AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1984ರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ಜಗದೀಶ್ ಟೈಟ್ಲರ್‌ ವಿರುದ್ಧ ಕೊಲೆ ಆರೋಪ ಹೊರಿಸಿದ ಸಿಬಿಐ

Congress leader Jagdish Tytler: ಕಾಂಗ್ರೆಸ್ ನಾಯಕ ತನ್ನ ಕಾರಿನಿಂದ ಇಳಿದು ಗುಂಪನ್ನು ಪ್ರಚೋದಿಸುವುದನ್ನು ತಾನು ನೋಡಿದ್ದೇನೆ ಎಂದು ಸಾಕ್ಷಿಯೊಬ್ಬರು ಹೇಳಿರುವುದಾಗಿ ಸಿಬಿಐ ಚಾರ್ಜ್​​​ಶೀಟ್​​ನಲ್ಲಿ ಉಲ್ಲೇಖಿಸಿದೆ.

1984ರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ಜಗದೀಶ್ ಟೈಟ್ಲರ್‌ ವಿರುದ್ಧ ಕೊಲೆ ಆರೋಪ ಹೊರಿಸಿದ ಸಿಬಿಐ
ಜಗದೀಶ್ ಟೈಟ್ಲರ್‌
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Aug 05, 2023 | 5:01 PM

Share

ದೆಹಲಿ ಆಗಸ್ಟ್ 05: ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ (Jagdish Tytler) ದೆಹಲಿಯ ಗುರುದ್ವಾರ ಪುಲ್ ಬಂಗಾಶ್ (Gurudwara Pul Bangash )ಬಳಿ ಸಿಖ್ಖರನ್ನು ಕೊಲ್ಲಲು ಗುಂಪನ್ನು ಪ್ರಚೋದಿಸಿದ್ದಾರೆ ಎಂದು ಕೇಂದ್ರ ತನಿಖಾ ದಳ (CBI) ತನ್ನ ಚಾರ್ಜ್​​​ಶೀಟ್​​ನಲ್ಲಿ ತಿಳಿಸಿದೆ. 1984 ರ ಸಿಖ್ ದಂಗೆ ಪ್ರಕರಣದಲ್ಲಿ ಟೈಟ್ಲರ್ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಟೈಟ್ಲರ್ ಸಿಖ್ಖರನ್ನು ಕೊಲ್ಲಲು ಜನರನ್ನು ಪ್ರಚೋದಿಸಿದರು, ಇದರ ಪರಿಣಾಮವಾಗಿ 1.11.1984 ರಂದು ಜನರ ಗುಂಪು ಗುರುದ್ವಾರ ಪುಲ್ ಬಂಗಾಶ್ ಅನ್ನು ಸುಟ್ಟುಹಾಕಿತು. ಈ ವೇಳೆ ಸಿಖ್ ಸಮುದಾಯಕ್ಕೆ ಸೇರಿದ ಮೂವರ ಹತ್ಯೆಯಾಗಿದೆ ಎಂದು ಸಿಬಿಐ ಶನಿವಾರ ತಮ್ಮ ಆರೋಪಪಟ್ಟಿಯಲ್ಲಿ ಹೇಳಿದೆ. ಗುರುದ್ವಾರ ಪುಲ್ ಬಂಗಾಶ್​ಗೆ ಬೆಂಕಿ ಹಚ್ಚಿ ಠಾಕೂರ್ ಸಿಂಗ್ ಮತ್ತು ಬಾದಲ್ ಸಿಂಗ್ ಎಂಬವರನ್ನು ಹತ್ಯೆ ಮಾಡಿದ್ದರು.

ಕಾಂಗ್ರೆಸ್ ನಾಯಕ ತನ್ನ ಕಾರಿನಿಂದ ಇಳಿದು ಗುಂಪನ್ನು ಪ್ರಚೋದಿಸುವುದನ್ನು ತಾನು ನೋಡಿದ್ದೇನೆ ಎಂದು ಸಾಕ್ಷಿಯೊಬ್ಬರು ಹೇಳಿರುವುದಾಗಿ ಸಿಬಿಐ ಚಾರ್ಜ್​​​ಶೀಟ್​​ನಲ್ಲಿ ಉಲ್ಲೇಖಿಸಿದೆ.

