ಗೋಧಿ ಬೆಲೆ ನಿಯಂತ್ರಣ, ದಾಸ್ತಾನು ಮೇಲೆ ಸರ್ಕಾರ ನಿಗಾ; ಪ್ರಲ್ಹಾದ್ ಜೋಶಿ ಮಾಹಿತಿ

ಗೋಧಿ ಬೆಲೆಯ ನಿಯಂತ್ರಣ ಮತ್ತು ದಾಸ್ತಾನು ಮೇಲೆ ಕೇಂದ್ರ ಸರ್ಕಾರ ನಿಗಾ ಇರಿಸಿದೆ. ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಲ್ಲಿ ಗೋಧಿ ದಾಸ್ತಾನು ಮಿತಿ ನಿಗದಿಪಡಿಸಲಾಗಿದೆ. ಗೋಧಿ ದಾಸ್ತಾನು ಪೋರ್ಟಲ್‌ನಲ್ಲಿ ನೋಂದಾಯಿಸದ, ದಾಸ್ತಾನು ಮಿತಿ ಉಲ್ಲಂಘಿಸುವ ಯಾವುದೇ ಘಟಕವನ್ನು ಅಗತ್ಯ ಸರಕುಗಳ ಕಾಯ್ದೆ 1955ರ ಸೆಕ್ಷನ್ 6 ಮತ್ತು 7ರಡಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಸಿದ್ದಾರೆ.

ಗೋಧಿ ಬೆಲೆ ನಿಯಂತ್ರಣ, ದಾಸ್ತಾನು ಮೇಲೆ ಸರ್ಕಾರ ನಿಗಾ; ಪ್ರಲ್ಹಾದ್ ಜೋಶಿ ಮಾಹಿತಿ
Minister Pralhad Joshi

Updated on: May 29, 2025 | 7:36 PM

ನವದೆಹಲಿ, ಮೇ 29: ದೇಶದೆಲ್ಲೆಡೆ ಗೋಧಿ ಬೆಲೆ ನಿಯಂತ್ರಣ ಮತ್ತು ಸುಲಭ ಲಭ್ಯತೆಗಾಗಿ ಕೇಂದ್ರ ಸರ್ಕಾರ ನಿಗಾ ಇರಿಸಿದೆ. ಕೇಂದ್ರಾಡಳಿತ ಪ್ರದೇಶ ಹಾಗೂ ಎಲ್ಲಾ ರಾಜ್ಯಗಳಿಗೆ ಗೋಧಿ ದಾಸ್ತಾನು ಮಿತಿ ವಿಧಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. 2026ರ ಮಾರ್ಚ್‌ 31ರವರೆಗೆ ಅನ್ವಯಿಸುವಂತೆ ವ್ಯಾಪಾರಿಗಳು ಮತ್ತು ಸಗಟು ಮಾರಾಟಗಾರರಿಗೆ 3000 ಮೆಟ್ರಿಕ್‌ ಟನ್‌, ಚಿಲ್ಲರೆ ವ್ಯಾಪಾರಿಗಳು ಮತ್ತು ಪ್ರತಿ ಚಿಲ್ಲರೆ ಮಾರಾಟ ಮಳಿಗೆಗೆ 10 ಮೆಟ್ರಿಕ್ ಟನ್, ದೊಡ್ಡ ರಿಟೇಲರ್, ಪ್ರತಿ ಚಿಲ್ಲರೆ ಔಟ್ಲೆಟ್ ಗೆ 10 ಮೆಟ್ರಿಕ್ ಟನ್​​ವರೆಗೆ ಗರಿಷ್ಠ ಪ್ರಮಾಣದ ದಾಸ್ತಾನು ಮಿತಿ ನಿಗದಿಪಡಿಸಿದೆ ಎಂದಿದ್ದಾರೆ.

