AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈ ಶೇಖ್​​ಗೆ ಸೆಕ್ಸ್​​ ಪಾರ್ಟ್ನರ್ ಬೇಕಂತೆ, ಚೈತನ್ಯಾನಂದ ವಿದ್ಯಾರ್ಥಿನಿಗೆ ಮಾಡಿದ್ದ ವಾಟ್ಸಾಪ್ ಚಾಟ್​​ನಲ್ಲಿ ಏನೇನಿತ್ತು?

ದೆಹಲಿಯ ಶಾರದಾ ಪೀಠದ ಚೈತನ್ಯಾನಂದ ಸರಸ್ವತಿ(Chaitanyananda Saraswati) ಬಗ್ಗೆ ದಿನಕ್ಕೊಂದೊಂದು ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಈಗ ಅವರ ವಾಟ್ಸಾಪ್ ಚಾಟ್​ಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ವಿದ್ಯಾರ್ಥಿನಿಗೆ ಕಳುಹಿಸಿರುವ ಚಾಟ್​​ನಲ್ಲಿ ದುಬೈ ಶೇಖ್​ಗೆ ಸೆಕ್ಸ್​ ಪಾರ್ಟ್ನರ್ ಬೇಕಂತೆ ಎಂದು ಕೇಳಿರುವುದು ತಿಳಿದುಬಂದಿದೆ. ಹೀಗೆ ಹತ್ತು ಹಲವು ಚಾಟ್​ಗಳು ಸಿಕ್ಕಿವೆ, ಅದರಲ್ಲಿ ಸ್ವೀಟಿ, ಬೇಬಿ ಎಂದು ಕರೆದಿರುವುದು ಕಂಡು ಬಂದಿದೆ. ಈ ರೀತಿಯ ಪದಗಳನ್ನು ಬಳಸಿ ನಿರಂತರ ಸಂದೇಶಗಳನ್ನು ಅವರು ಕಳುಹಿಸುತ್ತಿದ್ದರು. ಬೇಬಿ ನೀನು ಎಲ್ಲಿದ್ದೀಯಾ, ಗುಡ್ ಮಾರ್ನಿಂಗ್ ಬೇಬಿ, ನಮ್ಮ ಮೇಲೆ ನಿನಗೆ ಯಾಕೆ ಕೋಪ? ಹೀಗೆ ಹತ್ತು ಹಲವು ಸಂದೇಶಗಳನ್ನು ವಿದ್ಯಾರ್ಥಿನಿಯರಿಗೆ ಕಳುಹಿಸಲಾಗುತ್ತಿತ್ತು.

ದುಬೈ ಶೇಖ್​​ಗೆ 	ಸೆಕ್ಸ್​​ ಪಾರ್ಟ್ನರ್ ಬೇಕಂತೆ, ಚೈತನ್ಯಾನಂದ ವಿದ್ಯಾರ್ಥಿನಿಗೆ ಮಾಡಿದ್ದ ವಾಟ್ಸಾಪ್ ಚಾಟ್​​ನಲ್ಲಿ ಏನೇನಿತ್ತು?
ಚೈತನ್ಯಾನಂದ
ನಯನಾ ರಾಜೀವ್
|

Updated on:Oct 01, 2025 | 1:30 PM

Share

ನವದೆಹಲಿ, ಅಕ್ಟೋಬರ್ 01: ದೆಹಲಿಯ ಶಾರದಾ ಪೀಠದ ಚೈತನ್ಯಾನಂದ ಸರಸ್ವತಿ(Chaitanyananda Saraswati) ಬಗ್ಗೆ ದಿನಕ್ಕೊಂದೊಂದು ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಈಗ ಅವರ ವಾಟ್ಸಾಪ್ ಚಾಟ್​ಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ವಿದ್ಯಾರ್ಥಿನಿಗೆ ಕಳುಹಿಸಿರುವ ಚಾಟ್​​ನಲ್ಲಿ ದುಬೈ ಶೇಖ್​ಗೆ ಸೆಕ್ಸ್​ ಪಾರ್ಟ್ನರ್ ಬೇಕಂತೆ ಎಂದು ಕೇಳಿರುವುದು ತಿಳಿದುಬಂದಿದೆ.

ಸ್ವಾಮಿಯ ಚಾಟ್ ಹೀಗಿತ್ತು ಸ್ವಾಮಿ-ಒಬ್ಬ ದುಬೈ ಶೇಖ್ ಒಳ್ಳೆಯ ಲೈಂಗಿಕ ಸಂಗಾತಿಯನ್ನು ಬಯಸುತ್ತಿದ್ದಾನೆ ನಿನಗೆ ಯಾರಾದರೂ ಒಳ್ಳೆಯ ಸ್ನೇಹಿತರಿದ್ದಾರಾ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ವಿದ್ಯಾರ್ಥಿನಿ, ಇಲ್ಲ ಯಾರೂ ಇಲ್ಲ ಎಂದು ಉತ್ತರಿಸಿದ್ದಳು. ಅದಕ್ಕೆ ಸ್ವಾಮಿ ಅದು ಹೇಗೆ ಸಾಧ್ಯ, ನಿನ್ನ ಸಹಪಾಠಿ ಅಥವಾ ಜ್ಯೂನಿಯರ್ ಯಾರೂ ಇಲ್ವಾ ಎಂದು ಪ್ರಶ್ನಿಸಿದ್ದರು.

