ಇಡೀ ಈಶಾನ್ಯ ರಾಜ್ಯಗಳಿಂದ ಎಎಫ್‌ಎಸ್‌ಪಿಎ ತೆಗೆದು ಹಾಕಲು ಕೇಂದ್ರ ಪ್ರಯತ್ನಿಸುತ್ತಿದೆ: ನರೇಂದ್ರ ಮೋದಿ

ಇಡೀ ಈಶಾನ್ಯ ರಾಜ್ಯಗಳಿಂದ ಎಎಫ್‌ಎಸ್‌ಪಿಎ ತೆಗೆದು ಹಾಕಲು ಕೇಂದ್ರ ಪ್ರಯತ್ನಿಸುತ್ತಿದೆ: ನರೇಂದ್ರ ಮೋದಿ
ಅಸ್ಸಾಂನಲ್ಲಿ ಮೋದಿ

ಇತ್ತೀಚಿನ ವರ್ಷಗಳಲ್ಲಿ ಸುಧಾರಿತ ನೆಲದ ಪರಿಸ್ಥಿತಿಯಿಂದಾಗಿ  ಅಸ್ಸಾಂನ 23 ಜಿಲ್ಲೆಗಳಿಂದ ಎಎಫ್‌ಎಸ್‌ಪಿಎ ಅನ್ನು ತೆಗೆದುಹಾಕಲಾಗಿದೆ ಎಂದು ಮೋದಿ ಹೇಳಿದರು. ನಾವು ರಾಜ್ಯದ ಇತರ ಭಾಗಗಳಲ್ಲಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದ್ದೇವೆ ಇದರಿಂದ ಎಎಫ್‌ಎಸ್‌ಪಿಎ...

TV9kannada Web Team

| Edited By: Rashmi Kallakatta

Apr 28, 2022 | 2:52 PM

ಗುವಾಹಟಿ: ಕ್ರಿಮಿನಲ್ ಮೊಕದ್ದಮೆಯಿಂದ ವ್ಯಾಪಕ ಅಧಿಕಾರ ಮತ್ತು ವಿನಾಯಿತಿಯನ್ನು ಒದಗಿಸುವ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA ) ವ್ಯಾಪ್ತಿಯಿಂದ ಇಡೀ ಈಶಾನ್ಯ ರಾಜ್ಯವನ್ನು ತೆಗೆದುಹಾಕಲು ಕೇಂದ್ರವು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಹೇಳಿದ್ದಾರೆ. “ದೀರ್ಘಕಾಲದಿಂದ, ಈಶಾನ್ಯದ ಅನೇಕ ರಾಜ್ಯಗಳು ಎಎಫ್‌ಎಸ್‌ಪಿಎ ವ್ಯಾಪ್ತಿಯಲ್ಲಿವೆ. ಆದರೆ ಕಳೆದ ಎಂಟು ವರ್ಷಗಳಲ್ಲಿ, ಶಾಶ್ವತ ಶಾಂತಿ ಮತ್ತು ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯಿಂದಾಗಿ, ನಾವು ಪ್ರದೇಶದ ಹಲವಾರು ಭಾಗಗಳಿಂದ ಕಾಯಿದೆಯ ನಿಬಂಧನೆಗಳನ್ನು ತೆಗೆದುಹಾಕಿದ್ದೇವೆ ಎಂದು ಮೋದಿ ಅಸ್ಸಾಂನ (Assam) ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಲೋರಿಂಗ್ಥೆಪಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು. ಡಿಸೆಂಬರ್‌ನಲ್ಲಿ ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ 14 ನಾಗರಿಕರ ಹತ್ಯೆಗಳು ಎಎಫ್‌ಎಸ್‌ಪಿಎ ಮೇಲೆ ಮತ್ತೆ ಗಮನ ಸೆಳೆದಿದ್ದು ಅದನ್ನು ಹಿಂತೆಗೆದುಕೊಳ್ಳುವ ಬೇಡಿಕೆಗಳಿಗೆ ದನಿಗೂಡಿಸಿದವು. ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ಈ ಪ್ರದೇಶದಲ್ಲಿನ ಕಾನೂನಿನ ವ್ಯಾಪ್ತಿಯ ಅಡಿಯಲ್ಲಿ ತೊಂದರೆಗೊಳಗಾದ ಪ್ರದೇಶಗಳನ್ನು ಕಡಿಮೆ ಮಾಡಿದೆ. ಕಳೆದ ಎಂಟು ವರ್ಷಗಳಲ್ಲಿ ಈಶಾನ್ಯದಲ್ಲಿ ಹಿಂಸಾತ್ಮಕ ಘಟನೆಗಳಲ್ಲಿ ಶೇ75 ಇಳಿಕೆಯಾಗಿದೆ ಮತ್ತು ಅದಕ್ಕಾಗಿಯೇ ಮೇಘಾಲಯ ಮತ್ತು ತ್ರಿಪುರವನ್ನು ಎಎಫ್‌ಎಸ್‌ಪಿಎ ವ್ಯಾಪ್ತಿಯಿಂದ ತೆಗೆದುಹಾಕಲಾಗಿದೆ ಎಂದು ಮೋದಿ ಹೇಳಿದರು. ಅಸ್ಸಾಂನಲ್ಲಿ, ಇದು ಈಗ ಮೂರು ದಶಕಗಳಿಂದ ಜಾರಿಯಲ್ಲಿದೆ. ಪರಿಸ್ಥಿತಿಯಲ್ಲಿ ಸುಧಾರಣೆಯ ಕೊರತೆಯಿಂದಾಗಿ ಹಿಂದಿನ ಸರ್ಕಾರಗಳು ಅದರ ಜಾರಿಯನ್ನು ಪದೇ ಪದೇ ವಿಸ್ತರಿಸುತ್ತಿದ್ದವು.

