ಕ್ಯಾಪ್ಟನ್ ಅಭಿಲಾಶಾ ಬರಾಕ್ ಆರ್ಮಿ ಎವಿಯೇಷನ್ ಕಾರ್ಪ್ಸ್‌ನ ಮೊದಲ ಮಹಿಳಾ ಪೈಲೆಟ್
ಕ್ಯಾಪ್ಟನ್ ಅಭಿಲಾಶಾ ಬರಾಕ್ ಅವರು ಭಾರತೀಯ ವಾಯುಪಡೆಯ ಯುದ್ಧ ಹೆಲಿಕಾಪ್ಟರ್ನ್ನು ಚಲಾಯಿಸುವ ಮುಖಾಂತರ ಆರ್ಮಿ ಎವಿಯೇಷನ್ ಕಾರ್ಪ್ಸ್‌ಗೆ ಸೇರಿದ ಮೊದಲ ಮಹಿಳಾ ಪೈಲೆಟ್ ಆಗಿದ್ದಾರೆ
ನವದೆಹಲಿ: ಕ್ಯಾಪ್ಟನ್ ಅಭಿಲಾಶಾ ಬರಾಕ್ (Captain Abhilasha Barak) ಅವರು ಭಾರತೀಯ ವಾಯುಪಡೆಯ (Indian Air Force) ಯುದ್ಧ ಹೆಲಿಕಾಪ್ಟರ್ನ್ನು ಚಲಾಯಿಸುವ ಮುಖಾಂತರ ಆರ್ಮಿ ಎವಿಯೇಷನ್ ಕಾರ್ಪ್ಸ್‌ಗೆ ಸೇರಿದ ಮೊದಲ ಮಹಿಳಾ ಪೈಲೆಟ್ ಆಗಿದ್ದಾರೆ ಎಂದು ನಾಸಿಕ್‌ನ ಯುದ್ಧ ಸೇನಾ ಏವಿಯೇಷನ್ ಟ್ರೇನಿಂಗ್ ಸ್ಕೂಲ್ ಮಹಾರಾಷ್ಟ್ರ, ಸೇನೆ ಹೇಳಿದೆ. ಇವರು ಸೇನಾ ಏವಿಯೇಷನ್ ಟ್ರೇನಿಂಗ್ ಸ್ಕೂಲ್ ಒಂದು ವರ್ಷದ ಕೋರ್ಸ್ ಪಡೆದ ನಂತರ ಬುಧವಾರ (ಮೇ 25) ರಂದು ಹೆಲಿಕಾಪ್ಟರ್ ಚಲಾಯಿಸಿದ್ದಾರೆ. ಈ ಮೂಲಕ ಭಾರತೀಯ ವಾಯುಪಡೆಯನ್ನು ಮೂವತ್ತು ವರ್ಷಗಳ ನಂತರ ಸೇರಿದ ಮೊದಲ ಮಹಿಳೆಯಾಗಿದ್ದಾರೆ.
ಇದನ್ನು ಓದಿ: ಚೆನ್ನೈಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ, ವಿವಿಧ ಯೋಜನೆಗಳಿಗೆ ಶಿಲಾನ್ಯಾಸ: ಪೊಲೀಸರಿಂದ ಬಿಗಿ ಭದ್ರತೆ
ಈ ಸಂಬಂಧ ಭಾರತೀಯ ವಾಯುಪಡೆ 2021ರಲ್ಲಿ ಅರ್ಜಿ ಆಹ್ವಾನಿಸಿತ್ತು. ಇಲ್ಲಿಯವರೆಗೆ ಮಹಿಳಾ ಅಧಿಕಾರಿಗಳು ಸೇನಾ ವಿಮಾನಯಾನದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಅಭಿಲಾಶಾ ಬರಾಕ್ ಅವರು ಹೆಲೆಕಾಪಟ್ಟರ್ ಪೈಲೆಟ್ ಆಗುವ ಮುಖಾಂತರ ದಾಖಲೆ ನಿರ್ಮಿಸಿದ್ದಾರೆ. ಅಭಿಲಾಶಾ ಬರಾಕ್ ಅವರು ಹರಿಯಾಣ ಮೂಲದವರಾಗಿದ್ದು, ನಿವೃತ್ತ ಕರ್ನಲ್ರ ಮಗಳು. ಇವರು 2018 ಸೆಪ್ಟೆಂಬರ್ನಲ್ಲಿ ಆರ್ಮಿ ಏರ್ ಡಿಫೆನ್ಸ್ ಕಾರ್ಪ್ಸ್‌ಗೆ ಸೇರಿಕೊಂಡವರು
ನಾಸಿಕ್‌ನ ಸೇನಾ ಏವಿಯೇಷನ್ ಟ್ರೇನಿಂಗ್ ಸ್ಕೂಲ್ ತರಬೇತಿ ಶಾಲೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆರ್ಮಿ ಏವಿಯೇಷನ್ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಅಜಯ್ ಕುಮಾರ್ ಸೂರಿ ಅವರು ಮಾತನಾಡಿ 36 ಸೇನಾ ಪೈಲಟ್‌ಗಳ ಜೊತೆಗೆ ಅಭಿಲಾಶಾ ಬರಾಕ್ ಅವರಿಗೂ ”ವಿಂಗ್” ಅವಾರ್ಡ್ ನೀಡಲಾಯಿತು ಎಂದು ಹೇಳಿದರು.