ಜನರು ಅಂಗಡಿಯನ್ನು ಲೂಟಿ ಮಾಡುವುದನ್ನು ಆಕೆ ನೋಡಿದ್ದಳು. ಆದರೆ ಅವಳು ಸಾಧ್ಯವಾದಷ್ಟು ಬೇಗ ಹಿಂತಿರುಗಲು ನಿರ್ಧರಿಸಿದ್ದಳು. . ಹಿಂತಿರುಗುವಾಗ, ಗುರುದ್ವಾರ ಪುಲ್ ಬಂಗಾಶ್‌ನ ಮುಖ್ಯ ರಸ್ತೆಯಲ್ಲಿ, ಅವಳು ಬಿಳಿ ಅಂಬಾಸಿಡರ್ ಕಾರನ್ನು ನೋಡಿದಳು.  ಅದರಿಂದ ಆರೋಪಿ ಜಗದೀಶ್ ಟೈಟ್ಲರ್ ಹೊರಬಂದರು. ಆರೋಪಿ ಜಗದೀಶ್ ಟೈಟ್ಲರ್ ಮೊದಲು ಸಿಖ್ಖರನ್ನು ಕೊಂದು ನಂತರ ಲೂಟಿ ಮಾಡಲು ಜನಸಮೂಹವನ್ನು ಪ್ರಚೋದಿಸಿದರು. ಇದನ್ನು ನೋಡಿದ ನಂತರ, ಅವಳು ತನ್ನ ಮನೆಗೆ ಹಿಂದಿರುಗಿದಳು. ನಂತರ ತನ್ನ ನೆರೆಹೊರೆಯವರ ಮನೆಯಲ್ಲಿ ಆಶ್ರಯ ಪಡೆದಳು. ಇದಾದ ನಂತರ ಅವಳು ಬಾದೆಲ್ ಸಿಂಗ್ ಮತ್ತು ಗೋರ್ಚರಣ್ ಸಿಂಗ್ (31.10. .1984 ರ ರಾತ್ರಿ ತನ್ನ ಮನೆಯಲ್ಲಿ ತಂಗಿದ್ದ ತನ್ನ ಗಂಡನ ಉದ್ಯೋಗಿ) ಅವರ ಶವಗಳನ್ನು ನೋಡಿದ್ದಾಳೆ. ಪಕ್ಕದ ಮನೆಯ ಮೇಲ್ಛಾವಣಿಯಿಂದ ಎಸೆದು ನಂತರ ಟೈರ್‌ಗಳ ಜೊತೆಗೆ ಮರದ ಗಾಡಿಯಲ್ಲಿ ಸಾಗಿಸಲಾಯಿತು. ನಂತರ ಈ ದೇಹಗಳನ್ನು ಟೈರ್ ಬಳಸಿ ಸುಡಲಾಯಿತು. ಗುರುದ್ವಾರ ಪುಲ್ ಬಂಗಾಶ್ ಅನ್ನು ಜನಸಮೂಹವು ಸುಲಿಗೆ ಮಾಡುವುದನ್ನು ಆಕೆ ನೋಡಿದ್ದಾಳೆ ಎಂದು ಚಾರ್ಜ್​​​ಶೀಟ್​​ನಲ್ಲಿ ಹೇಳಿದೆ.

ಇದನ್ನೂ ಓದಿ: ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಕಪಿಲ್ ಮಿಶ್ರಾ ನೇಮಕ

ಜನರು ಪೆಟ್ರೋಲ್ ಡಬ್ಬಿಗಳು, ಕೋಲುಗಳು, ಕತ್ತಿಗಳು ಮತ್ತು ರಾಡ್‌ಗಳನ್ನು ಹೊತ್ತೊಯ್ಯುತ್ತಿರುವುದನ್ನು ನೋಡಿದ ಇನ್ನೊಬ್ಬ ಸಾಕ್ಷಿಯ ಹೇಳಿಕೆಯೂ ಚಾರ್ಜ್​​​ಶೀಟ್​​ನಲ್ಲಿದೆ. ಸಂಸದರಾಗಿದ್ದ ಜಗದೀಶ್ ಟೈಟ್ಲರ್ ಕೂಡ ಗುರುದ್ವಾರ ಪುಲ್ ಬಂಗಾಶ್ ಮುಂದೆ ಹಾಜರಾಗಿದ್ದರು, ಕಾಂಗ್ರೆಸ್ ನಾಯಕ ಗುರುದ್ವಾರದ ಮೇಲೆ ದಾಳಿ ಮಾಡಲು ಗುಂಪನ್ನು ಪ್ರಚೋದಿಸುತ್ತಿದ್ದರು ಎಂದು ಈ ಸಾಕ್ಷಿಯೂ ಹೇಳಿದ್ದಾರೆ ಎಂದು ಚಾರ್ಜ್​​​ಶೀಟ್​​ನಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