ಬಿಎಸ್​ಎಫ್​ ಯೋಧನಿಗೆ ಹಿಂಸೆ ಕೊಟ್ಟಿತ್ತಾ ಪಾಕ್? ಅವಾಚ್ಯ ಶಬ್ದಗಳಿಂದ ನಿಂದನೆ, ನಿದ್ರೆ ಕಸಿದುಕೊಂಡಿದ್ದ ಪಾಕ್ ಸೇನೆ

ಇತ್ತೀಚೆಗಷ್ಟೇ ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್​ಎಫ್​ ಯೋಧ ಪೂರ್ಣಂ ಕುಮಾರ್ ಶಾ ಎಂಬುವವರನ್ನು ಪಾಕ್ ಸೇನೆ ಬಂಧಿಸಿತ್ತು. ಯೋಧನನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದರು, ಜತೆಗೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂಡಿಯಾ ಟುಡೇ ನೀಡಿರುವ ಮಾಹಿತಿ ಪ್ರಕಾರ, ಏಪ್ರಿಲ್ 23ರಂದು ಬಿಎಸ್​ಎಫ್​ ಯೋಧರನ್ನು ಪಾಕ್ ಬಂಧಿಸಿತ್ತು. ಕಣ್ಣಿಗೆ ಪಟ್ಟಿ ಕಟ್ಟಿ ತನ್ನ ಕಸ್ಟಡಿಯಲ್ಲಿಟ್ಟುಕೊಂಡಿತ್ತು. ಪಾಕಿಸ್ತಾನದ ಕಸ್ಟಡಿಯಲ್ಲಿ ಬರೋಬ್ಬರಿ 21 ದಿನಗಳನ್ನು ಕಳೆದಿದ್ದಾರೆ.

ಬಿಎಸ್​ಎಫ್​ ಯೋಧನಿಗೆ ಹಿಂಸೆ ಕೊಟ್ಟಿತ್ತಾ ಪಾಕ್? ಅವಾಚ್ಯ ಶಬ್ದಗಳಿಂದ ನಿಂದನೆ, ನಿದ್ರೆ ಕಸಿದುಕೊಂಡಿದ್ದ ಪಾಕ್ ಸೇನೆ
ಪೂರ್ಣಂ

Updated on: May 15, 2025 | 11:45 AM

ನವದೆಹಲಿ, ಮೇ 15: ಇತ್ತೀಚೆಗಷ್ಟೇ ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್​ಎಫ್​(BSF) ಯೋಧ ಪೂರ್ಣಂ ಕುಮಾರ್ ಶಾ ಎಂಬುವವರನ್ನು ಪಾಕ್ ಸೇನೆ ಬಂಧಿಸಿತ್ತು. ಬುಧವಾರ ಭಾರತಕ್ಕೆ ವಾಪಸ್ ಕಳುಹಿಸಿದೆ. ಯೋಧನನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದರು, ಜತೆಗೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂಡಿಯಾ ಟುಡೇ ನೀಡಿರುವ ಮಾಹಿತಿ ಪ್ರಕಾರ, ಏಪ್ರಿಲ್ 23ರಂದು ಬಿಎಸ್​ಎಫ್​ ಯೋಧರನ್ನು ಪಾಕ್ ಬಂಧಿಸಿತ್ತು. ಕಣ್ಣಿಗೆ ಪಟ್ಟಿ ಕಟ್ಟಿ ತನ್ನ ಕಸ್ಟಡಿಯಲ್ಲಿಟ್ಟುಕೊಂಡಿತ್ತು. ಪಾಕಿಸ್ತಾನದ ಕಸ್ಟಡಿಯಲ್ಲಿ ಬರೋಬ್ಬರಿ 21 ದಿನಗಳನ್ನು ಕಳೆದಿದ್ದಾರೆ.

ಶಾ ಅವರಿಗೆ ದೈಹಿಕವಾಗಿ ಚಿತ್ರೆಹಿಂಸೆ ನೀಡದಿದ್ದರೂ ಕೂಡ ಗಡಿಯಲ್ಲಿ ಬಿಎಸ್​ಎಫ್​ ನಿಯೋಜನೆಗಳ ಬಗ್ಗೆಯೂ ಅವರನ್ನು ಪ್ರಶ್ನಿಸಲಾಯಿತು. ಹಲ್ಲುಗಳನ್ನು ಉಜ್ಜಲು ಕೂಡ ಅವಕಾಶ ಕೊಟ್ಟಿರಲಿಲ್ಲ ಎಂದು ವರದಿಯಾಗಿದೆ.

