ಮುಂಬೈ: ಭಾರತದ ಅತಿದೊಡ್ಡ ಮತ್ತು ಅತ್ಯಂತ ಮೌಲ್ಯವರ್ಧಿತ ಕ್ರಿಪ್ಟೋ ಕಂಪನಿಯಾಗಿರುವವ ಕಾಯಿನ್ ಡಿಸಿಎಕ್ಸ್ (CoinDCX) ಪ್ರಾರಂಭಿಕ ಹಂತದ ಕ್ರಿಪ್ಟೋ ಮತ್ತು ಬ್ಲ್ಯಾಕ್ ಚೈನ್ ಸ್ಟಾರ್ಟ್ ಅಪ್ (startups) ಗಳಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದೊಂದಿಗೆ, ಕಾಯಿನ್ ಡಿಸಿಎಕ್ಸ್ ವೆಂಚರ್ಸ್ (CoinDCX Ventures) ಸಂಸ್ಥೆಯನ್ನು ಆರಂಭಿಸಿರುವ ಘೋಷಣೆಯನ್ನು ಮೇ 10 ರಂದು ಮಾಡಿದೆ. ಈ ಹೊಸ ವೆಂಚರ್ ಭಾರತದಲ್ಲಿ ಡಿಜಿಟಲ್ ಪರಿಸರವನ್ನು ಬಲಪಡಿಸುತ್ತದೆ ಮತ್ತು ರಾಷ್ಟ್ರದ ಡಿಜಿಟಲ್ ಆರ್ಥಿಕತೆಯ ರೂಪಾಂತರಕ್ಕೆ ವೇಗ ಒದಗಿಸಲಿದೆ. ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ವೆಬ್ 3 ಪರಿಸರ ಅಭಿವೃದ್ಧಿ ಹೊಂದಲು ಮತ್ತು ಬಲಪಡಿಸಲು ಕಾಯಿನ್ ಡಿಸಿಎಕ್ಸ್ ವೆಂಚರ್ಸ್ ನೆರವಾಗಲಿದೆ.
ಜಾಗತಿಕವಾಗಿ ಭಾರತವು ಅತಿದೊಡ್ಡ ರಿಟೇಲ್ ಕ್ರಿಪ್ಟೋ ನೆಲೆ ಹೊಂದಿದ್ದು, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ವೆಬ್ 3 ಡೆವಲಪರ್‌ಗಳನ್ನು ಹೊಂದಲಿದೆ. ಕಾಯಿನ್ ಡಿಸಿಎಕ್ಸ್ ವೆಂಚರ್ಸ್ ಬಳಕೆದಾರರು/ಗ್ರಾಹಕರು ಮತ್ತು ವೆಬ್3 ಡೆವಲಪರ್ ಸಮುದಾಯಕ್ಕೆ ಅದರ ಪ್ರವೇಶದಲ್ಲಿ ವಿಶಿಷ್ಟವಾದ ಪ್ರಯೋಜನವನ್ನು ಹೊಂದಿದೆ. ಇದು ಭಾರತದ ವೆಬ್3 ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜಾಗತಿಕವಾಗಿ ವೆಬ್ 3 ಅಭಿವೃದ್ಧಿಯಲ್ಲಿ ಭಾರತದ ಪ್ರಮುಖ ಪಾತ್ರ ನಿರ್ವವಹಿಸಲು ವೇದಿಕೆಯನ್ನು ಸೃಷ್ಟಿ ಮಾಡುತ್ತದೆ.
ಕಾಯಿನ್ ಡಿಸಿಎಕ್ಸ್ ನ ಪರಿಸರ ನಿರ್ಮಿಸಲಾಗಿರುವ, ಕಾಯಿನ್ ಡಿಸಿಎಕ್ಸ್ ವೆಂಚರ್ಸ್ ಭಾರತದ ಪ್ರಮುಖ ಕ್ರಿಪ್ಟೋ ವಿನಿಮಯದಿಂದ ಪರ್ಯಾಯವಿಲ್ಲದ ಪ್ರಯೋಜನವನ್ನು ಹೊಂದಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಅಸೆಟ್ ಉದ್ಯಮದ ಜೊತೆಗೆ ಬೆಳೆಯಲು; ಮಾರುಕಟ್ಟೆಯ ಬಗ್ಗೆ ಆಳವಾದ ಜ್ಞಾನದೊಂದಿಗೆ-ಪರಿಕಲ್ಪನೆಗಳು, ಸಂಪನ್ಮೂಲಗಳು ಮತ್ತು ಮಾರ್ಗದರ್ಶನದೊಂದಿಗೆ ಪೋರ್ಟ್‌ಫೋಲಿಯೋ ಕಂಪನಿಗಳಿಗೆ ನೆರವಾಗಲಿದೆ.
