ಸಿರಿಧಾನ್ಯಗಳಿಂದ ಸಿಹಿ ತಿಂಡಿಗಳವರೆಗೆ; ಬ್ರಿಕ್ಸ್ ಶೃಂಗಸಭೆಯ ಅತಿಥಿಗಳ ಮೆನುವಿನಲ್ಲಿ ಏನಿರಲಿದೆ?

ದೆಹಲಿಯು ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಪ್ರಪಂಚದಾದ್ಯಂತದ ಹಲವು ರಾಷ್ಟ್ರಗಳ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರನ್ನು "ಅತಿಥಿ ದೇವೋ ಭವ" ಎಂಬ ಭಾರತೀಯ ಸಂಪ್ರದಾಯದ ಪ್ರಕಾರ ಸ್ವಾಗತಿಸಲಾಗುತ್ತದೆ. ದೆಹಲಿಯಲ್ಲಿ ವಿದೇಶಗಳ ಅತಿಥಿಗಳಿಗಾಗಿ ವಿಶೇಷವಾದ ಅಡುಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದರ ಜೊತೆಗೆ ಭಾರತೀಯ ಸಾಂಪ್ರದಾಯಿಕ ಆಹಾರವನ್ನು ಕೂಡ ಉಣಬಡಿಸಲಾಗುತ್ತದೆ. ದೆಹಲಿಯ ಹಲವಾರು ಪ್ರಮುಖ ಹೋಟೆಲ್‌ಗಳಲ್ಲಿ ಈ ವಿದೇಶಿ ನಿಯೋಗಗಳಿಗಾಗಿ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ.

ಸಿರಿಧಾನ್ಯಗಳಿಂದ ಸಿಹಿ ತಿಂಡಿಗಳವರೆಗೆ; ಬ್ರಿಕ್ಸ್ ಶೃಂಗಸಭೆಯ ಅತಿಥಿಗಳ ಮೆನುವಿನಲ್ಲಿ ಏನಿರಲಿದೆ?
ಬ್ರಿಕ್ಸ್ ಶೃಂಗಸಭೆಯ ಅತಿಥಿಗಳ ಮೆನುವಿನಲ್ಲಿ ಏನಿರಲಿದೆ?
Image Credit source: TV9

Updated on: Sep 11, 2026 | 7:30 PM

ನವದೆಹಲಿ, ಸೆಪ್ಟೆಂಬರ್ 11: ನವದೆಹಲಿಯ ‘ಭಾರತ ಮಂಟಪ’ದಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಪ್ರಮುಖ ಜಾಗತಿಕ ನಾಯಕರು ಹಾಗೂ ಅವರ ರಾಜತಾಂತ್ರಿಕ ನಿಯೋಗಕ್ಕೆ ಭಾರತದ ವಿಶಿಷ್ಟ ಮತ್ತು ಶ್ರೀಮಂತ ಪಾಕಪದ್ಧತಿಯ ಆತಿಥ್ಯ ನೀಡಲಾಗುತ್ತಿದೆ. ದೆಹಲಿಯ ಪ್ರಮುಖ ಪಂಚತಾರಾ ಹೋಟೆಲ್‌ಗಳಾದ ದಿ ತಾಜ್ ಮಹಲ್, ದಿ ಲೀಲಾ ಪ್ಯಾಲೇಸ್, ಮತ್ತು ದಿ ಲಲಿತ್ ಜಾಗತಿಕ ನಾಯಕರ ಅಭಿರುಚಿಗೆ ತಕ್ಕಂತೆ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಖಾದ್ಯಗಳನ್ನು ಸಿದ್ಧಪಡಿಸಿವೆ.

ಮಿಲೆಟ್​​ಗೂ ಇದೆ ಜಾಗ:

ಪ್ರಧಾನಿ ನರೇಂದ್ರ ಮೋದಿ ಅವರು ಸಿರಿಧಾನ್ಯದ ಬಗ್ಗೆ ಹಲವು ಕಡೆ ಮಾತನಾಡುತ್ತಲೇ ಇರುತ್ತಾರೆ. ಮೋದಿ ಕೂಡ ತಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇರಿಸಿಕೊಳ್ಳುತ್ತಾರೆ. ಈ ಬಾರಿ ಬ್ರಿಕ್ಸ್ ಶೃಂಗಸಭೆಯ ಅತಿಥಿಗಳಿಗೂ ಸಿರಿಧಾನ್ಯದ ಹಲವು ಅಡುಗೆಗಳನ್ನು ಉಣಬಡಿಸಲಾಗುತ್ತಿದೆ. ಕ್ವಿನೋವಾ ಉಪ್ಪಿಟ್ಟು, ರಾಗಿ ದೋಸೆ ಮುಂತಾದ ತಿಂಡಿಗಳನ್ನು ಕೂಡ ಮೆನುವಿನಲ್ಲಿ ಸೇರಿಸಲಾಗಿದೆ. ಸಿರಿಧಾನ್ಯವನ್ನು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ, ನಮ್ಮ ದೇಹಕ್ಕೆ ಉತ್ತಮವಾದ ಈ ಆಹಾರವನ್ನು ಪ್ರಧಾನ ಆಹಾರವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ಬಾರಿ ಅನೇಕ ಭಕ್ಷ್ಯಗಳನ್ನು ರಾಗಿಗಳಿಂದ ತಯಾರಿಸಲಾಗುತ್ತದೆ. ಸಿರಿಧಾನ್ಯಗಳನ್ನು ಶತಮಾನಗಳಿಂದ ಬೆಳೆಸಲಾಗುತ್ತಿದೆ ಮತ್ತು ಸೇವಿಸಲಾಗುತ್ತಿದೆ, ಆದರೆ ಕಳೆದ 5-7 ವರ್ಷಗಳಲ್ಲಿ ಇದು ಮತ್ತೆ ಜನಪ್ರಿಯತೆಯನ್ನು ಗಳಿಸಿವೆ.

