ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ; ವರದಿ ಅವೈಜ್ಞಾನಿಕ ಎಂದ ಕೇಂದ್ರ ಸರ್ಕಾರ

| Updated By: ganapathi bhat

Updated on: Oct 15, 2021 | 9:35 PM

Global Hunger Index: ವೈಜ್ಞಾನಿಕವಾಗಿ ಅಪೌಷ್ಠಿಕತೆ ಮಟ್ಟ ಅಳತೆ ಮಾಡಲು ವ್ಯಕ್ತಿಯ ತೂಕ ಮತ್ತು ಎತ್ತರ ಇತ್ಯಾದಿ ವಿಧಾನ ಅಗತ್ಯ ಇರುತ್ತದೆ. ಟೆಲಿಫೋನ್ ಮೂಲಕ ನಡೆಸಿರುವ ಈ ಗಣತಿ ಸರಿಯಲ್ಲ ಎಂದು ಹೇಳಲಾಗಿದೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ; ವರದಿ ಅವೈಜ್ಞಾನಿಕ ಎಂದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಜಾಗತಿಕ ಹಸಿವು ಸೂಚ್ಯಂಕದ ವಾರ್ಷಿಕ ವರದಿ ತಯಾರಿಸಲು ಮತ್ತು ಲೆಕ್ಕಿಸಲು ಬಳಸಿರುವ ವಿಧಾನ ಅವೈಜ್ಞಾನಿಕವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ನೇ ಸ್ಥಾನಕ್ಕೆ ಭಾರತವು ಕುಸಿದಿದೆ. ಭಾರತವು ನೆರೆಯ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತಲೂ ಕಳಪೆ ಆಗಿರುವುದು ವರದಿಯಲ್ಲಿ ಕಂಡುಬಂದಿದೆ. ವರದಿ ಬಿಡುಗಡೆಯ ಬಳಿಕ ಕೇಂದ್ರ ಹೀಗೆ ಪ್ರತಿಕ್ರಿಯಸಿದೆ.

ಜಾಗತಿಕ ಹಸಿವು ಸೂಚ್ಯಂಕ ವರದಿ 2021 ರಲ್ಲಿ ಭಾರತದ ಸ್ಥಾನ ಕುಸಿತ ಕಂಡಿದೆ. ಇದು ಎಫ್​ಎಒ (ಯುಎನ್​ನ ಆಹಾರ ಮತ್ತು ಕೃಷಿ ಸಂಸ್ಥೆ) ವರದಿ ತಯಾರಿಸಲು ಬಳಸಿರುವ ವಿಧಾನ ಅವೈಜ್ಞಾನಿಕವಾಗಿದೆ. ಅವರು ನಾಲ್ಕು ಪ್ರಶ್ನೆಯ ಒಪಿನಿಯನ್ ಪೋಲ್ ಮೂಲಕ ಈ ವರದಿ ತಯಾರಿಸಿದ್ದಾರೆ. ಈ ವಿಧಾನದಲ್ಲಿ ಅಪೌಷ್ಠಿಕತೆಯನ್ನು, ಆಹಾರ ಪದಾರ್ಥಗಳ ಲಭ್ಯತೆಯನ್ನು ಅಳೆಯುವುದು ಅಸಾಧ್ಯ. ವೈಜ್ಞಾನಿಕವಾಗಿ ಅಪೌಷ್ಠಿಕತೆ ಮಟ್ಟ ಅಳತೆ ಮಾಡಲು ವ್ಯಕ್ತಿಯ ತೂಕ ಮತ್ತು ಎತ್ತರ ಇತ್ಯಾದಿ ವಿಧಾನ ಅಗತ್ಯ ಇರುತ್ತದೆ. ಟೆಲಿಫೋನ್ ಮೂಲಕ ನಡೆಸಿರುವ ಈ ಗಣತಿ ಸರಿಯಲ್ಲ ಎಂದು ಹೇಳಲಾಗಿದೆ.

