ರಾಹುಲ್​ಗಾಂಧಿ ಬಗ್ಗೆ ಎಚ್ಚರಿಕೆಯಿಂದಿರಿ, ಕಾಂಗ್ರೆಸ್​ ಮೀಸಲಾತಿ ಅಂತ್ಯಗೊಳಿಸುವ ಷಡ್ಯಂತ್ರ ಮಾಡುತ್ತಿದೆ: ಮಾಯಾವತಿ

|

Updated on: Sep 10, 2024 | 12:22 PM

ರಾಹುಲ್ ಗಾಂಧಿ ಬಗ್ಗೆ ಎಚ್ಚರಿಕೆಯಿಂದಿರಿ, ಕಾಂಗ್ರೆಸ್​ ಮೀಸಲಾತಿಯನ್ನು ಅಂತ್ಯಗೊಳಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ಬಹುಜನ ಸಮಾಜವಾದಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕೊನೆಗೊಳಿಸಲು ಹಲವು ವರ್ಷಗಳಿಂದ ಕಾಂಗ್ರೆಸ್‌ ಷಡ್ಯಂತ್ರ ನಡೆಸುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ರಾಹುಲ್​ಗಾಂಧಿ ಬಗ್ಗೆ ಎಚ್ಚರಿಕೆಯಿಂದಿರಿ, ಕಾಂಗ್ರೆಸ್​ ಮೀಸಲಾತಿ ಅಂತ್ಯಗೊಳಿಸುವ ಷಡ್ಯಂತ್ರ ಮಾಡುತ್ತಿದೆ: ಮಾಯಾವತಿ
ಮಾಯಾವತಿ
Image Credit source: Moneycontrol
Follow us on

ರಾಹುಲ್ ಗಾಂಧಿ ಬಗ್ಗೆ ಎಚ್ಚರಿಕೆಯಿಂದಿರಿ, ಕಾಂಗ್ರೆಸ್​ ಮೀಸಲಾತಿಯನ್ನು ಅಂತ್ಯಗೊಳಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ಬಹುಜನ ಸಮಾಜವಾದಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕೊನೆಗೊಳಿಸಲು ಹಲವು ವರ್ಷಗಳಿಂದ ಕಾಂಗ್ರೆಸ್‌ ಷಡ್ಯಂತ್ರ ನಡೆಸುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ಮುಂದುವರಿಸುವ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಸರಿಯಾದ ಸಮಯ ಬಂದಾಗ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಲಿದೆ ಎಂದು ಹೇಳಿದ್ದಾರೆ. ಇದು ಮೀಸಲಾತಿಯನ್ನು ಕೊನೆಗೊಳಿಸುವ ಸಮಯವಲ್ಲ ಎಂದು ಹೇಳಿದ್ದರು.

ಮತ್ತಷ್ಟು ಓದಿ: ಮಹಿಳೆಯರು ಮನೆಯಲ್ಲಿಯೇ ಇರಬೇಕು ಎಂಬುದು ಆರ್​ಎಸ್​ಎಸ್ ನಂಬಿಕೆ; ಅಮೆರಿಕದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ದೀರ್ಘಕಾಲ ಅಧಿಕಾರದಲ್ಲಿದ್ದಾಗ ಒಬಿಸಿ ಮೀಸಲಾತಿಯನ್ನು ಜಾರಿಗೆ ತರಲಿಲ್ಲ, ಜಾತಿ ಗಣತಿ ನಡೆಯದಂತೆ ತಡೆಯುವ ಇವರ ನಾಟಕದ ಬಗ್ಗೆ ಎಚ್ಚರವಿರಲಿ.
ಭಾರತ ಉತ್ತಮ ಪರಿಸ್ಥಿತಿಯಲ್ಲಿದ್ದಾಗ ನಾವು ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಎಂದು ವಿದೇಶದಲ್ಲಿ ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಈ ನಾಟಕದ ಬಗ್ಗೆ ಈಗ ಎಚ್ಚರದಿಂದಿರಿ ಎಂದು ಬಿಎಸ್‌ಪಿ ಮುಖ್ಯಸ್ಥರು ಹೇಳಿದ್ದಾರೆ.

ಅವರ ಮೀಸಲಾತಿಯನ್ನು ಕೊನೆಗಾಣಿಸುವ ಷಡ್ಯಂತ್ರದಲ್ಲಿ ಕಾಂಗ್ರೆಸ್ ವರ್ಷಗಳಿಂದ ತೊಡಗಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರಿಗೆ ಈ ಪಕ್ಷದಿಂದ ನ್ಯಾಯ ಸಿಗಲಿಲ್ಲ ಎಂದು ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಜನರು ಎಚ್ಚರಿಕೆಯಿಂದ ಇರಬೇಕು. ಒಟ್ಟಾರೆ ಹೇಳುವುದಾದರೆ, ಜಾತೀಯತೆ ಸಂಪೂರ್ಣವಾಗಿ ದೇಶದಿಂದ ನಿರ್ಮೂಲನೆಯಾಗುವವರೆಗೆ, ಭಾರತದ ತುಲನಾತ್ಮಕವಾಗಿ ಉತ್ತಮ ಸ್ಥಿತಿಯ ಹೊರತಾಗಿಯೂ, ಈ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯು ಸುಧಾರಿಸುವುದಿಲ್ಲ.

ಜಾತೀಯತೆ ಸಂಪೂರ್ಣವಾಗಿ ನಾಶವಾಗುವವರೆಗೆ ಸರಿಯಾದ ಸಾಂವಿಧಾನಿಕ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವುದು ಅವಶ್ಯಕ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