ಹೀಗೆ ಹತ್ತು ಹಲವು ಚಾಟ್​ಗಳು ಸಿಕ್ಕಿವೆ, ಅದರಲ್ಲಿ ಸ್ವೀಟಿ, ಬೇಬಿ ಎಂದು ಕರೆದಿರುವುದು ಕಂಡು ಬಂದಿದೆ. ಈ ರೀತಿಯ ಪದಗಳನ್ನು ಬಳಸಿ ನಿರಂತರ ಸಂದೇಶಗಳನ್ನು ಅವರು ಕಳುಹಿಸುತ್ತಿದ್ದರು. ಬೇಬಿ ನೀನು ಎಲ್ಲಿದ್ದೀಯಾ, ಗುಡ್ ಮಾರ್ನಿಂಗ್ ಬೇಬಿ, ನಮ್ಮ ಮೇಲೆ ನಿನಗೆ ಯಾಕೆ ಕೋಪ? ಹೀಗೆ ಹತ್ತು ಹಲವು ಸಂದೇಶಗಳನ್ನು ವಿದ್ಯಾರ್ಥಿನಿಯರಿಗೆ ಕಳುಹಿಸಲಾಗುತ್ತಿತ್ತು.

ಮತ್ತಷ್ಟು ಓದಿ: ಶಾರದಾ ಪೀಠದ ಚೈತನ್ಯಾನಂದ ಸ್ವಾಮಿ ಕೊಟ್ಟ ಕಿರುಕುಳದ ಮಾಹಿತಿ ಎಳೆಎಳೆಯಾಗಿ ಬಿಚ್ಚಿಟ್ಟ ವಿದ್ಯಾರ್ಥಿನಿಯರು

ಕನಿಷ್ಠ 17 ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿರುವ ಆರೋಪ ಹೊತ್ತಿರುವ 62 ವರ್ಷದ ಚೈತನ್ಯಾನಂದ ಸರಸ್ವತಿಯನ್ನು ಭಾನುವಾರ ಆಗ್ರಾದಲ್ಲಿ ಬಂಧಿಸಲಾಗಿತ್ತು. ಸುಮಾರು ಎರಡು ತಿಂಗಳಿನಿಂದ ಆತ ತಲೆಮರೆಸಿಕೊಂಡಿದ್ದ, ಆಗಾಗ ವೃಂದಾವನ, ಮಥುರಾ ಮತ್ತು ಆಗ್ರಾ ನಡುವೆ ಸ್ಥಳಾಂತರಗೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಸಣ್ಣ ಹೋಟೆಲ್‌ಗಳಲ್ಲಿ ತಂಗುತ್ತಿದ್ದರು ಮತ್ತು ಟ್ಯಾಕ್ಸಿಗಳನ್ನು ಬಳಸುತ್ತಿದ್ದರು.

ಆಗ್ರಾದ ಹೋಟೆಲ್​​ನಲ್ಲಿ ಪಾರ್ಥಸಾರಥಿ ಎನ್ನುವ ಹೆಸರಿನಲ್ಲಿ ರೂಂ ಬುಕ್ ಮಾಡಿದ್ದರು. ಸೆಪ್ಟೆಂಬರ್ 27 ರಿಂದ ಕೊಠಡಿ 101 ರಲ್ಲಿ ವಾಸವಿದ್ದರು. ಸಿಕ್ಕಿಬೀಳುವ ಮೊದಲು ಅವರು ತಮ್ಮ ಕೊಠಡಿಯಿಂದ ಹೊರಬಂದಿರಲಿಲ್ಲ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಅವರು ಈಗ ಐದು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಹದಿನೇಳು ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಚೈತನ್ಯಾನಂದ ಸರಸ್ವತಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅವರನ್ನು ನೈಋತ್ಯ ದೆಹಲಿಯಲ್ಲಿರುವ ಅವರ ಖಾಸಗಿ ಸಂಸ್ಥೆಗೆ ಕರೆದೊಯ್ಯಲಾಗಿದೆ. ವಿಚಾರಣೆ ವೇಳೆ ವಿದ್ಯಾರ್ಥಿನಿಯರಿಗೆ ಹಿಂಸೆ ನೀಡಲಾಗುತ್ತಿದ್ದ ಕೊಠಡಿಗೂ ಅವರನ್ನು ಕರೆದೊಯ್ಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸೆಪ್ಟೆಂಬರ್ 14 ರಂದು ಸಂತ್ರಸ್ತರಲ್ಲಿ ಒಬ್ಬರ ತಂದೆಗೆ ಬೆದರಿಕೆ ಕರೆ ಬಂದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಆ ಸಂಖ್ಯೆಯನ್ನು ಉತ್ತರಾಖಂಡದ ಹರಿ ಸಿಂಗ್ ಕೊಪ್ಕೋಟಿ (38) ಎಂದು ಗುರುತಿಸಲಾಗಿದ್ದು, ಆತನನ್ನು ಆತನ ಮನೆಯಲ್ಲಿ ಬಂಧಿಸಿ ದೆಹಲಿಗೆ ಕರೆತರಲಾಗಿದೆ.

ಚೈತನ್ಯಾನಂದ ಸರಸ್ವತಿ ಬಳಿ ಎರಡು ನಕಲಿ ವಿಸಿಟಿಂಗ್ ಕಾರ್ಡ್​ಗಳು ಸಿಕ್ಕಿವೆ. ಒಂದರಲ್ಲಿ ಅವರು ತಮ್ಮನ್ನು ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ. ಮತ್ತೊಂದರಲ್ಲಿ ಬ್ರಿಕ್ಸ್ ರಾಷ್ಟ್ರಗಳ ಗುಂಪಿನಲ್ಲಿ ಭಾರತದ ವಿಶೇಷ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:29 pm, Wed, 1 October 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