ಆದರೆ ಇತ್ತೀಚಿನ ವರ್ಷಗಳಲ್ಲಿ ಸುಧಾರಿತ ನೆಲದ ಪರಿಸ್ಥಿತಿಯಿಂದಾಗಿ  ಅಸ್ಸಾಂನ 23 ಜಿಲ್ಲೆಗಳಿಂದ ಎಎಫ್‌ಎಸ್‌ಪಿಎ ಅನ್ನು ತೆಗೆದುಹಾಕಲಾಗಿದೆ ಎಂದು ಮೋದಿ ಹೇಳಿದರು. ನಾವು ರಾಜ್ಯದ ಇತರ ಭಾಗಗಳಲ್ಲಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದ್ದೇವೆ ಇದರಿಂದ ಎಎಫ್‌ಎಸ್‌ಪಿಎ ಅನ್ನು ಅಲ್ಲಿಂದ ತೆಗೆದುಹಾಕಬಹುದು. ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಕಾಯ್ದೆಯನ್ನು ತೆಗೆದುಹಾಕಲು ಇದೇ ರೀತಿಯ ಪ್ರಯತ್ನಗಳು ನಡೆಯುತ್ತಿವೆ.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು “ನಾಗರಿಕ ಶಕ್ತಿಯ ಸಹಾಯಕ್ಕಾಗಿ” ಸಶಸ್ತ್ರ ಪಡೆಗಳನ್ನು ಸೇರಿಸಿಕೊಳ್ಳಲು ಬ್ರಿಟಿಷರು ಆಗಸ್ಟ್ 1942 ರಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದರು. ಎಎಫ್‌ಎಸ್‌ಪಿಎ ಈ ವಸಾಹತುಶಾಹಿ ಯುಗದ ಸುಗ್ರೀವಾಜ್ಞೆಯ ಮಾದರಿಯಲ್ಲಿದ್ದು ಸೆಪ್ಟೆಂಬರ್ 1958 ರಲ್ಲಿ ಸಂಸತ್ತಿನಲ್ಲಿ ಘೋಷಿಸಲಾಯಿತು. ಗಡಿ ವಿವಾದಗಳನ್ನು ಬಗೆಹರಿಸಿರುವ ಬಗ್ಗೆ ಈಶಾನ್ಯ ರಾಜ್ಯಗಳನ್ನು ಮೋದಿ ಶ್ಲಾಘಿಸಿದರು. ಅಸ್ಸಾಂ-ಮೇಘಾಲಯ ಗಡಿ ಒಪ್ಪಂದವನ್ನು ಉಲ್ಲೇಖಿಸಿದ ಮೋದಿ ಇದು ಪ್ರದೇಶದ ಇತರ ರಾಜ್ಯಗಳಲ್ಲಿನ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಐದು ದಶಕಗಳಷ್ಟು ಹಳೆಯದಾದ ಗಡಿ ವಿವಾದವನ್ನು ಪರಿಹರಿಸಲು ಅಸ್ಸಾಂ ಮತ್ತು ಮೇಘಾಲಯದ ಮುಖ್ಯಮಂತ್ರಿಗಳು ಮಾರ್ಚ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಪ್ರದೇಶದಲ್ಲಿನ ರಾಜ್ಯಗಳ ನಡುವಿನ ಗಡಿ ವಿವಾದಗಳನ್ನು ಸೌಹಾರ್ದಯುತವಾಗಿ ಪರಿಹರಿಸಲಾಗುತ್ತಿದೆ ಎಂದು ಮೋದಿ ಹೇಳಿದರು. “ಅಸ್ಸಾಂ ಮತ್ತು ಮೇಘಾಲಯ ನಡುವಿನ ಒಪ್ಪಂದವು ಇತರ ವಿವಾದಗಳ ಪರಿಹಾರಕ್ಕೆ ಸ್ಫೂರ್ತಿ ನೀಡುತ್ತದೆ ಮತ್ತು ಇದು ಪ್ರದೇಶದಾದ್ಯಂತ ಅಭಿವೃದ್ಧಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.”

