ಗುಜರಾತ್‌ನಲ್ಲಿ ಟಾಟಾದ ಭಾರತದ ಮೊದಲ ವಾಣಿಜ್ಯ ಸೆಮಿಕಂಡಕ್ಟರ್ ಫ್ಯಾಬ್ ಘಟಕಕ್ಕೆ ಕೇಂದ್ರ ಅನುಮೋದನೆ

| Updated By: ನಯನಾ ರಾಜೀವ್

Updated on: Mar 01, 2024 | 9:26 AM

ಮುಂದಿನ 100 ದಿನಗಳಲ್ಲಿ ಎಲ್ಲಾ ಮೂರು ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣವನ್ನು ಪ್ರಾರಂಭಿಸಲಾಗುವುದು. ತಿಂಗಳಿಗೆ ಒಟ್ಟು 50,000 ವೇಫರ್‌ಗಳನ್ನು ತಯಾರಿಸಲಾಗುವುದು. ಈ ಸೌಲಭ್ಯದ ಮೂಲಕ ವಾರ್ಷಿಕ 300 ಕೋಟಿ ಚಿಪ್‌ಗಳನ್ನು ತಯಾರಿಸಲಾಗುವುದು. ಅಸ್ಸಾಂನಲ್ಲಿ ಮೊದಲ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಾಗುವುದು. ಇಲ್ಲಿಂದ ದಿನಕ್ಕೆ 48 ಮಿಲಿಯನ್ ಚಿಪ್‌ಗಳನ್ನು ತಯಾರಿಸಲಾಗುವುದು ಎಂದು ವೈಷ್ಣವ್ ಹೇಳಿದ್ದಾರೆ

ದೆಹಲಿ ಫೆಬ್ರವರಿ 29: ದೇಶದಲ್ಲಿ ಮೂರು ಸೆಮಿಕಂಡಕ್ಟರ್ ಘಟಕಗಳನ್ನು (semiconductor plants) ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. “ಇಂದು ಪ್ರಧಾನಿಯವರು ದೇಶದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಅನ್ನು ಸ್ಥಾಪಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮೊದಲ ವಾಣಿಜ್ಯ ಸೆಮಿಕಂಡಕ್ಟರ್ ಫ್ಯಾಬ್ ಅನ್ನು ಟಾಟಾ (Tata) ಮತ್ತು ಪವರ್‌ಚಿಪ್-ತೈವಾನ್ ಸ್ಥಾಪಿಸಲಿದೆ. ಈ ಘಟಕ ಗುಜರಾತಿನ  ಧೋಲೆರಾದಲ್ಲಿದೆ” ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ. ಮುಂದಿನ 100 ದಿನಗಳಲ್ಲಿ ಎಲ್ಲಾ ಮೂರು ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣವನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.

ತಿಂಗಳಿಗೆ ಒಟ್ಟು 50,000 ವೇಫರ್‌ಗಳನ್ನು ತಯಾರಿಸಲಾಗುವುದು. ಈ ಸೌಲಭ್ಯದ ಮೂಲಕ ವಾರ್ಷಿಕ 300 ಕೋಟಿ ಚಿಪ್‌ಗಳನ್ನು ತಯಾರಿಸಲಾಗುವುದು. ಅಸ್ಸಾಂನಲ್ಲಿ ಮೊದಲ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲಾಗುವುದು. ಇಲ್ಲಿಂದ ದಿನಕ್ಕೆ 48 ಮಿಲಿಯನ್ ಚಿಪ್‌ಗಳನ್ನು ತಯಾರಿಸಲಾಗುವುದು ಎಂದು ವೈಷ್ಣವ್ ಹೇಳಿದರು.