ಏಪ್ರಿಲ್ 23ರಂದು ಫಿರೋಜ್​ಪುರ ವಲಯದಲ್ಲಿ ಕರ್ತವ್ಯದಲ್ಲಿದ್ದ ಪೂರ್ಣಂ ತಪ್ಪಾಗಿ ಪಾಕಿಸ್ತಾನ ಪ್ರದೇಶಕ್ಕೆ ದಾಟಿದ್ದರು, ಪಾಕಿಸ್ತಾನದ ರೇಂಜರ್ಸ್​ ಅವರನ್ನು ಬಂಧಿಸಿದ್ದರು. 24ನೇ ಬಿಎಸ್​ಎಫ್ ಬೆಟಾಲಿಯನ್ಗೆ ಸೇರಿದ ಶಾರನ್ನು 21 ದಿನಗಳಲ್ಲಿ ಮೂರು ಅಜ್ಞಾತ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ಒಂದು ಸ್ಥಳವು ವಾಯು ನೆಲೆ ಬಳಿ ಇದ್ದು, ಅಲ್ಲಿ ವಿಮಾನ ಶಬ್ದಗಳು ಕೇಳಿಸುತ್ತಿದ್ದವು ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
ಸೋಫಿಯಾ ಪತಿ ಮನೆ ಮೇಲೆ RSS ದಾಳಿ: ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿ
ನಾಯಿ ಬಾಲ ಯಾವತ್ತಿದ್ರೂ ಡೊಂಕು... ಪಾಕ್ ವಿರುದ್ಧ ಕ್ರಿಕೆಟಿಗರ ಆಕ್ರೋಶ
ಭಾರತೀಯ ಸೇನೆಯಿಂದ ಪಾಕ್ ಸೇನಾ ಶಿಬಿರ ಧ್ವಂಸ, ಅಮೆರಿಕದ ಮೊರೆಹೋದ ಪಾಕ್
ಆಕಸ್ಮಿಕವಾಗಿ ಗಡಿ ದಾಟಿದ ಭಾರತೀಯ ಯೋಧನನ್ನು ಬಂಧಿಸಿದ ಪಾಕಿಸ್ತಾನ

ಈ ಸಮಯದಲ್ಲಿ ಅವರ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಲಾಗಿತ್ತು. ಬಿಎಸ್‌ಎಫ್ ನಿಯೋಜನೆಗಳ ಬಗ್ಗೆ ಪ್ರಶ್ನಿಸಿದರು ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ನಿಯೋಜಿಸಲಾದ ಹಿರಿಯ ಅಧಿಕಾರಿಗಳ ಬಗ್ಗೆ ವಿವರಗಳನ್ನು ಪಡೆದರು.

ಮತ್ತಷ್ಟು ಓದಿ: ಆಕಸ್ಮಿಕವಾಗಿ ಗಡಿ ದಾಟಿ ಪಾಕ್​ನಿಂದ ಬಂಧನಕ್ಕೊಳಗಾಗಿದ್ದ ಬಿಎಸ್​ಎಫ್​ ಯೋಧ ಭಾರತಕ್ಕೆ ವಾಪಸ್

ಮೊಬೈಲ್​ ನಂಬರ್​ಗಳನ್ನು ನೀಡುವಂತೆಯೂ ಒತ್ತಾಯಿಸಲಾಗಿತ್ತು. ಆದರೆ ಶಾ ಅವರನ್ನು ಬಂಧಿಸಿದಾಗ ಅವರ ಬಳಿ ಮೊಬೈಲ್ ಇರಲಿಲ್ಲ. ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್‌ಎಫ್ ಜವಾನನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ನಂತರ, ಶಾ ಅವರಿಗೆ ಅವರ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡಲಾಯಿತು.

ಅವರನ್ನು ಔಪಚಾರಿಕ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಶಿಷ್ಟಾಚಾರದ ಪ್ರಕಾರ, ಪಾಕಿಸ್ತಾನದ ವಶದಲ್ಲಿದ್ದಾಗ ಅವರು ಧರಿಸಿದ್ದ ಬಟ್ಟೆಗಳನ್ನು ಪರಿಶೀಲಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