AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯ ಮೊದಲ ರಾತ್ರಿಯೇ ಚಿನ್ನಾಭರಣ, ಹಣ ದೋಚಿ ವಧು ಪರಾರಿ

ಮದುವೆ(Marriage)ಯ ಮೊದಲ ದಿನ ನಮ್ಮ ಸಂಪ್ರದಾಯದಲ್ಲಿ ಗಂಡ-ಹೆಂಡತಿ ಒಟ್ಟಿಗೆ ಇರಬಾರದು ಎಂದು ನವವಧು ಗಂಡನನ್ನು ನಂಬಿಸಿ ಬೇರೆಡೆ ಮಲಗಿಸಿ, ಮನೆಯಲ್ಲಿರುವ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ರಾಜಸ್ಥಾನದ ಕಿಶನ್​ಗಢದಲ್ಲಿ ನಡೆದಿದೆ. ಈ ಘಟನೆಯಿಂದ ವರನ ಕುಟುಂಬ ಆಘಾತ ಮತ್ತು ಅವಮಾನಕ್ಕೊಳಗಾಗಿದೆ. ಆ ವ್ಯಕ್ತಿ ಆಗ್ರಾದ ಮಹಿಳೆಯೊಂದಿಗೆ ವಿವಾಹವಾಗಿದ್ದ ಮದುವೆಯ ಮೊದಲ ರಾತ್ರಿಯೇ ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾಳೆ.

ಮದುವೆಯ ಮೊದಲ ರಾತ್ರಿಯೇ ಚಿನ್ನಾಭರಣ, ಹಣ ದೋಚಿ ವಧು ಪರಾರಿ
ಮದುವೆ
ನಯನಾ ರಾಜೀವ್
|

Updated on: Sep 30, 2025 | 12:43 PM

Share

ಕಿಶನ್​ಗಢ, ಸೆಪ್ಟೆಂಬರ್ 30: ಮದುವೆ(Marriage)ಯ ಮೊದಲ ದಿನ ನಮ್ಮ ಸಂಪ್ರದಾಯದಲ್ಲಿ ಗಂಡ-ಹೆಂಡತಿ ಒಟ್ಟಿಗೆ ಇರಬಾರದು ಎಂದು ನವವಧು ಗಂಡನನ್ನು ನಂಬಿಸಿ ಬೇರೆಡೆ ಮಲಗಿಸಿ, ಮನೆಯಲ್ಲಿರುವ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ರಾಜಸ್ಥಾನದ ಕಿಶನ್​ಗಢದಲ್ಲಿ ನಡೆದಿದೆ. ಈ ಘಟನೆಯಿಂದ ವರನ ಕುಟುಂಬ ಆಘಾತ ಮತ್ತು ಅವಮಾನಕ್ಕೊಳಗಾಗಿದೆ. ಆ ವ್ಯಕ್ತಿ ಆಗ್ರಾದ ಮಹಿಳೆಯೊಂದಿಗೆ ವಿವಾಹವಾಗಿದ್ದ ಮದುವೆಯ ಮೊದಲ ರಾತ್ರಿಯೇ ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾಳೆ.

ವಿವಾಹವು ರಾಜಸ್ಥಾನದ ಸಂಪ್ರದಾಯದಂತೆ ನೆರವೇರಿತ್ತು, ಸಂಗೀತ, ಸಿಹಿತಿಂಡಿಗಳು ಮತ್ತು ಆಚರಣೆಗಳೊಂದಿಗೆ ನಡೆಯಿತು ಆಕೆಗೆ ಮದುವೆಯಾಗಲು 2 ಲಕ್ಷ ರೂ. ಕೂಡ ವರ ಕೊಟ್ಟಿದ್ದ ಎನ್ನಲಾಗಿದೆ. ವಧುವನ್ನು ಕಿಶನ್‌ಗಢದಲ್ಲಿರುವ ಮನೆಗೆ ಕರೆತರಲಾಗಿತ್ತು. ವಿವಾಹದ ನಂತರದ ಸಂಪ್ರದಾಯಗಳ ಭಾಗವಾಗಿ ವರನ ತಾಯಿ ತನ್ನ ಹೊಸ ಸೊಸೆಗೆ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು.

ದಂಪತಿ ಮೊದಲ ರಾತ್ರಿ ಕೋಣೆಗೆ ಹೋದಾಗ, ವಧು ಅಸಾಮಾನ್ಯ ಬೇಡಿಕೆಯನ್ನು ಮುಂದಿಟ್ಟಿದ್ದಳು, ನಾವು ಇಂದು ರಾತ್ರಿ ಒಟ್ಟಿಗೆ ಮಲಗಲು ಸಾಧ್ಯವಿಲ್ಲ, ಅದು ನಮ್ಮ ಪದ್ಧತಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾಳೆ. ಆಕೆ ಕಳ್ಳತನ ಮಾಡಲು ದೊಡ್ಡ ಪ್ಲ್ಯಾನ್ ಮಾಡಿದ್ದಳು, ಆದರೆ ಆಕೆಯ ಕುಟುಂಬಕ್ಕೆ ಯಾವುದೇ ಅನುಮಾನ ಬಂದಿರಲಿಲ್ಲ.

ಮತ್ತಷ್ಟು ಓದಿ: ವಧುವಿನ ಮನೆಯೇ ಕಣ್ಮರೆ; ಕುಟುಂಬದ ಜೊತೆ ಮದುವೆ ಮೆರವಣಿಗೆ ಬಂದ ವರನಿಗೆ ಶಾಕ್

ಬೆಳಗಿನ ಜಾವ 3 ಗಂಟೆ ಸುಮಾರಿಗೆ, ವರ ನೀರು ತರಲು ಎದ್ದಾಗ, ಮನೆಯಲ್ಲಿರುವವರು ಆಘಾತಕಾರಿ ಸತ್ಯವನ್ನು ಆತನಿಗೆ ಹೇಳಿದ್ದಾರೆ, ವಧು ಕಾಣೆಯಾಗಿದ್ದಳು, ಬೀರುವಿನಿಂದ ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದಳು.

ಕುಟುಂಬವು ಸ್ಥಳೀಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಹತ್ತಿರದ ಪ್ರದೇಶಗಳಲ್ಲಿ ಹುಡುಕಾಡಿದರೂ ಆಕೆಯ ಸುಳಿವು ಸಿಗಲಿಲ್ಲ. ಸಂಬಂಧಿ ರಾಕೇಶ್ ಮದನ್‌ಗಂಜ್ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಮದುವೆಯಾಗಬೇಕೆಂಬ ಕನಸು ಹೊತ್ತಿದ್ದ ಹಲವರನ್ನು ಭಯಕ್ಕೆ ತಳ್ಳಿದೆ.

ಮತ್ತೊಂದು ಘಟನೆ

62ರ ವೃದ್ಧನ ಜೊತೆ 45ರ ಮಹಿಳೆಯ ಮದುವೆ ಎರಡೇ ದಿನಕ್ಕೆ ಚಿನ್ನದ ಜೊತೆ ವಧು ಪರಾರಿ ಉತ್ತರ ಪ್ರದೇಶದ ಕಾನ್ಸುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಒಂಟಿತನದಿಂದ ಬಳಲುತ್ತಿದ್ದ 62 ವರ್ಷದ ವ್ಯಕ್ತಿಯೊಬ್ಬರು 45 ವರ್ಷದ ಮಹಿಳೆಯನ್ನು ವಿವಾಹವಾಗಿದ್ದಾರೆ. ಇನ್ನೂ ಮದುವೆಯಾದ ಎರಡೇ ದಿನಕ್ಕೆ ವಧು ನಗದು ಹಾಗೂ ಬಂಗಾರದೊಂದಿಗೆ ಪರಾರಿ ಆಗಿದ್ದಾಳೆ. ಆ ವೃದ್ಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದು, ಈ ಸಂಬಂಧ ಪೊಲೀಸರು ಕೂಡ ಈ ವಿಚಾರದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ನಿವೃತ್ತ ಸಿಒಡಿ ಉದ್ಯೋಗಿಯಾಗಿರುವ ಹರೀಶ್ ಕುಮಾರ್ ಶುಕ್ಲಾ ಎಂಬುವವರು ಚಾಕೇರಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಹರೀಶ್ ಅವರಿಗೆ ತಮ್ಮ ಮನೆಯ ಬಳಿ ಬಾಡಿಗೆಗೆ ವಾಸಿಸುತ್ತಿದ್ದ 45 ವರ್ಷದ ಪೂಜಾ ಎನ್ನುವಾಕೆಯ ಪರಿಚಯವಾಗಿತ್ತು.

ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿದ್ದು, ಇಬ್ಬರು ಮದುವೆ ಆಗೋಣ ಎಂದು ನಿರ್ಧರಿಸಿದ್ದಾರೆ. ಇದೇ ಫೆ.11 ರಂದು ಹರೀಶ್ ಪೂಜಾ ಅವರೊಂದಿಗೆ ಬೆನಝಬರ್‌ನಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ಹರೀಶ್ ಕುಮಾರ್ ಶುಕ್ಲಾ ಮದುವೆಯಾಗಿದ್ದರು. ಬಳಿಕ ಆಕೆ ಪರಾರಿಯಾಗಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್