2072 ಆರ್ಮಿ ಏವಿಯೇಷನ್ ಸ್ಕ್ವಾಡ್ರನ್‌ನ ಸುಧಾರಿತ ಧ್ರುವ್ ಹೆಲಿಕಾಪ್ಟರ್ (ALH)ನ ಎರಡನೇ ಹಾರಾಟಕ್ಕೆ ಬರಾಕ್ ಅವರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 2021 ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮಹಿಳೆಯರಿಗು ಯುದ್ಧ ವಿಮಾನದ ತರಬೇರತಿ ನೀಡಲು ಪ್ರಾರಂಭಿಸಿತು. ಜೂನ್ 2022 ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ತನ್ನ ಮೊದಲ ಬ್ಯಾಚ್ ಮಹಿಳಾ ಕೆಡೆಟ್‌ಗಳನ್ನು ಸೇರ್ಪಡೆಗೊಳಿಸಲು ಸಜ್ಜಾಗಿರುವ ಸಮಯದಲ್ಲಿ ಬರಾಕ್ ಸೇನೆಯ ಮೊದಲ ಮಹಿಳಾ ಯುದ್ಧ ವಿಮಾನ ಚಾಲಕರಾದರು.
ಇದನ್ನು ಓದಿ: ನೂತನ ತಂತ್ರಜ್ಞಾನದೊಂದಿಗೆ ದಾಪುಗಾಲು; ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಭಾರತದ ಸಾಧನೆ ಅದ್ವಿತೀಯ
ನವೆಂಬರ್ 1986 ರಲ್ಲಿ ತಯಾರಾದ, ಆರ್ಮಿ ಏವಿಯೇಷನ್ ಕಾರ್ಪ್ಸ್ ALH, ರುದ್ರ ಹೆಲಿಕಾಪ್ಟರ್, ಚೇತಕ್, ಚೀತಾಗಳು ಮತ್ತು ಚೀಟಲ್ ಹೆಲಿಕಾಪ್ಟರ್‌ಗಳು ಸಿಯಾಚಿನ್ ಗಡಿಯನ್ನು ಕಾಯುತ್ತಿರುತ್ತವೆ. 2015 ರಲ್ಲಿ ಐಎಎಫ್ ನ ಫೈಟರ್ ಸ್ಟ್ರೀಮ್‌ಗೆ ಮಹಿಳೆಯರನ್ನು ಸೇರಿಸಿಕೊಳ್ಳಲಿ ನಿರ್ಧರಿಸಲಾಗಿತ್ತು. ಹೀಗಾಗಿ ಳೆದ ವರ್ಷ, ಭಾರತೀಯ ನೌಕಾಪಡೆಯು ಸುಮಾರು 25 ವರ್ಷಗಳ ನಂತರ ನಾಲ್ಕು ಮಹಿಳಾ ಅಧಿಕಾರಿಗಳನ್ನು ಯುದ್ಧನೌಕೆಗಳಲ್ಲಿ ನಿಯೋಜನೆಗೊಂಡರು.
ಮೇ 2021 ರಲ್ಲಿ, ಸೈನ್ಯವು ಮಹಿಳೆಯರು ಮಿಲಿಟರಿ ಪೊಲೀಸ್ ಕಾರ್ಪ್ಸ್‌ಗೆ ಸೇರಿದರು. ಅವರು ಮೊದಲ ಬಾರಿಗೆ ಅಧಿಕಾರಿಯೇತರ ಕೇಡರ್‌ನಲ್ಲಿ ಮಿಲಿಟರಿಗೆ ಸೇರ್ಪಡೆಗೊಂಡರು. 1990 ರ ದಶಕದ ಆರಂಭದಿಂದಲೂ ಮೂರು ಸೇನೆಗಳ ಆಯ್ದ ಶಾಖೆಗಳಲ್ಲಿ ಮಹಿಳೆಯರು ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1992 ರಲ್ಲಿ ಮೊದಲ ಬಾರಿಗೆ ವೈದ್ಯಕೀಯ ಸ್ಟ್ರೀಮ್‌ನಲ್ಲಿ ಮಹಿಳೆಯರು ಸೇರ್ಪಡೆಗೊಂಡರು. ಆದರೆ ಪದಾತಿಸೈನ್ಯದ ಟ್ಯಾಂಕ್‌ಗಳು ಮತ್ತು ಯುದ್ಧ ಸ್ಥಾನಗಳು ಇನ್ನೂ ಮಹಿಳೆಯರಿಗೆ ನಿಷೇಧಿತ ವಲಯಗಳಾಗಿವೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