Sedition Law ದೇಶದ್ರೋಹ ಕಾನೂನು ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ; ಸರಣಿ ಟ್ವೀಟ್​​ಗಳ ಮೂಲಕ ಕಿರಣ್ ರಿಜಿಜು ತಿರುಗೇಟು

ರಾಹುಲ್ ಗಾಂಧಿಯವರ ಈ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿಯವರ ಖಾಲಿ ಮಾತುಗಳಿವು. ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳ ಗೌರವಕ್ಕೆ ವಿರುದ್ಧವಾದ ಒಂದು ಪಕ್ಷವಿದ್ದರೆ, ಅದು ಭಾರತೀಯ ಕಾಂಗ್ರೆಸ್ ಪಕ್ಷ.

Sedition Law ದೇಶದ್ರೋಹ ಕಾನೂನು ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ; ಸರಣಿ ಟ್ವೀಟ್​​ಗಳ ಮೂಲಕ ಕಿರಣ್ ರಿಜಿಜು ತಿರುಗೇಟು
ರಾಹುಲ್ ಗಾಂಧಿ- ಕಿರಣ್ ರಿಜಿಜು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 11, 2022 | 6:33 PM

ದೆಹಲಿ: ದೇಶದಲ್ಲಿ ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನಿನ (sedition law )ಕುರಿತು ಸುಪ್ರೀಂಕೋರ್ಟ್‌ ನೀಡಿದ ಐತಿಹಾಸಿಕ ಮತ್ತು ಮಹತ್ವದ ಆದೇಶವು ಈಗಾಗಲೇ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಮಾತಿನ ಸಮರವನ್ನು ಹುಟ್ಟುಹಾಕಿದೆ. ಮಾಜಿ ಕಾಂಗ್ರೆಸ್ ಮುಖ್ಯಸ್ಥ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ಸತ್ಯ ಹೇಳುವುದು ದೇಶಭಕ್ತಿ, ದೇಶದ್ರೋಹವಲ್ಲ. ಸತ್ಯ ಹೇಳುವುದು ದೇಶಪ್ರೇಮ, ದೇಶದ್ರೋಹ ಅಲ್ಲ.ಸತ್ಯವನ್ನು ಕೇಳಿಸಿಕೊಳ್ಳುವುದು ರಾಜಧರ್ಮ. ಸತ್ಯವನ್ನು ಹತ್ತಿಕ್ಕುವುದು ದುರಂಹಕಾರ. ಹೆದರಬೇಡಿ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಈ ಟ್ವೀಟ್​​ಗೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju), ರಾಹುಲ್ ಗಾಂಧಿಯವರ ಖಾಲಿ ಮಾತುಗಳಿವು. ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳ ಗೌರವಕ್ಕೆ ವಿರುದ್ಧವಾದ ಒಂದು ಪಕ್ಷವಿದ್ದರೆ, ಅದು ಭಾರತೀಯ ಕಾಂಗ್ರೆಸ್ ಪಕ್ಷ. ಈ ಪಕ್ಷವು ಯಾವಾಗಲೂ ಬ್ರೇಕಿಂಗ್ ಇಂಡಿಯಾ ಪಡೆಗಳೊಂದಿಗೆ ನಿಂತಿದೆ ಮತ್ತು ಭಾರತವನ್ನು ವಿಭಜಿಸಲು ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ ಎಂದಿದ್ದಾರೆ. ಇನ್ನೊಂದು ಟ್ವೀಟ್​​ನಲ್ಲಿ ರಿಜಿಜು ಅವರು, ಮೊದಲ ತಿದ್ದುಪಡಿಯನ್ನು ತಂದವರು ಯಾರು? ಬೇರೆ ಯಾರೂ ಅಲ್ಲ ಪಂಡಿತ್ ಜವಾಹರಲಾಲ್ ನೆಹರೂ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಉದ್ದೇಶದ ಈ ಕ್ರಮಕ್ಕೆ ವಿರೋಧವಾಗಿ ನಿಂತದ್ದು ಎಸ್ಪಿ ಮುಖರ್ಜಿ ಮತ್ತು ಜನಸಂಘ. ನೆಹರೂ ಜಿ ಕೇರಳದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ವಜಾಗೊಳಿಸಿದರು. ಇನ್ನು, ವಾಕ್ ಸ್ವಾತಂತ್ರ್ಯವನ್ನು ತುಳಿಯುವ ವಿಷಯಕ್ಕೆ ಬಂದರೆ, ಶ್ರೀಮತಿ ಇಂದಿರಾ ಗಾಂಧಿ ಜೀ ಅವರು ಚಿನ್ನದ ಪದಕ ವಿಜೇತರು. ತುರ್ತು ಪರಿಸ್ಥಿತಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಅವರು 50 ಕ್ಕೂ ಹೆಚ್ಚು ಬಾರಿ ಆರ್ಟಿಕಲ್ 356 ಅನ್ನು ಹೇರಿದ್ದಾರೆ ಎಂದು ನಿಮಗೆ ತಿಳಿದಿದೆಯೇ. ನಮ್ಮ 3ನೇ ಸ್ತಂಭವಾದ ನ್ಯಾಯಾಂಗವನ್ನು ದುರ್ಬಲಗೊಳಿಸಲು ಅವರು “ಬದ್ಧ ನ್ಯಾಯಾಂಗ”ದ ಕಲ್ಪನೆಯನ್ನು ಮುಂದಿಟ್ಟರು ಎಂದು ಹೇಳಿದ್ದಾರೆ.

