Breaking News: ಅಲಿಗಢದ ಮಾಂಸದ ಕಾರ್ಖಾನೆಯಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆ; ಓರ್ವ ಮಹಿಳೆ ಸಾವು, 65 ಜನರು ಅಸ್ವಸ್ಥ
ಮಾಂಸದ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಸುಮಾರು 65 ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ.
ಅಲಿಗಢ: ಉತ್ತರ ಪ್ರದೇಶದ ಅಲಿಗಢದ ಮಾಂಸದ ಕಾರ್ಖಾನೆಯಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆಯಾಗಿ (Ammonia Gas Leak) 65 ಜನರು ಅಸ್ವಸ್ಥರಾಗಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದ (Uttar Pradesh) ಅಲಿಗಢದ ರೋರಾವರ್ ಬಳಿ ಈ ಘಟನೆ ನಡೆದಿದೆ. ಕಾರ್ಖಾನೆಯಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿದ್ದು, ಈ ವೇಳೆ ಪ್ಯಾಕಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಉಸಿರಾಡಲಾಗದೆ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಮಹಿಳೆಯರಿಗೆ ಅಲಿಗಢ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಾಂಸದ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಸುಮಾರು 65 ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ. ಅನಿಲ ಸೋರಿಕೆಗೆ ಕಾರಣಗಳನ್ನು ಪತ್ತೆ ಮಾಡಲಾಗುತ್ತಿದೆ. ಕಾರ್ಖಾನೆಯ ಕಾರ್ಮಿಕರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಹುತೇಕರ ಸ್ಥಿತಿ ಸ್ಥಿರವಾಗಿದ್ದು, ಹಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಲಿಗಢ ಪೊಲೀಸರು ತಿಳಿಸಿದ್ದಾರೆ.
UP | Info received about an ammonia gas leak in a meat factory in Rorawar area where mostly women engaged in packaging work. Around 50 people were admitted to a medical college after they complained of breathing difficulties. Doctors confirmed that everyone is stable: Aligarh DM pic.twitter.com/7JDZSOUne7
— ANI UP/Uttarakhand (@ANINewsUP) September 29, 2022
ಪ್ರಾಥಮಿಕ ತನಿಖೆಯಲ್ಲಿ ಪೈಪ್ ಒಡೆದ ಕಾರಣ ಗ್ಯಾಸ್ ಸೋರಿಕೆ ಉಂಟಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಇದು ನಿರ್ಲಕ್ಷ್ಯದ ಪ್ರಕರಣವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಈ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ. ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಇಂದ್ರ ವಿಕ್ರಮ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಪೋಟ: ಇಬ್ಬರಿಗೆ ಗಂಭೀರ ಗಾಯ, ಓರ್ವನ ಸ್ಥಿತಿ ಚಿಂತಾಜನಕ
ಕಳೆದ 2 ದಿನಗಳಲ್ಲಿ ಆಹಾರ ಸಂಸ್ಕರಣಾ ಘಟಕದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಪೂರ್ವ ಒಡಿಶಾ ರಾಜ್ಯದ ಪ್ರಾನ್ ಸಂಸ್ಕರಣಾ ಘಟಕದಲ್ಲಿ ಬುಧವಾರ ಅಮೋನಿಯಾ ಸೋರಿಕೆಯಾದ ನಂತರ 12ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥರಾಗಿದ್ದರು. ಕಳೆದ ಜನವರಿಯಲ್ಲಿ ಗುಜರಾತ್‌ನ ಗಿರಣಿಯಲ್ಲಿ ಅಕ್ರಮ ರಾಸಾಯನಿಕ ಶೇಖರಣೆಯ ನಂತರ ವಿಷಕಾರಿ ಅನಿಲವನ್ನು ಸೇವಿಸಿದ 6 ಜನರು ಸಾವನ್ನಪ್ಪಿದ್ದರು. 2020ರಲ್ಲಿ ವಿಶಾಖಪಟ್ಟಣಂನ ರಾಸಾಯನಿಕ ಘಟಕದಲ್ಲಿ ಸೋರಿಕೆಯಾದ ನಂತರ ಹಲವಾರು ಜನರು ಸಾವನ್ನಪ್ಪಿದ್ದರು. 1984ರಲ್ಲಿ ಭೋಪಾಲ್ ನಗರದಲ್ಲಿನ ಅಮೇರಿಕನ್ ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್ ಒಡೆತನದ ಕೀಟನಾಶಕ ಕಾರ್ಖಾನೆಯಿಂದ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾಗಿ 5,000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಇದು ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ಅನಿಲ ದುರಂತವಾಗಿತ್ತು.