ಶಾರದಾ ಪೀಠದಲ್ಲಿ ವಿದ್ಯಾರ್ಥಿನಿಯರಿಗೆ ಹಿಂಸೆ ಕೊಡಲೆಂದೇ ಇದ್ದ ಕೊಠಡಿಗೆ ಸ್ವಾಮಿಯನ್ನು ಕರೆದೊಯ್ದ ಪೊಲೀಸರು
ಹದಿನೇಳು ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಚೈತನ್ಯಾನಂದ ಸರಸ್ವತಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅವರನ್ನು ನೈಋತ್ಯ ದೆಹಲಿಯಲ್ಲಿರುವ ಅವರ ಖಾಸಗಿ ಸಂಸ್ಥೆಗೆ ಕರೆದೊಯ್ಯಲಾಗಿದೆ. ವಿಚಾರಣೆ ವೇಳೆ ವಿದ್ಯಾರ್ಥಿನಿಯರಿಗೆ ಹಿಂಸೆ ನೀಡಲಾಗುತ್ತಿದ್ದ ಕೊಠಡಿ ಪತ್ತೆಯಾಗಿದೆ, ಜತೆಗೆ ಸಿಸಿ ಕ್ಯಾಮರಾಗಳು ಕಣ್ಣಿಗೆ ಬಿದ್ದಿವೆ.

ನವದೆಹಲಿ, ಸೆಪ್ಟೆಂಬರ್ 30: ಹದಿನೇಳು ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಚೈತನ್ಯಾನಂದ ಸರಸ್ವತಿ(Chaitanyananda Sawaswati)ಯನ್ನು 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಅವರನ್ನು ನೈಋತ್ಯ ದೆಹಲಿಯಲ್ಲಿರುವ ಅವರ ಖಾಸಗಿ ಸಂಸ್ಥೆಗೆ ಕರೆದೊಯ್ಯಲಾಗಿದೆ. ವಿಚಾರಣೆ ವೇಳೆ ವಿದ್ಯಾರ್ಥಿನಿಯರಿಗೆ ಹಿಂಸೆ ನೀಡಲಾಗುತ್ತಿದ್ದ ಕೊಠಡಿಗೂ ಅವರನ್ನು ಕರೆದೊಯ್ಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅವರ ಫೋನ್ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ದೂರನ್ನು ಹಿಂಪಡೆಯುವಂತೆ ಸಂತ್ರಸ್ತೆಯ ತಂದೆಗೆ ಬೆದರಿಕೆ ಹಾಕಿದ್ದಕ್ಕಾಗಿ ಆತನ ಸಹಚರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ಅಂಡ್ ರಿಸರ್ಚ್ ಗೆ ಕರೆದೊಯ್ಯಲಾಗಿದ್ದು, ಅವರ ಕಚೇರಿ ಮತ್ತು ವಾಸಸ್ಥಳಗಳು ಸೇರಿದಂತೆ ಸ್ಥಳಗಳನ್ನು ಗುರುತಿಸಲಾಗಿದೆ. ಪುರಾವೆಗಾಗಿ ಶೋಧ ನಡೆಸಲಾಗುತ್ತಿದೆ.