ಇತ್ತೀಚೆಗೆ ರಿಜಿಜು ಅವರು ಯುಪಿಎಯ ಮಾಜಿ ಕಾಂಗ್ರೆಸ್ ಸಚಿವ ಪಿ ಚಿದಂಬರಂ ಅವರನ್ನು ಗುರಿಯಾಗಿಸಿಕೊಂಡು, “ದೇಶದ್ರೋಹದ ಪ್ರಕರಣಗಳನ್ನು ದಾಖಲಿಸುವಲ್ಲಿ ಯುಪಿಎ ಅತ್ಯಂತ ಕೆಟ್ಟ ದಾಖಲೆಯನ್ನು ಹೊಂದಿದೆ” ಎಂದು ಹೇಳಿದರು. ಆದೇಶದ ನಂತರ ರಿಜಿಜು ಅವರು “ನ್ಯಾಯಾಲಯ ಮತ್ತು ಅದರ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ. ಅಲ್ಲೊಂದು ಲಕ್ಷ್ಮಣ ರೇಖೆ ಇದೆ, ಅದನ್ನು ದಾಟುವಂತಿಲ್ಲ ಎಂದಿದ್ದಾರೆ.

“ನಾವು ನಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದೇವೆ ಮತ್ತು ನಮ್ಮ ಪ್ರಧಾನಿ ( ನರೇಂದ್ರ ಮೋದಿ) ಅವರ ಉದ್ದೇಶದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ನಾವು ನ್ಯಾಯಾಲಯ ಮತ್ತು ಅದರ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಆದರೆ ಎಲ್ಲಾ ಅಂಗಗಳು ಗೌರವಿಸಬೇಕಾದ ‘ಲಕ್ಷ್ಮಣ ರೇಖೆ’ ಇದೆ. ನಾವು ಭಾರತೀಯ ಸಂವಿಧಾನದ ನಿಬಂಧನೆಗಳನ್ನು ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಗೌರವಿಸುತ್ತೇವೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು” ಎಂದು ಸುದ್ದಿಗಾರರೊಂದಿಗೆ ಮಾತನಾಡಿ ಕಾನೂನು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ
Image
Sedition Law: ದೇಶದ್ರೋಹ ಕಾಯ್ದೆಗೆ ಸುಪ್ರೀಂಕೋರ್ಟ್​ ತಡೆ; ಜೈಲಿನಲ್ಲಿರುವವರಿಗೆ ಜಾಮೀನು ಕೋರಲು ಅವಕಾಶ

ನಾವು ಪರಸ್ಪರ ಗೌರವಿಸುತ್ತೇವೆ, ನ್ಯಾಯಾಲಯವು ಸರ್ಕಾರ, ಶಾಸಕಾಂಗವನ್ನು ಗೌರವಿಸಬೇಕು, ಹಾಗೆಯೇ ಸರ್ಕಾರವು ನ್ಯಾಯಾಲಯವನ್ನು ಗೌರವಿಸಬೇಕು. ನಾವು ಗಡಿಯ ಸ್ಪಷ್ಟ ಗಡಿರೇಖೆಯನ್ನು ಹೊಂದಿದ್ದೇವೆ. ಆ ಲಕ್ಷ್ಮಣ ರೇಖೆಯನ್ನು ಯಾರೂ ದಾಟಬಾರದು ಎಂದು ರಿಜಿಜು ಹೇಳಿದ್ದಾರೆ.

ಈ ಸುದ್ದಿಯನ್ನು ಇಂಗ್ಲಿಷ್​​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Wed, 11 May 22

ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್