ಕಳೆದ ಸೆಪ್ಟೆಂಬರ್‌ನಲ್ಲಿ ಕರ್ಬಿ ಆಂಗ್ಲಾಂಗ್‌ನಲ್ಲಿ ಆರು ಬಂಡುಕೋರ ಸಂಘಟನೆಗಳ ಜೊತೆಗೆ 2020 ರಲ್ಲಿ ಮೂರು ಬೋಡೋ ಸಂಘಟನೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾದ ಶಾಂತಿ ಒಪ್ಪಂದವನ್ನು ಮೋದಿ ಶ್ಲಾಘಿಸಿದರು. “ಹಿಂದೆ ಬಾಂಬ್‌ ಮತ್ತು ಗುಂಡಿನ ಸದ್ದುಗಳು ಈ ಭಾಗಗಳಲ್ಲಿ ಪ್ರತಿಧ್ವನಿಸುತ್ತಿದ್ದವು, ಆದರೆ ಈಗ ನಾವು ಚಪ್ಪಾಳೆಗಳನ್ನು ಕೇಳುತ್ತೇವೆ. ನಮ್ಮ ನಿಯಮಿತ ಮತ್ತು ಪ್ರಾಮಾಣಿಕ ಪ್ರಯತ್ನಗಳು ಇತರ ಎಲ್ಲಾ ಕ್ಷೇತ್ರಗಳಲ್ಲಿಯೂ ಶಾಶ್ವತ ಶಾಂತಿಯನ್ನು ತರುತ್ತದೆ ಎಂದು ಮೋದಿ ಹೇಳಿದ್ದಾರೆ.

ಕರ್ಬಿ ಸಂಘಟನೆಗಳೊಂದಿಗಿನ ಶಾಂತಿ ಒಪ್ಪಂದದ ಭಾಗವಾಗಿ, ಮೋದಿ ಅವರು ಲೋರಿಂಗ್ಥೆಪಿಯಲ್ಲಿ ಮೂರು ಕಾಲೇಜುಗಳಿಗೆ ಶಂಕುಸ್ಥಾಪನೆ ಮಾಡಿದರು. ಅಸ್ಸಾಂನ ಪ್ರತಿ ಜಿಲ್ಲೆಯಲ್ಲಿ ಹೆಕ್ಟೇರ್ ಪ್ರದೇಶದಲ್ಲಿ 75 ಜಲಮೂಲಗಳಿಗಾಗಿ ಅಮೃತ ಸರೋವರ ಯೋಜನೆಗೂ ಮೋದಿ ಚಾಲನೆ ನೀಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ಮತ್ತು ಇತರ ಪ್ರದೇಶಗಳಿಗೆ ಶಾಂತಿ ಮತ್ತು ಅಭಿವೃದ್ಧಿಯನ್ನು ತರಲು ಮೋದಿ ಅವರ ಪ್ರಯತ್ನಗಳಿಗೆ ಧನ್ಯವಾದ ಅರ್ಪಿಸಿದರು. ಲೋರಿಂಗ್ಥೇಪಿಯಲ್ಲಿ ₹1000 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮೇ 2-4 ರವರೆಗೆ ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್​​ಗೆ ಪ್ರವಾಸ ಕೈಗೊಳ್ಳಲಿದ್ದಾರೆ ಮೋದಿ

Follow us on

Related Stories

Most Read Stories

Click on your DTH Provider to Add TV9 Kannada