AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳತಿಯ ಕತ್ತು ಸೀಳಿ ಪ್ರಿಯಕರ ಪರಾರಿ

ಸಣ್ಣ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಯುವಕನೊಬ್ಬ ತನ್ನ ಗೆಳತಿಯ ಕತ್ತು ಸೀಳಿ ಕೊಲೆ(Murder) ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಕೆಯ ಪ್ರಿಯಕರ ಮತ್ತವನ ಸ್ನೇಹಿತರು ಸೇರಿ ಈ ಕೃತ್ಯವೆಸಗಿದ್ದಾರೆ. ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಆಕೆಗಿನ್ನು 17 ವರ್ಷ ವಯಸ್ಸು. ಶನಿವಾರ ರಾತ್ರಿ ಡಿಯೋರಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಬಾಲಕಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಗೆಳತಿಯ ಕತ್ತು ಸೀಳಿ ಪ್ರಿಯಕರ ಪರಾರಿ
ಕ್ರೈಂImage Credit source: DNA Forensic Laboratory
ನಯನಾ ರಾಜೀವ್
|

Updated on: Apr 06, 2026 | 8:09 AM

Share

ಲಕ್ನೋ, ಏಪ್ರಿಲ್ 06: ಯುವಕನೊಬ್ಬ ತನ್ನ ಗೆಳತಿಯ ಕತ್ತು ಸೀಳಿ ಕೊಲೆ(Murder) ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಕೆಯ ಪ್ರಿಯಕರ ಮತ್ತವನ ಸ್ನೇಹಿತರು ಸೇರಿ ಈ ಕೃತ್ಯವೆಸಗಿದ್ದಾರೆ. ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಆಕೆಗಿನ್ನು 17 ವರ್ಷ ವಯಸ್ಸು. ಶನಿವಾರ ರಾತ್ರಿ ಡಿಯೋರಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಬಾಲಕಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನೌತನ್ ಹಥಿಯಾಗಢ ಗ್ರಾಮದ ನಿವಾಸಿ ಅಂಜಲಿಯನ್ನು ಶಿವಂ ಸಿಂಗ್ ಮತ್ತು ಅವರ ಸಹಚರರು ಆಕೆಯನ್ನು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ, ಬಾಲಕಿ ತನ್ನ ತಂಗಿ ಮತ್ತು ಸಹೋದರನೊಂದಿಗೆ ಸಹೋದರ್ ಪಟ್ಟಿ ಚೌಕ್ ಬಳಿ ಮೊಬೈಲ್ ಫೋನ್ ರಿಪೇರಿ ಮಾಡಿಸಲೆಂದು ಹೋಗಿದ್ದರು. ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಅವರನ್ನು ಥಳಿಸಲು ಶುರುಮಾಡಿದ್ದರು.

ಚಾಕುವನ್ನು ನೋಡಿ ಮಕ್ಕಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಆರೋಪಿಗಳು ಅವರನ್ನು ಗೋಧಿ ಹೊಲಕ್ಕೆ ಓಡಿಸಿ, ಬಾಲಕಿಯನ್ನು ಹಿಡಿದು, ಆಕೆಯ ಕುತ್ತಿಗೆಗೆ ಇರಿದಿದ್ದಾರೆ. ಸಹೋದರ ತಮ್ಮ ಮನೆಯ ಕಡೆಗೆ ಓಡಲು ಪ್ರಯತ್ನಿಸಿದಾಗ, ದಾಳಿಕೋರರು ಬಾಲಕಿಯ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮತ್ತಷ್ಟು ಓದಿ: ಬೈಕ್​​ ಟಚ್​ ನೆಪ: ಚಾಕು ಇರಿದು ವ್ಯಕ್ತಿಯ ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?

ಕುಟುಂಬಸ್ಥರು ಸ್ಥಳಕ್ಕೆ ತಲುಪುವ ಹೊತ್ತಿಗೆ ಬಾಲಕಿ ಮೃತಪಟ್ಟಿದ್ದರು. ನಂತರ, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಕಳೆದ ನಾಲ್ಕು ವರ್ಷಗಳಿಂದ ಹುಡುಗಿ ಮತ್ತು ಸಿಂಗ್ ನಡುವೆ ಸಂಬಂಧವಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಸಿಂಗ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕುಟುಂಬದ ದೂರಿನ ಆಧಾರದ ಮೇಲೆ, ಸಿಂಗ್ ಮತ್ತು ಅವರ ಸಹಚರನ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಸ್ಸಾಂನಲ್ಲಿ ಬಿಜೆಪಿ ಬರುತ್ತೆ ಎಂದು ನಾವೂ ಹೇಳ್ತೀವಿ: ಪರಮೇಶ್ವರ!
ಅಸ್ಸಾಂನಲ್ಲಿ ಬಿಜೆಪಿ ಬರುತ್ತೆ ಎಂದು ನಾವೂ ಹೇಳ್ತೀವಿ: ಪರಮೇಶ್ವರ!
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
‘ಕೆಡಿ’ ಚಿತ್ರದಲ್ಲಿಲ್ಲ ‘ಸರ್ಸೆ ಸರ್ಸೆ’ ಹಾಡು; ಅಪ್​​ಡೇಟ್​ ಕೊಟ್ಟ ಪ್ರೇಮ್
‘ಕೆಡಿ’ ಚಿತ್ರದಲ್ಲಿಲ್ಲ ‘ಸರ್ಸೆ ಸರ್ಸೆ’ ಹಾಡು; ಅಪ್​​ಡೇಟ್​ ಕೊಟ್ಟ ಪ್ರೇಮ್
ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್​ನಲ್ಲಿ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್​ನಲ್ಲಿ ಊಟ-ತಿಂಡಿ ದರ ಹೆಚ್ಚಾಗುತ್ತಾ?
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಥಳಿಸಿದ ಪೊಲೀಸರು
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಥಳಿಸಿದ ಪೊಲೀಸರು
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ಇಂದು ಈ ರಾಶಿಯವರ ವ್ಯಾಪಾರ, ವ್ಯವಹಾರಗಳು ಚೆನ್ನಾಗಿರುತ್ತೆ!
ಇಂದು ಈ ರಾಶಿಯವರ ವ್ಯಾಪಾರ, ವ್ಯವಹಾರಗಳು ಚೆನ್ನಾಗಿರುತ್ತೆ!
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