ಇದನ್ನೂ ಓದಿ: ಬ್ರಿಕ್ಸ್​ ಶೃಂಗಸಭೆ: ಗಲ್ವಾನ್ ಸಂಘರ್ಷದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಷಿ ಜಿನ್‌ಪಿಂಗ್ ಭೇಟಿ: ಮೋದಿ-ಷಿ ಮಹತ್ವದ ಮಾತುಕತೆ

ಪ್ರಮುಖ ಖಾದ್ಯಗಳು ಮತ್ತು ಆಕರ್ಷಣೆಗಳು:

ಖಾದ್ಯ ಕಮಲ (Edible Lotus): ಗುಲಾಬಿ, ಕೇಸರಿ ಮತ್ತು ಏಲಕ್ಕಿ ಬಳಸಿ ಕಲಾತ್ಮಕವಾಗಿ ತಯಾರಿಸಿದ ಈ ಸಿಹಿಖಾದ್ಯವು ವಿಶ್ವಾದ್ಯಂತ ಬಂದಿರುವ ಗಣ್ಯರ ವಿಶೇಷ ಆಕರ್ಷಣೆಯಾಗಿದೆ.

ಸಿರಿಧಾನ್ಯ ಖಾದ್ಯಗಳು (Millet Cuisine): ಪ್ರಧಾನಿ ಮೋದಿಯವರ ಸಿರಿಧಾನ್ಯ ಪ್ರೋತ್ಸಾಹದ ಭಾಗವಾಗಿ ಜೋಳ, ರಾಗಿ, ಸಜ್ಜೆ ಹಾಗೂ ನವಣೆಗಳಿಂದ ಮಾಡಿದ ಪೌಷ್ಟಿಕ ತಿನಿಸುಗಳನ್ನು ಮೆನುವಿನಲ್ಲಿ ಸೇರಿಸಲಾಗಿದೆ.

ಲಕ್ನೋಯಿ ಗಲೌಟಿ ಕಬಾಬ್ (Galouti Kebab): ಬಾಯಲ್ಲಿ ಇಟ್ಟರೆ ಕರಗುವ ಶೈಲಿಯ ಪ್ರಸಿದ್ಧ ರಾಯಲ್ ಮೊಘಲಾಯ್ ಕಬಾಬ್‌ಗಳು ಪ್ರಧಾನ ಅಡುಗೆಯ ಭಾಗವಾಗಿವೆ.

ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ ಎಫೆಕ್ಟ್; ದೆಹಲಿಯಲ್ಲಿ ಗಗನಕ್ಕೇರಿದ ಹೋಟೆಲ್ ದರ, ಒಂದು ರಾತ್ರಿಗೆ 2.4 ಲಕ್ಷ ರೂ.!

ಕಾಶ್ಮೀರದ ಮಸಾಲೆಯುಕ್ತ ವಾಲ್​ನಟ್, ದೆಹಲಿಯ ಮೈದಾ ಕಾಜು ಮತ್ತು ಚಾಟ್, ಮಹಾರಾಷ್ಟ್ರದ ಸಾಂಪ್ರದಾಯಿಕ ಬಾಖರವಾಡಿ, ರಾಜಸ್ಥಾನದ ಮಿನಿ ಖಾಸ್ತಾ ಕಚೋರಿ, ಪಶ್ಚಿಮ ಬಂಗಾಳದ ಕುಚೋ ನಿಮ್ಕಿ, ತಮಿಳುನಾಡಿನ ಮುರುಕ್ಕು ಕೂಡ ಅತಿಥಿಗಳಿಗೆ ನೀಡಲಾಗುವ ತಿಂಡಿಗಳ ಮೆನುವಿನಲ್ಲಿದೆ.

ಹಾಗೇ, ವಿದೇಶಿ ಗಣ್ಯರ ಆರೋಗ್ಯ ಮತ್ತು ಆಸಕ್ತಿಗೆ ಅನುಗುಣವಾಗಿ ಅತಿಯಾದ ಖಾರವಿಲ್ಲದೆ, ಹದವಾದ ಭಾರತೀಯ ಮಸಾಲೆ ಪದಾರ್ಥಗಳನ್ನು ಬಳಸಿ ಅಡುಗೆ ಸಿದ್ಧಪಡಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Fri, 11 September 26

Loading...
Unable to load recommendations.
Follow Us