ಕಾಯಿನ್ ಡಿಸಿಎಕ್ಸ್ ಸಾಧಿಸಿರುವ ಮೈಲಿಗಲ್ಲಿನ ಬಗ್ಗೆ ಹೆಮ್ಮೆಯಿಂದ ಮಾತಾಡಿರುವ ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹ-ಸಂಸ್ಥಾಪಕ ಸುಮಿತ್ ಗುಪ್ತಾ, ‘ಈಗಾಗಲೇ ಸಾಧನೆಗಳ ಉತ್ತುಂಗ ತಲುಪಿರುವ 2022 ರಲ್ಲಿ ಕಾಯಿನ್ ಡಿಸಿಎಕ್ಸ್ ವೆಂಚರ್ಸ್ ಕಂಪನಿಯು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ ಅಂತ ಹೇಳಲು ನನಗೆ ಅತೀವ ಹೆಮ್ಮೆಯೆನಿಸುತ್ತಿದೆ,’ ಎಂದರು.
‘ಕ್ರಿಪ್ಟೋ ಮತ್ತು ಬ್ಲಾಕ್‌ಚೈನ್ ನಾವೀನ್ಯತೆಗಾಗಿ ಜಾಗತಿಕ ಕೇಂದ್ರವಾಗಿ ಭಾರತವನ್ನು ನಕ್ಷೆಯಲ್ಲಿ ಇರಿಸುವ ಮೂಲಕ ವೆಬ್3 ಉದ್ಯಮವನ್ನು ಬೃಹದಾಕಾರದಲ್ಲಿ ಬೆಳೆಸಲು ಮುಂದುವರಿಯುತ್ತಿರುವ ದಿಶೆಯಲ್ಲಿ ಕಾಯಿನ್ ಡಿಸಿಎಕ್ಸ್ ಗೆ ಇದು ಅಗಾಧ ಸಾಧನೆ ಎಂದೇ ಹೇಳಬೇಕು. ಬಾಹ್ಯಾಕಾಶದಲ್ಲಿ ವೆಂಚರ್ ಕ್ಯಾಪಿಟಲಿಸ್ಟ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ನಂತರ, ಅಂಥ ಬೆಂಬಲದ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ, ಹಣಕಾಸು ಮತ್ತು ತಂತ್ರಜ್ಞಾನದ ಭವಿಷ್ಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವ ಮೂಲಕ ಇನ್ನೂ ಹೊಸ ಉದ್ಯಮಕ್ಕೆ ಕೊಡುಗೆ ನೀಡಲು ನಮ್ಮ ಸಾಧನೆ ಪ್ರೇರೇಪಿಸುತ್ತೇವೆ,’ ಎಂದು ಗುಪ್ತಾ ಹೇಳಿದರು.
ಕಾಯಿನ್ ಡಿಸಿಎಕ್ಸ್ ಬಗ್ಗೆ ಒಂದಷ್ಟು ಮಾಹಿತಿ:
ಬಳಕೆದಾರರ ಅನುಭವ ಮತ್ತು ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಗಿರುವ ಕಾಯಿನ್ ಡಿಸಿಎಕ್ಸ್ ಭಾರತದ ಅತಿದೊಡ್ಡ ಕ್ರಿಪ್ಟೋ ಕಂಪನಿಯಾಗಿದೆ. ಸದರಿ ಕಂಪನಿಯು ತನ್ನ ಬಳಕೆದಾರರಿಗೆ ಉದ್ಯಮ-ಪ್ರಮುಖ ಭದ್ರತಾ ಪ್ರಕ್ರಿಯೆಗಳು ಮತ್ತು ವಿಮಾ ರಕ್ಷಣೆಯಿಂದ ಬೆಂಬಲಿತ ಹೊಸ ಉತ್ಪನ್ನಗಳು ಮತ್ತು ಇತರ ವೈಶಿಷ್ಟ್ಯತೆಗಳನ್ನು ನೀಡುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿ ಪಟ್ಟಿಯಾಗಿರುವ ಯೋಜನೆಗಳನ್ನು ಅದರ 7 ಎಮ್ ತತ್ವಗಳ ಮೂಲಕ ಸೂಕ್ತ ಪರಾಮರ್ಶೆ ಮತ್ತು ಅವಲೋಕನದ ನಂತರವೇ ಆಯ್ದುಕೊಳ್ಳಲಾಗಿದೆ.
ಕಾಯಿನ್ ಡಿಸಿಎಕ್ಸ್ ವೆಂಚರ್ಸ್ ಮೂಲಕ ವೆಬ್ 3 ಪರಿಸರ ವ್ಯವಸ್ಥೆಯಲ್ಲಿ ಕ್ರಿಯಾಶೀಲತೆಯನ್ನು ಬಲಪಡಿಸಲು, ಡಿಸಿಎಕ್ಸ್ ಲರ್ನ್ ಮೂಲಕ ಕ್ರಿಪ್ಟೋ ಶಿಕ್ಷಣವನ್ನು ಹೆಚ್ಚಿಸಲು ಮತ್ತು ಕಾಯಿನ್ ಡಿಸಿಎಕ್ಸ್ ಅಪ್ಲಿಕೇಶನ್‌ನಲ್ಲಿ ಸುರಕ್ಷತೆ ಮತ್ತು ಅನುಸರಣೆಯ ಮೂಲಕ ಕ್ರಿಪ್ಟೋ ವ್ಯಾಪಾರದ ಅನುಭವವನ್ನು ಹೆಚ್ಚಿಸುವ ಮೂಲಕ ಭಾರತದ ಕ್ರಿಪ್ಟೋ ಉದ್ಯಮದಲ್ಲಿ ಪ್ರಮುಖ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
Published On - 4:28 pm, Wed, 11 May 22