AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಆರ್​​ಎಸ್​ ಶಾಸಕನ ಕಚೇರಿ ಮೇಲೆ ಬಿಜೆಪಿಗರ ದಾಳಿ: ಪೀಠೋಪಕರಣ ಧ್ವಂಸ, ಕಾರಿನ ಗಾಜು ಪುಡಿಗೈದು ಅಟ್ಟಹಾಸ

ಬಿಆರ್‌ಎಸ್ ಶಾಸಕ ಗಂಗುಲ ಕಮಲಾಕರ್ ಅವರ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವ ಬಂಡಿ ಸಂಜಯ್ ವಿರುದ್ಧದ ಕೌಶಿಕ್ ರೆಡ್ಡಿ ವಿವಾದಾತ್ಮಕ ಹೇಳಿಕೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಕಚೇರಿಯ ಪೀಠೋಪಕರಣ ಹಾಗೂ ಕಾರಿಗೆ ಹಾನಿ ಮಾಡಲಾಗಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಆರ್‌ಎಸ್ ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಿಆರ್​​ಎಸ್​ ಶಾಸಕನ ಕಚೇರಿ ಮೇಲೆ ಬಿಜೆಪಿಗರ ದಾಳಿ: ಪೀಠೋಪಕರಣ ಧ್ವಂಸ, ಕಾರಿನ ಗಾಜು ಪುಡಿಗೈದು ಅಟ್ಟಹಾಸ
ಕಾರಿನ ಮೇಲೆ ದಾಳಿ
ಪ್ರಸನ್ನ ಹೆಗಡೆ
|

Updated on:May 07, 2026 | 1:36 PM

Share

ಹೈದರಾಬಾದ್​​, ಮೇ 07: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್​​ ಕುಮಾರ್​​ ಅವರ ವಿರುದ್ಧ ಬಿಆರ್‌ಎಸ್ ಶಾಸಕ ಕೌಶಿಕ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಕರೀಂನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಚಿವ ಹಾಗೂ ಶಾಸಕ ಗಂಗುಲ ಕಮಲಾಕರ್ ಅವರ ಕ್ಯಾಂಪ್​​​ ಕಚೇರಿಗೆ ನುಗ್ಗಿ ಬಿಜೆಪಿಗರು ದಾಂಧಲೆ ನಡೆಸಿದ್ದಾರೆ. ಬಿಆರ್​ಎಸ್ ಶಾಸಕ ಕೌಶಿಕ್ ರೆಡ್ಡಿ ಒಳಗೆ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಬಿಜೆಪಿ ಬೆಂಬಲಿತರು ಧ್ವಂಸಗೊಳಿಸಿದ್ದು, ಕೂಡಲೇ ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಗುಂಪು ಚದುರಿಸಿದ ಪ್ರಸಂಗ ನಡೆದಿದೆ.

ಬಿಜೆಪಿಗರ ಆಕ್ರೋಶಕ್ಕೆ ಕಾರಣ ಏನು?

ಕೆಟಿಆರ್ ಡ್ರಗ್ ಟೆಸ್ಟ್ ಮಾಡಿಸಬೇಕು ಎಂಬ ಬಂಡಿ ಸಂಜಯ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೌಶಿಕ್ ರೆಡ್ಡಿ, ಬಂಡಿ ಸಂಜಯ್ ಕೂಡ ಡ್ರಗ್ ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದರು. ಅಲ್ಲದೆ, ಮಾದಕ ವಸ್ತು ಮಿಶ್ರಿತ ತಂಬಾಕು ಸೇವನೆಯ ಪರಿಣಾಮದಿಂದಲೇ ಬಂಡಿ ಸಂಜಯ್ ಅವರ ಕೂದಲು ಉದುರಿದೆ ಎಂದು ಟೀಕಿಸಿದ್ದರು. ಈ ಹೇಳಿಕೆ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಬಿಹಾರ ರಾಜಕೀಯದಲ್ಲಿ ಹೊಸ ಪರ್ವ; ಸಂಪುಟ ಸೇರಿದ ನಿತೀಶ್ ಪುತ್ರ ನಿಶಾಂತ್, 31 ನಾಯಕರಿಂದ ಮಂತ್ರಿಗಳಾಗಿ ಪ್ರಮಾಣ ವಚನ

ಘಟನೆಗೆ ಬಿಆರ್​​ಎಸ್​​ ಕಿಡಿ

ಇನ್ನು ಘಟನೆ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡಿ ಬಿಆರ್​​ಎಸ್​​ ಕಿಡಿ ಕಾರಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಸ್ವತಃ ದಾಳಿಗೆ ಸಂಚು ರೂಪಿಸಿರುವುದು ಅತ್ಯಂತ ಖಂಡನೀಯ. ಬಿಜೆಪಿ ಗೂಂಡಾಗಳು ಕರೀಂನಗರ ಶಾಸಕರ ಕ್ಯಾಂಪ್ ಕಚೇರಿಯ ಮೇಲೆ ದಾಳಿ ನಡೆಸಿ ಫೋಠೋಪಕರಣಗಳು, ಬಾಗಿಲುಗಳು ಹಾಗೂ ಕಾರನ್ನು ಧ್ವಂಸಗೊಳಿಸಿದ್ದಾರೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಸ್ಥಾನದಲ್ಲಿರುವ ಬಂಡಿ ಸಂಜಯ್ ಸ್ವತಃ ಬಿಜೆಪಿ ಕಾರ್ಯಕರ್ತರನ್ನು ಪ್ರೇರೇಪಿಸಿ ಈ ದಾಳಿ ನಡೆಸಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಸರಿಯಾದ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:35 pm, Thu, 7 May 26

Follow Us
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