ಕೊರೊನಾ ಕಾಲದಲ್ಲಿ ಸಂಪೂರ್ಣ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಈ ವರದಿ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಹೇಳಲಾಗಿದೆ. ಈ ಗಣತಿಯಲ್ಲಿ ಕೇಳಿದ ಪ್ರಶ್ನಾವಳಿಯಲ್ಲಿ ಆಹಾರ ಸಹಾಯವನ್ನು ಜನರು ಸರ್ಕಾರದಿಂದ ಅಥವಾ ಯಾವುದೇ ಮೂಲಗಳಿಂದ ಪಡೆದುಕೊಂಡಿದ್ದಾರೆಯೇ ಎಂಬ ಬಗ್ಗೆ ಕೇಳಿಲ್ಲ. ಈ ಪೋಲ್ ನಡೆಸಿರುವವರು ಭಾರತ ಹಾಗೂ ಇತರ ದೇಶಗಳ ಬಗ್ಗೆ ಅನುಮಾನಿತರಾಗೇ ಇದ್ದಾರೆ ಎಂದು ತಿಳಿಸಲಾಗಿದೆ.

ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ (GHI) ಪ್ರಕಾರ ಚೀನಾ, ಬ್ರೆಜಿಲ್ ಮತ್ತು ಕುವೈತ್ ಸೇರಿದಂತೆ 18 ದೇಶಗಳು ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿವೆ. 2020 ರಲ್ಲಿ ಭಾರತ 107 ದೇಶಗಳ ಪೈಕಿ 94 ನೇ ಸ್ಥಾನದಲ್ಲಿತ್ತು. ಈಗ ಈ ಪಟ್ಟಿಯಲ್ಲಿ 116 ದೇಶಗಳಿದ್ದರೆ, ಭಾರತ 101 ನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಜಿಹೆಚ್ಐ ಸ್ಕೋರ್ ಕೂಡ ಕಡಿಮೆಯಾಗಿದೆ. 2000 ರಲ್ಲಿ 38.8 ಇದ್ದ್ದು 2012 ಮತ್ತು 2021 ರ ನಡುವೆ 28.8 – 27.5 ರ ಒಳಗೆ ಇದೆ.

ನೇಪಾಳ (76), ಬಾಂಗ್ಲಾದೇಶ (76), ಮ್ಯಾನ್ಮಾರ್ (71) ಮತ್ತು ಪಾಕಿಸ್ತಾನ (92) ನಂತಹ ನೆರೆಯ ದೇಶಗಳು ತನ್ನ ಪ್ರಜೆಗಳಿಗೆ ಭಾರತಕ್ಕಿಂತ ಉತ್ತಮ ಆಹಾರ ನೀಡಿದರೂ, ಈ ದೇಶಗಳನ್ನು ‘ಆತಂಕಕಾರಿ’ ಹಸಿವಿನ ವರ್ಗದಲ್ಲಿ ಸೇರಿಸಲಾಗಿದೆ. ವರದಿಯ ಪ್ರಕಾರ ಭಾರತದಲ್ಲಿ 1998-2002ರ ನಡುವೆ ಮಕ್ಕಳಲ್ಲಿ ಅಪೌಷ್ಟಿಕತೆ ಪಾಲು 17.1 ಶೇಕಡದಿಂದ 17.3 ಪ್ರತಿಶತಕ್ಕೆ ಏರಿಕೆಯಾಗಿದೆ. “ಕೊವಿಡ್ -19 ಮತ್ತು ಭಾರತದಲ್ಲಿ ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳಿಂದ ಜನರು ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ, ವಿಶ್ವದಾದ್ಯಂತ ಅತಿಹೆಚ್ಚು ಮಕ್ಕಳ ಅಪೌಷ್ಟಿಕತೆ ಹೊಂದಿರುವ ದೇಶ” ಎಂದು ವರದಿ ಹೇಳಿದೆ.

ಇದನ್ನೂ ಓದಿ: Global Hunger Index 2021 ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ; ಈ ಸೂಚ್ಯಂಕ ಏನನ್ನು ಸೂಚಿಸುತ್ತದೆ?

ಇದನ್ನೂ ಓದಿ: ಪಾಕ್, ಬಾಂಗ್ಲಾ, ನೇಪಾಳಕ್ಕಿಂತಲೂ ಭಾರತದಲ್ಲಿ ಹಸಿವು, ಅಪೌಷ್ಟಿಕತೆ ಹೆಚ್ಚಿರುವುದು ಕಳವಳಕಾರಿ: ಕರ್ನಾಟಕ ಕಾಂಗ್ರೆಸ್

Published On - 9:34 pm, Fri, 15 October 21