ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್  ಬೆದರಿಕೆ; ಬಿಗಿ ಭದ್ರತೆ

TV9 Digital Desk

| Edited By: Rashmi Kallakatta

Updated on: Aug 08, 2021 | 2:41 PM

IGI Airport: ಪೊಲೀಸರ ಪ್ರಕಾರ ಶನಿವಾರ ಇ-ಮೇಲ್ ನಲ್ಲಿ ಬಾಂಬ್ ಬೆದರಿಕೆ ಬಂದಿತ್ತು.  ಅಲ್ ಖೈದಾ ಸರ್ಗಾನಾದಿಂದ ಯೋಜಿತ ಬಾಂಬ್ ಸ್ಫೋಟ ನಡೆಯಲಿದೆ ಎಂದು ಇಮೇಲ್ ಮೂಲಕ ಬಾಂಬ್ ಬೆದರಿಕೆ  ಬಂದಿತ್ತು.

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್  ಬೆದರಿಕೆ; ಬಿಗಿ ಭದ್ರತೆ
ದೆಹಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

 ದೆಹಲಿ: ಶನಿವಾರ ಸಂಜೆ ದೆಹಲಿಯ  ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGI) ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇದು “ನಿರ್ದಿಷ್ಟವಲ್ಲದ” ಬೆದರಿಕೆ ಎಂದು ಭದ್ರತಾ ಏಜೆನ್ಸಿಗಳು ಹೇಳಿದ್ದು ಭಾನುವಾರ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಪೊಲೀಸರ ಪ್ರಕಾರ ಶನಿವಾರ ಇ-ಮೇಲ್ ನಲ್ಲಿ ಬಾಂಬ್ ಬೆದರಿಕೆ ಬಂದಿತ್ತು.  ಅಲ್ ಖೈದಾ ಸರ್ಗಾನಾದಿಂದ ಯೋಜಿತ ಬಾಂಬ್ ಸ್ಫೋಟ ನಡೆಯಲಿದೆ ಎಂದು ಇಮೇಲ್ ಮೂಲಕ ಬಾಂಬ್ ಬೆದರಿಕೆ  ಬಂದಿತ್ತು. ಕರಣಬೀರ್ ಸೂರಿ ಅಲಿಯಾಸ್ ಮೊಹಮದ್ ಜಲಾಲ್ ಮತ್ತು ಆತನ ಪತ್ನಿ ಶೈಲಿ ಶಾರದಾ, ಅಲಿಯಾಸ್ ಹಸೀನಾ, ಸಿಂಗಾಪುರದಿಂದ ಭಾನುವಾರ ಭಾರತಕ್ಕೆ ಬರುತ್ತಿದ್ದಾರೆ.ಅವರು 1-3 ದಿನಗಳಲ್ಲಿ ಐಜಿಐ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಲು ಯೋಜಿಸಿದ್ದಾರೆ ಎಂದು ಇ-ಮೇಲ್ ನಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ದೆಹಲಿ ಪೊಲೀಸರ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ ಖೈದಾ ಸಂಘಟನೆಯ ನೇತೃತ್ವದಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಯ ಬಗ್ಗೆ ಅವರು ವಿಮಾನ ನಿಲ್ದಾಣ ಕಾರ್ಯಾಚರಣೆ ನಿಯಂತ್ರಣ ಕೇಂದ್ರವನ್ನು ಎಚ್ಚರಿಸಿದರು.

ಭದ್ರತಾ ಸಂಸ್ಥೆಗಳ ಸಹಾಯದಿಂದ ವಿಮಾನ ನಿಲ್ದಾಣದ ಅಧಿಕಾರಿಗಳು ನಂತರ ಬೆದರಿಕೆಯನ್ನು ತನಿಖೆ ಮಾಡಿದ್ದು  ಇದು “ನಿರ್ದಿಷ್ಟವಲ್ಲದ” ಬೆದರಿಕೆ ಎಂದು ಹೇಳಿದ್ದಾರೆ.

ತನಿಖೆಯ  ನಂತರ, ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಯು (BTAC) ನಿರ್ದಿಷ್ಟವಲ್ಲವೆಂದು ಘೋಷಿಸಿದ ಅದೇ ಹೆಸರುಗಳು ಮತ್ತು ಅಂತಹುದೇ ವಿವರಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಬೆದರಿಕೆ ಸಂದೇಶವನ್ನು ಸ್ವೀಕರಿಸಲಾಗಿದೆ ಎಂದು ಕಂಡುಬಂದಿದೆ. ಆದರೆ ಮಾನದಂಡಗಳ  ಪ್ರಕಾರ, ಭದ್ರತಾ ಕಾರ್ಯಾಚರಣೆಗಳ ನಿಯಂತ್ರಣ ಕೇಂದ್ರವು ಎಲ್ಲಾ ಸಂಬಂಧಿತ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ನೀಡಿತು ಮತ್ತು ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸಿದೆ. ಐಜಿಐ ವಿಮಾನ ನಿಲ್ದಾಣದ ಎಲ್ಲಾ ಟರ್ಮಿನಲ್‌ಗಳಲ್ಲಿ ವಿಧ್ವಂಸಕ ಕೃತ್ಯ ವಿರೋಧಿ ತಪಾಸಣೆ ನಡೆಸಲಾಗಿದೆ, ಪ್ರವೇಶ ನಿಯಂತ್ರಣ, ಪ್ರವೇಶ ಕೇಂದ್ರಗಳಲ್ಲಿ ವಾಹನ ತಪಾಸಣೆ ಮತ್ತು ಗಸ್ತು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ:  ಈ ಬಾರಿ 7 ದಿನದ ಲಾಕ್​ಡೌನ್; ಆಗಸ್ಟ್​​ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬೀಗ ಬೀಳುವ ಸಾಧ್ಯತೆ

ಇದನ್ನೂ ಓದಿ: Bheemana Amavasya: ಭೀಮನ ಅಮಾವಾಸ್ಯೆ ವ್ರತವನ್ನು ಅವಿವಾಹಿತರು ಏಕೆ ಹಾಗೂ ಹೇಗೆ ಆಚರಿಸಬೇಕು?

(Bomb threat at IGI airport Security agencies declared it was a non-specific threat)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada