ಸ್ಮೈಲ್ ಪ್ಲೀಸ್: ಪ್ರಗ್ಯಾನ್ ಕ್ಲಿಕ್ಕಿಸಿದ ವಿಕ್ರಮ್ ಲ್ಯಾಂಡರ್ ಚಿತ್ರವಿದು
ಕಳೆದ ಒಂದು ವಾರದಿಂದ ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತಿರುವ ರೋವರ್ ಪ್ರಗ್ಯಾನ್, ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್ ಲ್ಯಾಂಡರ್‌ನ ಚಿತ್ರವನ್ನು ಕ್ಲಿಕ್ ಮಾಡಿದೆ. ಇಸ್ರೋ ಸ್ವಲ್ಪ ಸಮಯದ ಹಿಂದೆ ಟ್ವೀಟ್ ಮಾಡುವ ಮೂಲಕ ಈ ಚಿತ್ರಗಳನ್ನು ಬಿಡುಗಡೆ ಮಾಡಿದೆ.ಇಸ್ರೋ ಟ್ವೀಟ್ ಮಾಡಿ, ರೋವರ್ ಪ್ರಗ್ಯಾನ್ ಇಂದು ಬೆಳಗ್ಗೆ ವಿಕ್ರಮ್ ಲ್ಯಾಂಡರ್ ಚಿತ್ರವನ್ನು ಕ್ಲಿಕ್ಕಿಸಿದೆ. ಪ್ರಗ್ಯಾನ್‌ನಲ್ಲಿ ಅಳವಡಿಸಲಾಗಿರುವ ರೋವರ್ ಕ್ಯಾಮೆರಾದಿಂದ ಈ ಚಿತ್ರವನ್ನು ಕ್ಲಿಕ್ಕಿಸಲಾಗಿದೆ.
ಕಳೆದ ಒಂದು ವಾರದಿಂದ ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತಿರುವ ರೋವರ್ ಪ್ರಗ್ಯಾನ್(Pragyan), ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್ ಲ್ಯಾಂಡರ್‌ನ ಚಿತ್ರವನ್ನು ಕ್ಲಿಕ್ ಮಾಡಿದೆ. ಇಸ್ರೋ ಸ್ವಲ್ಪ ಸಮಯದ ಹಿಂದೆ ಟ್ವೀಟ್ ಮಾಡುವ ಮೂಲಕ ಈ ಚಿತ್ರಗಳನ್ನು ಬಿಡುಗಡೆ ಮಾಡಿದೆ.ಇಸ್ರೋ ಟ್ವೀಟ್ ಮಾಡಿ, ರೋವರ್ ಪ್ರಗ್ಯಾನ್ ಇಂದು ಬೆಳಗ್ಗೆ ವಿಕ್ರಮ್ ಲ್ಯಾಂಡರ್ ಚಿತ್ರವನ್ನು ಕ್ಲಿಕ್ಕಿಸಿದೆ. ಪ್ರಗ್ಯಾನ್‌ನಲ್ಲಿ ಅಳವಡಿಸಲಾಗಿರುವ ರೋವರ್ ಕ್ಯಾಮೆರಾದಿಂದ ಈ ಚಿತ್ರವನ್ನು ಕ್ಲಿಕ್ಕಿಸಲಾಗಿದೆ.
ದಕ್ಷಿಣ ಧ್ರುವದಲ್ಲಿರುವ ಚಂದ್ರನ ಮೇಲ್ಮೈಯಲ್ಲಿ ರೋವರ್ ಆಮ್ಲಜನಕವನ್ನು ಕಂಡುಹಿಡಿದಿದೆ ಮತ್ತು ಹೈಡ್ರೋಜನ್ ಅನ್ನು ಹುಡುಕುತ್ತಿದೆ ಎಂದು ಇಸ್ರೋ ಈ ಹಿಂದೆ ಹೇಳಿಕೊಂಡಿತ್ತು. ಹೈಡ್ರೋಜನ್ ಪತ್ತೆಯಾದ ತಕ್ಷಣ, ಚಂದ್ರನ ಮೇಲೆ ನೀರಿನ ಉಪಸ್ಥಿತಿಯು ತಿಳಿಯುತ್ತದೆ, ಇದು ಸಾಧ್ಯವಾದರೆ ಈ ದಿಕ್ಕಿನಲ್ಲಿ ಇದು ಅತ್ಯಂತ ಕ್ರಾಂತಿಕಾರಿ ಹೆಜ್ಜೆಯಾಗಿದೆ.
ಆಮ್ಲಜನಕದ ಹೊರತಾಗಿ ಏನನ್ನು ಹುಡುಕುತ್ತಿದೆ ವೈಜ್ಞಾನಿಕ ಪ್ರಯೋಗಗಳು ಮುಂದುವರಿದಿದ್ದು, ರೋವರ್‌ನಲ್ಲಿ ಅಳವಡಿಸಲಾಗಿರುವ ಲೇಸರ್ ಆಪರೇಟೆಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (ಎಲ್‌ಬಿಎಸ್) ಚಂದ್ರನ ದಕ್ಷಿಣ ಧ್ರುವದ ಬಳಿ ಮೇಲ್ಮೈಯಲ್ಲಿ ಸಲ್ಫರ್ ಇರುವಿಕೆಯನ್ನು ಖಚಿತಪಡಿಸಿದೆ ಎಂದು ಇಸ್ರೋ ಹೇಳಿದೆ.
ಇಸ್ರೋ ಟ್ವೀಟ್
Chandrayaan-3 Mission:
Smile, please📸!
Pragyan Rover clicked an image of Vikram Lander this morning.
The ‘image of the mission’ was taken by the Navigation Camera onboard the Rover (NavCam).
NavCams for the Chandrayaan-3 Mission are developed by the Laboratory for… pic.twitter.com/Oece2bi6zE
— ISRO (@isro) August 30, 2023
ನಿರೀಕ್ಷೆಯಂತೆ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕ ಕೂಡ ಪತ್ತೆಯಾಗಿದೆ ಎಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿ ತಿಳಿಸಿದೆ. ಜಲಜನಕದ ಹುಡುಕಾಟ ಮುಂದುವರೆದಿದೆ.
ಮತ್ತಷ್ಟು ಓದಿ: ಚಂದ್ರಯಾನ-3: ಮೂನ್ವಾಕ್ ವೇಳೆ ರೋವರ್ ಪ್ರಗ್ಯಾನ್ಗೆ ಎದುರಾಯ್ತು ದೊಡ್ಡ ಕುಳಿ, ದಾರಿ ಬದಲಾವಣೆ
LBS ಉಪಕರಣವನ್ನು ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್ಸ್ (LEOS)/ISRO, ಬೆಂಗಳೂರಿನ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಮಿಷನ್ ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಬಂದಿಳಿದಿತ್ತು, ಇದರೊಂದಿಗೆ ಭಾರತ ಇತಿಹಾಸವನ್ನು ಸೃಷ್ಟಿಸಿದೆ. ಭಾರತವು ಚಂದ್ರನನ್ನು ತಲುಪಿದ ನಾಲ್ಕನೇ ದೇಶ ಮತ್ತು ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