ಮೇ 27ರಂದು ನಿರ್ದಿಷ್ಟ ಆಹಾರ ಧಾನ್ಯ ಮೇಲಿನ ಪರವಾನಗಿ ಅವಶ್ಯಕತೆ, ದಾಸ್ತಾನು ಮಿತಿ ಮತ್ತು ಸಾಗಣೆ ನಿರ್ಬಂಧ ತೆರವು (ತಿದ್ದುಪಡಿ) ಆದೇಶ ಹೊರಡಿಸಿದೆ. ಇದು 2026ರ ಮಾರ್ಚ್‌ 31ರವರೆಗೆ ಅನ್ವಯಿಸುತ್ತದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ‌ ಹಿಟ್ಲರ್ ಆಡಳಿತ ಇದೆಯಾ? ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ನಿರ್ಧಾರಕ್ಕೆ ಜೋಶಿ ಸೇರಿ ಅನೇಕರಿಂದ ಖಂಡನೆ

ಇದನ್ನೂ ಓದಿ
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಸೈಬರ್ ಅಪರಾಧಿಗಳ ವಿರುದ್ಧ 19 ಕಡೆ ಸಿಬಿಐ ಕಾರ್ಯಾಚರಣೆ
ಬುರ್ಖಾ ಧರಿಸಿ ಸೊಸೆ ಮನೆಗೆ ನುಗ್ಗಿದ ಮಾವ, ಮುಂದೇನಾಯ್ತು?
ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ನಿರ್ಬಂಧದ ನಡುವೆ ಇಲ್ಲಿದೆ ಗುಡ್ ನ್ಯೂಸ್

ಪೋರ್ಟಲ್‌ನಲ್ಲಿ ದಾಸ್ತಾನು ಸ್ಥಿತಿ ಘೋಷಿಸದಿದ್ದರೆ ದಂಡ:

ಎಲ್ಲಾ ಗೋಧಿ ದಾಸ್ತಾನು ಘಟಕಗಳು ಪ್ರತಿ ಶುಕ್ರವಾರ ಗೋಧಿ ದಾಸ್ತಾನು ಪೋರ್ಟಲ್‌ನಲ್ಲಿ (https://evegoils.nic.in/wsp/login) ದಾಸ್ತಾನು ಸ್ಥಿತಿ ಘೋಷಿಸಿ ನವೀಕರಿಸಬೇಕು. ಇದನ್ನು ಸಕಾಲಕ್ಕೆ https://foodstock.dfpd.gov.inಗೆ ರವಾನಿಸಲಾಗುತ್ತದೆ. ಗೋಧಿ ದಾಸ್ತಾನು ಪೋರ್ಟಲ್‌ನಲ್ಲಿ ನೋಂದಾಯಿಸದ, ದಾಸ್ತಾನು ಮಿತಿ ಉಲ್ಲಂಘಿಸುವ ಯಾವುದೇ ಘಟಕವನ್ನು ಅಗತ್ಯ ಸರಕುಗಳ ಕಾಯ್ದೆ 1955ರ ಸೆಕ್ಷನ್ 6 ಮತ್ತು 7ರಡಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿಗಿಂತ ಕೆಟ್ಟದಾಗಿ ವರ್ತಿಸುತ್ತಿದೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕೆ

ಒಂದು ವೇಳೆ ಸಂಸ್ಥೆಗಳು ನಿಗದಿಗಿಂತ ಹೆಚ್ಚು ಗೋಧಿ ದಾಸ್ತಾನು ಹೊಂದಿದ್ದರೆ ಅಧಿಸೂಚನೆ ಹೊರಡಿಸಿದ 15 ದಿನಗಳಲ್ಲಿ ನಿಗದಿತ ಮಿತಿಗೆ ತರಬೇಕಾಗುತ್ತದೆ. ದೇಶದಲ್ಲಿ ಗೋಧಿ ಕೃತಕ ಅಭಾವ ಉಂಟಾಗದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಈ ದಾಸ್ತಾನು ಮಿತಿ ಜಾರಿಗೊಳಿಸಿ ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತಾರೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಮೇ 27ರವರೆಗೆ ರಾಜ್ಯ ಸಂಸ್ಥೆಗಳು ಮತ್ತು ಎಫ್‌ಸಿಐ ಮೂಲಕ ಒಟ್ಟು 298.17 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us