ಬಿಟ್ಟು ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಖರ್ಗೆ ಪತ್ರ ಬರೆದ ನಂತರವೂ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಗೇಲಿ ಮಾಡಿದ ಕೇಂದ್ರ ಸಚಿವ
ರವನೀತ್ ಸಿಂಗ್ ಬಿಟ್ಟು
Follow us
ರಶ್ಮಿ ಕಲ್ಲಕಟ್ಟ
|

Updated on: Sep 17, 2024 | 8:49 PM

ದೆಹಲಿ ಸೆಪ್ಟೆಂಬರ್ 17: ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಬಿಜೆಪಿಯ ಕೆಲವು ಸದಸ್ಯರು ಇತ್ತೀಚೆಗೆ ನೀಡಿರುವ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಖರ್ಗೆ ಪತ್ರ ಬರೆದ ಬೆನ್ನಲ್ಲೇ,  ರಾಹುಲ್ ಗಾಂಧಿಯನ್ನು ನಂಬರ್ ಒನ್ ಭಯೋತ್ಪಾದಕ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಮತ್ತೊಮ್ಮೆ ಪಪ್ಪು ಎಂದು ಗೇಲಿ ಮಾಡಿದ್ದಾರೆ.

“ಅವರು (ಕಾಂಗ್ರೆಸ್) ಅವರನ್ನು (ಗಾಂಧಿ) (ಲೋಕಸಭೆಯಲ್ಲಿ) ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದರು. ಆದರೆ ‘ಪಪ್ಪು’, ‘ಪಪ್ಪು’ ಹೀ ರಹಾ (ಪಪ್ಪು ಪಪ್ಪುವಾಗಿಯೇ ಉಳಿದುಬಿಟ್ಟರು). ಇತರರಿಗೆ ಉಪನ್ಯಾಸ ನೀಡುವ ಬದಲು ಮಲ್ಲಿಕಾರ್ಜುನ ಖರ್ಗೆ ‘ಪಪ್ಪು’ಗೆ ಕಲಿಸಬೇಕು’’ ಎಂದು ಎಎನ್ಐ ಜತೆ ಮಾತನಾಡಿದ ಬಿಟ್ಟು ಹೇಳಿದ್ದಾರೆ. ನನ್ನ ಕಾಳಜಿಯು ರಾಜಕಾರಣಿಯಾಗಿ ಅಲ್ಲ, ಆದರೆ ಸಿಖ್ ಆಗಿ ಎಂದು ಬಿಟ್ಟು ಹೇಳಿದ್ದಾರೆ.

ಬಿಟ್ಟು ಹೇಳಿದ್ದೇನು?

ರಾಹುಲ್ ಗಾಂಧಿಯವರು ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್‌ಗೆ ಮೂರು ದಿನಗಳ ಭೇಟಿ ನೀಡಿದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅವರ ಚೊಚ್ಚಲ ವಿದೇಶಿ ಪ್ರವಾಸದಲ್ಲಿ ರಾಹುಲ್, ಸಿಖ್ ಸಮುದಾಯದ ಬಗ್ಗೆಯೂ ಮಾತನಾಡಿದ್ದಾರೆ .

“ಈ ಹೋರಾಟವು ಭಾರತದಲ್ಲಿ ಸಿಖ್‌ಗೆ ಪೇಟವನ್ನು ಧರಿಸಲು ಅನುಮತಿಸುವುದೇ ಅಥವಾ ಸಿಖ್‌ಗೆ ಭಾರತದಲ್ಲಿ ಕಡಾವನ್ನು ಧರಿಸಲು ಅನುಮತಿಸುವುದೇ ಅಥವಾ ಸಿಖ್‌ಗೆ ಗುರುದ್ವಾರಕ್ಕೆ ಹೋಗಲು ಅನುಮತಿಸುವುದೇ ಎಂಬುದಾಗಿದೆ. ಇದು ಎಲ್ಲ ಧರ್ಮಗಳ ಹೋರಾಟವಾಗಿದೆ” ಎಂದು ರಾಹುಲ್ ಗಾಂಧಿ ವರ್ಜೀನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸಿಜೆಐ ಮನೆಯಲ್ಲಿ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದಕ್ಕೆ ಕಾಂಗ್ರೆಸ್ ಟೀಕೆ; ವಿವಾದ ಬಗ್ಗೆ ಮೌನ ಮುರಿದ ಮೋದಿ

ಮಾರ್ಚ್‌ನಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ಬಿಟ್ಟು ರಾಹುಲ್ ಹೇಳಿಕೆಗೆ ಕಿಡಿ ಕಾರಿದ್ದು “ಆ ಬಾಂಬ್‌ಗಳನ್ನು ತಯಾರಿಸುವವರು ಅವನನ್ನು (ಗಾಂಧಿ) ಬೆಂಬಲಿಸುತ್ತಿದ್ದರೆ, ಅವನು ನಂಬರ್ ಒನ್ ಭಯೋತ್ಪಾದಕ. ಅವನು ತನ್ನ ದೇಶವನ್ನು ಹೆಚ್ಚು ಪ್ರೀತಿಸುವುದಿಲ್ಲ ಏಕೆಂದರೆ ಅವನು ವಿದೇಶಕ್ಕೆ ಹೋಗಿ ಎಲ್ಲವನ್ನೂ ತಪ್ಪಾಗಿ ಹೇಳುತ್ತಾನೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