AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baby Berth! ಇನ್ಮುಂದೆ ಚಿಕ್ಕ ಮಕ್ಕಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ ಕೊಡಲಿದೆ ಭಾರತೀಯ ರೈಲ್ವೆ!

ಭಾರತೀಯ ರೈಲ್ವೆಯು ನವಜಾತ ಶಿಶುಗಳಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ನವಜಾತ ಶಿಶುಗಳ ಜೊತೆಗೆ ಪೋಷಕರು ರೈಲುಗಳಲ್ಲಿ ಸಂಚರಿಸುವಾಗ ಪಡುತ್ತಿರುವ ಪಡಿಪಾಟಲನ್ನು ಮನಗಂಡು ರೈಲ್ವೆ ಇಲಾಖೆಯು ಇನ್ನು ಮುಂದೆ ಹೊಸ ಸೌಕರ್ಯ ಕಲ್ಪಿಸಲಿದೆ. ಅದೇ ನವಜಾತ ಶಿಶುಗಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ ಕಲ್ಪಿಸಿಕೊಡುವ ಯೋಜನೆ

Baby Berth! ಇನ್ಮುಂದೆ ಚಿಕ್ಕ ಮಕ್ಕಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ ಕೊಡಲಿದೆ ಭಾರತೀಯ ರೈಲ್ವೆ!
ಭಾರತೀಯ ರೈಲ್ವೆ
TV9 Web
| Edited By: |

Updated on:May 11, 2022 | 6:06 PM

Share

ನವದೆಹಲಿ: ಭಾರತೀಯ ರೈಲ್ವೆಯು ನವಜಾತ ಶಿಶುಗಳಿಗೆ ಭರ್ಜರಿ ಕೊಡುಗೆ ನೀಡಲು ಮುಂದಾಗಿದೆ. ನವಜಾತ ಶಿಶುಗಳ ಜೊತೆಗೆ ಪೋಷಕರು ರೈಲುಗಳಲ್ಲಿ ಸಂಚರಿಸುವಾಗ ಪಡುತ್ತಿರುವ ಪಡಿಪಾಟಲನ್ನು ಮನಗಂಡು ರೈಲ್ವೆ ಇಲಾಖೆಯು ಇನ್ನು ಮುಂದೆ ಹೊಸ ಸೌಕರ್ಯ ಕಲ್ಪಿಸಲಿದೆ. ಅದೇ ನವಜಾತ ಶಿಶುಗಳಿಗೆ ಟ್ರೈನ್​​ನಲ್ಲಿ ಪ್ರತ್ಯೇಕ ಸೀಟ್​ (baby berth) ಕಲ್ಪಿಸಿಕೊಡುವ ಯೋಜನೆ.

@RailMinIndiaIndian ರೈಲ್ವೆ ಇಲಾಖೆಯು ಶಿಶುಗಳಿಗಾಗಿ ತನ್ನ ರೈಲುಗಳಲ್ಲಿ ಪ್ರತ್ಯೇಕ ಸೀಟ್​ ವ್ಯವಸ್ಥೆ ಕಲ್ಪಿಸಲಿದೆ. ಆದರೆ ಇದು ಸದ್ಯಕ್ಕೆ ಉತ್ತರ ರೈಲ್ವೆ ವಿಭಾಗದಲ್ಲಿ (Northern Railways) ಪ್ರಯೋಗಾರ್ಥವಾಗಿ ಸಂಚರಿಸಲಿದೆ. ಲಖ್ನೋ – ನವದೆಹಲಿ ಮೈಲ್ (Lucknow- New Delhi Mail) ಟ್ರೈನ್​​ನಲ್ಲಿ ಮಾತ್ರ ಈ ವ್ಯವಸ್ಥೆ ಲಭಿಸಲಿದೆ. ಈಗಾಗಲೇ ಮಹಿಳೆಯರಿಗೆ ಮೀಸಲಿಟ್ಟಿರುವ ಸೀಟ್​ ಪಕ್ಕದಲ್ಲಿಯೇ (ಕೆಳಗಿನ ಸೀಟ್​) ಬೇಬಿ ಬರ್ತ್​​ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಯಾವುದೇ ತೊಂದರೆ ಪಡದೆ ತಾಯಂದಿರು ತಮ್ಮ ಮಕ್ಕಳ ಜೊತೆ ರೈಲ್ವೆಯಲ್ಲಿ ಆರಾಮವಾಗಿ ಸಂಚರಿಸಬಹುದಾಗಿದೆ. ಇದು ಎಸಿ ಕೋಚ್​ಗಳಲ್ಲಿ ಮಾತ್ರ ಲಭ್ಯವಿದ್ದು, ಎರಡು ಬರ್ಥ್​​ಗಳ ಮಧ್ಯೆ ಶಿಶುವಿನ ಬರ್ತ್​​ ಅಳವಡಿಸಲಾಗಿದೆ. ಗಮನಾರ್ಹವೆಂದರೆ ಭಾರತೀಯ ರೈಲ್ವೆ ಮಕ್ಕಳ ಈ ವಿಶೇಷ ಸೌಲಭ್ಯಕ್ಕಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಈ ಸೌಲಭ್ಯಕ್ಕೆ ಜನರಿಂದ ಬರುವ ಪ್ರತಿಕ್ರಿಯೆಗಳನ್ನು ಆಧರಿಸಿ, ಈ ವ್ಯವಸ್ಥೆಯನ್ನು ಇತರೆ ವಿಭಾಗಗಳ ಟ್ರೈನ್​​ನಲ್ಲಿಯೂ ಕೊಡಮಾಡಲಾಗುವುದು ಎಂದು ಉತ್ತರ ವಿಭಾಗದ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್ ಕುಮಾರ್​ ತಿಳಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:59 pm, Wed, 11 May 22

ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?