ಸಚಿವರ ಸುದ್ದಿಗೋಷ್ಠಿ

“ಎಲ್ಲಾ ಮೂರು ಘಟಕಗಳಲ್ಲಿ ಸಂಚಿತ ಹೂಡಿಕೆ ಒಂದು ಲಕ್ಷದ ಇಪ್ಪತ್ತಾರು ಸಾವಿರ ಕೋಟಿಯಾಗಿರುತ್ತದೆ. FAB ನಲ್ಲಿ ಹೂಡಿಕೆ 91,000 ಕೋಟಿ ಆಗಿರುತ್ತದೆ. ಅಸ್ಸಾಂ ಘಟಕದಲ್ಲಿ 27,000 ಕೋಟಿ ಹೂಡಿಕೆಯಾಗಲಿದೆ. ಸನಂದ್ ಘಟಕದಲ್ಲಿ ₹7,600 ಕೋಟಿ ಹೂಡಿಕೆಯಾಗಲಿದೆ’ ಸುದ್ದಿಗೋಷ್ಠಿಯಲ್ಲಿ ಸಚಿವರು ವಿವರಿಸಿದ್ದಾರೆ. ಇದರೊಂದಿಗೆ ಸೆಮಿಕಂಡಕ್ಟರ್ ಯೋಜನೆಯಲ್ಲಿನ ಒಟ್ಟು ಹೂಡಿಕೆಯು ಸುಮಾರು ₹1.26 ಲಕ್ಷ ಕೋಟಿಗಳಷ್ಟಿದೆ.

“ಸಿಜಿ ಪವರ್ ಗುಜರಾತ್‌ನಲ್ಲಿ ಅರೆವಾಹಕ ಘಟಕವನ್ನು ಜಪಾನ್‌ನ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಮತ್ತು ಥಾಯ್ಲೆಂಡ್‌ನ ಸ್ಟಾರ್ಸ್ ಮೈಕ್ರೋಎಲೆಕ್ಟ್ರಾನಿಕ್ಸ್ ಜೊತೆಯಲ್ಲಿ ಸ್ಥಾಪಿಸಲಿದೆ” ಎಂದು ಸಚಿವರು ಹೇಳಿದರು.

ಸಚಿವ ಸಂಪುಟದ ಇತರ ನಿರ್ಧಾರಗಳು

ಕೇಂದ್ರ ಸಚಿವ ಸಂಪುಟವು ₹ 75,000 ಕೋಟಿ ರೂಫ್‌ಟಾಪ್ ಸೋಲಾರ್ ಯೋಜನೆಗೆ ಅನುಮೋದನೆ ನೀಡಿದ್ದು, ಇದರ ಅಡಿಯಲ್ಲಿ ಒಂದು ಕೋಟಿ ಕುಟುಂಬಗಳು ತಮ್ಮ ಮನೆಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಹಣಕಾಸಿನ ನೆರವು ಪಡೆಯುತ್ತಾರೆ.

ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆಗೆ 75,000 ಕೋಟಿ ರೂ ಅನುದಾನ; ಕೇಂದ್ರ ಸಂಪುಟ ಒಪ್ಪಿಗೆ; ಒಂದು ಕೋಟಿ ಮನೆಗಳಿಗೆ ಸೋಲಾರ್ ಗುರಿ

ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ ನಡೆದಿದೆ. ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ಗೆ ಇಂದು ಅನುಮೋದನೆ ನೀಡಲಾಗಿದೆ, ಈ ಯೋಜನೆಯಡಿಯಲ್ಲಿ ಒಂದು ಕೋಟಿ ಕುಟುಂಬಗಳು 300 ಯೂನಿಟ್‌ಗಳ ಉಚಿತ ವಿದ್ಯುತ್ ಪಡೆಯುತ್ತವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.ಇದಲ್ಲದೇ, ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ ಮೇಲೆ 2024 ರ ಖಾರಿಫ್ ಸೀಸನ್‌ಗೆ ಪೋಷಕಾಂಶ ಆಧಾರಿತ ಸಬ್ಸಿಡಿ ದರಗಳನ್ನು ಮತ್ತು ಎನ್‌ಬಿಎಸ್ ಯೋಜನೆಯಡಿಯಲ್ಲಿ 3 ಹೊಸ ರಸಗೊಬ್ಬರ ಶ್ರೇಣಿಗಳನ್ನು ಸೇರಿಸಲು ಸರ್ಕಾರವು ಅನುಮತಿ ನೀಡಿದೆ. ” ಎನ್‌ಬಿಎಸ್ ಆಧಾರಿತ ಪೋಷಕಾಂಶಗಳ ಮೇಲೆ ಸರ್ಕಾರವು ₹ 24,420 ಕೋಟಿ ಸಬ್ಸಿಡಿ ನೀಡುತ್ತದೆ” ಎಂದು ಠಾಕೂರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Thu, 29 February 24