CMAT Admit Card 2021: ಸಿಎಂಎಟಿ ಪರೀಕ್ಷಾ ಪ್ರವೇಶ ಪತ್ರ ಇಂದು ಬಿಡುಗಡೆ; ಪರೀಕ್ಷೆ ಯಾವಾಗ? ಹಾಲ್ಟಿಕೆಟ್ ಡೌನ್ಲೋಡ್ ಹೇಗೆ? ಇಲ್ಲಿದೆ ಮಾಹಿತಿ..
ಮಾರ್ಚ್ 31ರಂದು ದೇಶಾದ್ಯಂತ CMAT ಪರೀಕ್ಷೆ ನಡೆಯಲಿದ್ದು, ಎರಡು ಶಿಫ್ಟ್ಗಳಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ಗಂಟೆವರೆಗೆ ಒಂದು ಶಿಫ್ಟ್ ಮತ್ತು ಮಧ್ಯಾಹ್ನ 2ಗಂಟೆಯಿಂದ ಸಂಜೆ 6/6.30ರವರೆಗೆ ಇನ್ನೊಂದು ಶಿಫ್ಟ್ ಇರಲಿದೆ.

ದೆಹಲಿ: ಸಾಮಾನ್ಯ ನಿರ್ವಹಣಾ ಪ್ರವೇಶ ಪರೀಕ್ಷೆ (CMAT)-2021ರ ಪ್ರವೇಶ ಪತ್ರ ಇಂದು ಮಧ್ಯಾಹ್ನ 12ಗಂಟೆಯೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದ್ದು ಪರೀಕ್ಷಾರ್ಥಿಗಳು cmat.nta.nic.in. ವೆಬ್ಸೈಟ್ಗೆ ಹೋಗಿ, ಅಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಲು, CMAT ಅಪ್ಲಿಕೇಶನ್ನ ನಂಬರ್, ಪಾಸ್ವರ್ಡ್ ಮತ್ತು ಜನ್ಮದಿನವನ್ನು ನಮೂದಿಸಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ. CMAT ಪರೀಕ್ಷಾ ದಿನಾಂಕ, ಆಯಾ ಪರೀಕ್ಷಾರ್ಥಿಗಳ ಪರೀಕ್ಷಾ ಕೇಂದ್ರ, ಸಮಯ ಮತ್ತು ಪರೀಕ್ಷೆಗೆ ಸಂಬಂಧಪಟ್ಟ ಸೂಚನೆಗಳನ್ನು ಈ ಪ್ರವೇಶ ಪತ್ರ ಒಳಗೊಂಡಿರಲಿದೆ.
ಮಾರ್ಚ್ 31ರಂದು ದೇಶಾದ್ಯಂತ CMAT ಪರೀಕ್ಷೆ ನಡೆಯಲಿದ್ದು, ಎರಡು ಶಿಫ್ಟ್ಗಳಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ಗಂಟೆವರೆಗೆ ಒಂದು ಶಿಫ್ಟ್ ಮತ್ತು ಮಧ್ಯಾಹ್ನ 2ಗಂಟೆಯಿಂದ ಸಂಜೆ 6/6.30ರವರೆಗೆ ಇನ್ನೊಂದು ಶಿಫ್ಟ್ ಎಂದು ವಿಂಗಡಿಸಲಾಗಿದೆ.
ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
- ಮೊದಲು CMAT ಅಧಿಕೃತ ವೆಬ್ಸೈಟ್ cmat.nta.nic.in.ಗೆ ಹೋಗಿ
- ಅಲ್ಲಿ ಹೋಂ ಪೇಜ್ನಲ್ಲಿರುವ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಹೆಸರು, ಪಾಸ್ವರ್ಡ್ ಹಾಕಿ ಲಾಗಿನ್ ಆಗಿ
- CMAT ಹಾಲ್ಟಿಕೆಟ್ 2021ನ್ನು ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ.
ಪರೀಕ್ಷೆ ಸ್ವರೂಪ ಹೇಗಿರಲಿದೆ? ಒಟ್ಟು 500 ಅಂಕದ CMAT ಪರೀಕ್ಷೆಯ ಪೇಪರ್ 5 ಸೆಕ್ಷನ್ಗಳನ್ನು ಒಳಗೊಂಡಿರಲಿದೆ. ಪರಿಮಾಣಾತ್ಮಕ ತಂತ್ರಗಳು ಮತ್ತು ಡೇಟಾ ವ್ಯಾಖ್ಯಾನ, ಭಾಷಾ ಗ್ರಹಿಕೆ, ಲಾಜಿಕಲ್ ರೀಸನಿಂಗ್, ಸಾಮಾನ್ಯ ತಿಳಿವಳಿಕೆ ಮತ್ತು ಹೊಸ ಆಯ್ಕೆಯಾದ ನಾವೀನ್ಯ ಮತ್ತು ಉದ್ಯಮಶೀಲತೆ ಎಂಬ ವಿಭಾಗಗಳಡಿ ಪ್ರಶ್ನೆಗಳು ಇರಲಿವೆ. ಪ್ರತಿ ವಿಭಾಗದಲ್ಲೂ 25 ಪ್ರಶ್ನೆಗಳಿದ್ದು, 100 ಅಂಕ ನಿಗದಿಯಾಗಿರುತ್ತದೆ.
ಇದನ್ನೂ ಓದಿ: Aadhaar- PAN Card Linking: ಆಧಾರ್ ಮತ್ತು ಪ್ಯಾನ್ ಕಾರ್ಡ್ ಮಾರ್ಚ್ 31ರೊಳಗೆ ಜೋಡಣೆ ಆಗದಿದ್ದಲ್ಲಿ 1000 ರೂಪಾಯಿ ಶುಲ್ಕ
Bank Holidays: ಬ್ಯಾಂಕ್ ಕೆಲಸವೇನಾದ್ರೂ ಇದ್ರೆ ಬೇಗ ಮುಗಿಸಿಕೊಳ್ಳಿ.. ಮಾ. 27ರ ನಂತರ ಸಾಲುಸಾಲು ರಜೆಗಳು ಬರಲಿವೆ



