AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಸಂತ್ರಸ್ತೆ ರಾತ್ರೋ ರಾತ್ರಿ ಪೊಲೀಸ್​ ಠಾಣೆಗೆ ಬಂದು ದೂರು ನೀಡಬೇಕೆಂದು ಅಪೇಕ್ಷಿಸುವುದು ತಪ್ಪು: ಕೋರ್ಟ್​

ಅತ್ಯಾಚಾರವಾದ ತಕ್ಷಣವೇ ಸಂತ್ರಸ್ತೆ ಪೊಲೀಸ್​ ಠಾಣೆಗೆ ಬಂದು ದೂರು ನೀಡಬೇಕೆಂದು ಅಪೇಕ್ಷಿಸುವುದು ತಪ್ಪು ಎಂದು ಬಾಂಬೆ ಹೈಕೋರ್ಟ್​ನ ಪೀಠ ಅಭಿಪ್ರಾಯಪಟ್ಟಿದೆ. 35 ವರ್ಷ ವಯಸ್ಸಿನ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅಮರಾವತಿ ಸೆಷನ್ಸ್​ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್​ ಎತ್ತಿಹಿಡಿದಿದೆ. ಆರೋಪಿಯನ್ನು ಅಪರಾಧಿ ಎಂದು ತೀರ್ಪು ನೀಡಿದೆ. 10 ವರ್ಷಗಳ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಅತ್ಯಾಚಾರ ಸಂತ್ರಸ್ತೆ ರಾತ್ರೋ ರಾತ್ರಿ ಪೊಲೀಸ್​ ಠಾಣೆಗೆ ಬಂದು ದೂರು ನೀಡಬೇಕೆಂದು ಅಪೇಕ್ಷಿಸುವುದು ತಪ್ಪು: ಕೋರ್ಟ್​
ನ್ಯಾಯಾಲಯImage Credit source: The Amikus Qriae
ನಯನಾ ರಾಜೀವ್
|

Updated on: Feb 07, 2025 | 8:12 AM

Share

ಅತ್ಯಾಚಾರ ಸಂತ್ರಸ್ತೆ ರಾತ್ರೋ ರಾತ್ರಿ ಪೊಲೀಸ್​ ಠಾಣೆಗೆ ಬಂದು ದೂರು ನೀಡಬೇಕೆಂದು ಅಪೇಕ್ಷಿಸುವುದು ತಪ್ಪು ಎಂದು ಬಾಂಬೆ ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. 35 ವರ್ಷ ವಯಸ್ಸಿನ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅಮರಾವತಿ ಸೆಷನ್ಸ್​ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್​ ಎತ್ತಿಹಿಡಿದಿದೆ. ಆರೋಪಿಯನ್ನು ಅಪರಾಧಿ ಎಂದು ತೀರ್ಪು ನೀಡಿದೆ. 10 ವರ್ಷಗಳ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ಅಮರಾವತಿ ಸೆಷನ್ಸ್​ ನ್ಯಾಯಾಲಯದ ತೀರ್ಪಿನ ವಿರುದ್ಧ ಆರೋಪಿ ರಾಹುಲ್ ಲೋಖಂಡೆ ಮೇಲ್ಮನವಿ ಸಲ್ಲಿಸಿದ್ದ, ಆದರೆ ನ್ಯಾಯಾಲಯವು ಸಂತ್ರಸ್ತೆಯ ಸಾಕ್ಷ್ಯವು ದೃಢ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಹೇಳಿದೆ. ಈ ಆರೋಪಿ ಆಕೆ ವಾಸಿಸುತ್ತಿದ್ದ ಮನೆಯ ಮಾಲೀಕನ ಕೈಕೆಳಗೆ ಕೆಲಸ ಮಾಡುತ್ತಿರುವ ಉದ್ಯೋಗಿಯಾಗಿದ್ದು, ಆಕೆ ಈಗಾಗಲೇ ಮನೆ ಮಾಲೀಕನೊಂದಿಗೆ ವಿವಾದ ಹೊಂದಿದ್ದರಿಂದ ಸುಳ್ಳು ದೂರು ನೀಡಿದ್ದಾಳೆ ಎಂದು ವಕೀಲರು ವಾದಿಸಿದ್ದರು.

ಹಾಗೆಯೇ ಎಫ್​ಐಆರ್​ ದಾಖಲಿಸುವಲ್ಲಿ ವಿಳಂಬವಾಗಿದ್ದೇಕೆ ಎಂದು ಪ್ರಶ್ನಿಸಿದ್ದರು. ಆದರೆ ನ್ಯಾಯಾಲಯವು ಅತ್ಯಾಚಾರ ಸಂತ್ರಸ್ತೆ ರಾತ್ರಿ 15 ಕಿ.ಮೀ ದೂರ ಪೊಲೀಸ್​ ಠಾಣೆಗೆ ಬಂದು ದೂರು ಕೊಡಬೇಕು ಎಂದು ಅಪೇಕ್ಷಿಸುವುದು ತಪ್ಪೆಂದು ಅಭಿಪ್ರಾಯಪಟ್ಟಿದೆ.

ಮತ್ತಷ್ಟು ಓದಿ: ಬಾಲಕಿಯ ಮೇಲೆ ಅತ್ಯಾಚಾರ, ಬರ್ಬರ ಕೊಲೆ, ಮರಣೋತ್ತರ ಪರೀಕ್ಷೆ ವೇಳೆ ಕಣ್ಣೀರಿಟ್ಟ ವೈದ್ಯರು

ಆಕೆ ಒಬ್ಬಂಟಿ ಹೆಂಗಸು ಅಂದು ಆಕೆ ಅನುಭವಿಸಿದ ನೋವು, ಸಂಕಟವನ್ನು ಅರ್ಥ ಮಾಡಿಕೊಳ್ಳಬೇಕು, ಅಂದು ಮಾರ್ಚ್​ 25, 2017ರ ರಾತ್ರಿ, ಆತನ ಪರಿಚಯವಿತ್ತು ಅದು ರಾತ್ರಿ ಸಮಯವಾಗಿತ್ತು. ಆಕೆಯ ಮನೆಯ ಅಂಗಳದಲ್ಲಿ ಕುಳಿತಿರುವಾಗ ಆ ಏಕಾಏಕಿ ಆಕೆಯ ಮೇಲೆ ದಾಳಿ ಮಾಡಿ ಅತ್ಯಾಚಾರವೆಸಗಿದ್ದ.

ಬಳಿಕ ಆಕೆ ತಪ್ಪಿಸಿಕೊಂಡು ಮನೆಯ ಒಳಗೆ ಓಡಿ ಹೋದಳು, ಪಕ್ಕದ ಅಂಗಡಿಯವರೊಬ್ಬರಿಗೆ ಕರೆ ಮಾಡಿದಳು, ಆ ಸಮಯದಲ್ಲಿ ಆತ ಮತ್ತೆ ಅತ್ಯಾಚಾರವೆಸಗಿದ್ದ. ಅಂಗಡಿಯವನು ಮನೆಗೆ ತಲುಪುವಷ್ಟರಲ್ಲಿ ಘಟನೆ ನಡೆದಿತ್ತು. ಆರೋಪಿ ತಕ್ಷಣ ಓಡಿ ಹೋಗಿದ್ದಾನೆ. ಮಹಿಳೆ ಮರುದಿನ ಪೊಲೀಸ್ ಠಾಣೆಗೆ ಬಂದಿ ದೂರು ದಾಖಲಿಸಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More