ಮತ್ತಷ್ಟು ಓದಿ: ವಿಶ್ವಸಂಸ್ಥೆ ರಾಯಭಾರಿ, ಪಿಎಂಒ ನಂಟು… ಸ್ವಾಮಿ ಚೈತನ್ಯಾನಂದರ ನಾನಾ ವೇಷಗಳನ್ನು ಕಂಡ ಪೊಲೀಸರು
ಸಂಸ್ಥೆಯ ಮಾಜಿ ನಿರ್ದೇಶಕರಾಗಿದ್ದ ಸ್ವಾಮಿಯನ್ನು ಸಹ ಆ ಕೋಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ವಿದ್ಯಾರ್ಥಿನಿಯರಿಗೆ ಚಿತ್ರಹಿಂಸೆ ನೀಡಿದ್ದರು ಎಂದು ಆರೋಪಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಅವರು ನನ್ನ ಫೋನ್ ಪಾಸ್‌ವರ್ಡ್ ಅನ್ನು ಮರೆತಿದ್ದೇನೆ. ನನಗೆ ಆತಂಕವಾಗುತ್ತಿದೆ ಎಂದು ಪದೇ ಪದೇ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಅವರು ಬಳಸಿದ್ದನೆಂದು ಹೇಳಲಾದ ಫೋನ್ ಇದಾಗಿದೆ. ಪರಾರಿಯಾಗಿದ್ದರೂ ಸಹ, ಅವರು ತನ್ನ ಸಂಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರೆಂದು ವರದಿಯಾಗಿದೆ. ಅವರಿಂದ ವಶಪಡಿಸಿಕೊಂಡ ಫೋನ್ ಕ್ಯಾಂಪಸ್ ಮತ್ತು ಹಾಸ್ಟೆಲ್ ಸಿಸಿಟಿವಿ ಫೀಡ್‌ಗಳನ್ನು ನೇರವಾಗಿ ನೋಡಬಹುದಾಗಿದೆ.
ಸೆಪ್ಟೆಂಬರ್ 14 ರಂದು ಸಂತ್ರಸ್ತರಲ್ಲಿ ಒಬ್ಬರ ತಂದೆಗೆ ಬೆದರಿಕೆ ಕರೆ ಬಂದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಆ ಸಂಖ್ಯೆಯನ್ನು ಉತ್ತರಾಖಂಡದ ಹರಿ ಸಿಂಗ್ ಕೊಪ್ಕೋಟಿ (38) ಎಂದು ಗುರುತಿಸಲಾಗಿದ್ದು, ಆತನನ್ನು ಆತನ ಮನೆಯಲ್ಲಿ ಬಂಧಿಸಿ ದೆಹಲಿಗೆ ಕರೆತರಲಾಗಿದೆ.
ಚೈತನ್ಯಾನಂದ ಸರಸ್ವತಿ ಬಳಿ ಎರಡು ನಕಲಿ ವಿಸಿಟಿಂಗ್ ಕಾರ್ಡ್ಗಳು ಸಿಕ್ಕಿವೆ. ಒಂದರಲ್ಲಿ ಅವರು ತಮ್ಮನ್ನು ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ. ಮತ್ತೊಂದರಲ್ಲಿ ಬ್ರಿಕ್ಸ್ ರಾಷ್ಟ್ರಗಳ ಗುಂಪಿನಲ್ಲಿ ಭಾರತದ ವಿಶೇಷ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಚೈತನ್ಯಾನಂದರು ತಮಗೆ ಪ್ರಧಾನಿ ಕಚೇರಿಯಲ್ಲಿ ನಿಕಟ ಸಂಪರ್ಕ ಇದೆ ಎಂದು ಹೇಳಿಕೊಳ್ಳುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅವರ ಬಳಿ ಎರಡು ಪಾಸ್ಪೋರ್ಟ್ಗಳಿವೆ. ಎರಡನ್ನೂ ಕೂಡ ನಕಲಿ ದಾಖಲೆಗಳ ಮೂಲಕ ಪಡೆದಂಥವೇ ಆಗಿವೆ. ಒಂದು ಪಾಸ್ಪೋರ್ಟ್ನಲ್ಲಿ ಅವರ ತಂದೆಯ ಹೆಸರು ಸ್ವಾಮಿ ಘಾನಾನಂದ ಪುರಿ, ತಾಯಿ ಹೆಸರು ಶಾರದಾ ಅಂಬಾ ಎಂದಿದೆ. ಎರಡನೇ ಪಾಸ್ಪೋರ್ಟ್ನಲ್ಲಿ ಸ್ವಾಮಿ ದಯಾನಂದ ಸರಸ್ವತಿ, ತಾಯಿ ಶಾರದಾ ಅಂಬಾಲ್ ಎಂದು ಹೆಸರಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




