AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂ ಪೊಲೀಸರ ಎಫ್‌ಐಆರ್‌ಗೆ ಕಾಂಗ್ರೆಸ್ ಛೀಮಾರಿ; ಹಿಮಂತ ಶರ್ಮಾ ವಿರುದ್ಧ ರಾಹುಲ್ ವಾಗ್ದಾಳಿ

ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರ ಪಕ್ಷ ಬಿಜೆಪಿಯ ಬಿ-ಟೀಮ್ ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳನ್ನು ಕಾಂಗ್ರೆಸ್ ಸೋಲಿಸಲಿದೆ ಎಂದರು. ಅಸ್ಸಾಂನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್, ಹಿಮಂತ ಬಿಸ್ವ ಶರ್ಮಾ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಅಸ್ಸಾಂ ಪೊಲೀಸರ ಎಫ್‌ಐಆರ್‌ಗೆ ಕಾಂಗ್ರೆಸ್ ಛೀಮಾರಿ; ಹಿಮಂತ ಶರ್ಮಾ ವಿರುದ್ಧ ರಾಹುಲ್ ವಾಗ್ದಾಳಿ
ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on: Jan 24, 2024 | 8:47 PM

Share

ಗುವಾಹಟಿ ಜನವರಿ 24: ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಗೃಹ ಸಚಿವ ಅಮಿತ್ ಶಾ ರಿಮೋಟ್ ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ . ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ನಡುವೆ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ , ಶರ್ಮಾ ಅವರು ರಾಜ್ಯದ ಕಲ್ಯಾಣಕ್ಕಾಗಿ ಮಾತನಾಡಿದರೆ ಅವರನ್ನು  “ಹೊರಹಾಕುತ್ತಾರೆ” ಎಂದಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೈಯಲ್ಲಿ ಶರ್ಮಾ ಅವರ ರಿಮೋಟ್ ಕಂಟ್ರೋಲ್ ಇದೆ. ಶರ್ಮಾ ಅಸ್ಸಾಂನ ಹಿತಕ್ಕಾಗಿ ಏನಾದರೂ ಮಾತನಾಡಿದರೆ ತಕ್ಷಣವೇ ಹೊರಹಾಕುತ್ತಾರೆ. ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರ ಪಕ್ಷ ಬಿಜೆಪಿಯ ಬಿ-ಟೀಮ್ ಎಂದ ರಾಹುಲ್, ಲೋಕಸಭೆ ಚುನಾವಣೆ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳನ್ನು ಕಾಂಗ್ರೆಸ್ ಸೋಲಿಸಲಿದೆ ಎಂದರು.

ಮಂಗಳವಾರ, ಅಸ್ಸಾಂ ಪೊಲೀಸರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ನಾಯಕರ ವಿರುದ್ಧ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ “ಹಿಂಸಾಚಾರದ ಉದ್ದೇಶಪೂರ್ವಕ ಕೃತ್ಯಗಳ” ಕುರಿತು ಎಫ್ಐಆರ್ ದಾಖಲಿಸಿದ್ದಾರೆ. ಅಸ್ಸಾಂ ಪೊಲೀಸರ ಎಫ್‌ಐಆರ್‌ಗೆ ಕಾಂಗ್ರೆಸ್ ಛೀಮಾರಿ ಹಾಕಿದ್ದು, ಇದು ರಾಜಕೀಯ ಎಫ್ಐಆರ್ ಎಂದು ಹೇಳಿದ್ದಾರೆ.ಏತನ್ಮಧ್ಯೆ, ಶರ್ಮಾ ಪ್ರಚಾರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಇದು ರಾಜಕೀಯ ಎಫ್‌ಐಆರ್ ಆಗಿದ್ದು, ಸತ್ಯವನ್ನು ಆಧರಿಸಿಲ್ಲ. ಸಾಕ್ಷ್ಯಗಳು ಮತ್ತು ವಿಡಿಯೊಗಳು ನಿಮ್ಮೆಲ್ಲರ (ಮಾಧ್ಯಮ) ಮುಂದೆ ಇವೆ. ಇದು ಅಸ್ಸಾಂ ಸಿಎಂನಿಂದ ಮತ್ತೊಂದು ಬೆದರಿಕೆಯಾಗಿರುವುದರಿಂದ ನಾವು ಹೆದರುವುದಿಲ್ಲ. ಯಾತ್ರೆ ಮುಂದುವರಿಯಲಿದೆ. ನಾವು ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ. ಪ್ರಧಾನಿ ಪ್ರತಿ ದೇಶಕ್ಕೂ ಹೋಗಿ ಪ್ರಜಾಪ್ರಭುತ್ವದ ತಾಯಿ ಎಂದು ಮಾತನಾಡುತ್ತಾರೆ. ಆದರೆ ಇದು ಅಸ್ಸಾಂನಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಅವರು ಸಿಎಂ ಆದ ನಂತರ ಭ್ರಷ್ಟಾಚಾರವೇ ಪ್ರಮುಖ ವಿಷಯವಾಗಿದೆ. ರಾಹುಲ್ ಗಾಂಧಿ ಅನೇಕ ಜನರನ್ನು ಭೇಟಿಯಾಗಿದ್ದರು, ಅವರು ಸಮಾಜದಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳಿಂದ ಬೇಸತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ರಾಹುಲ್ ಗಾಂಧಿ ಭದ್ರತೆ ಬಗ್ಗೆ ಕಳವಳ, ಅಮಿತ್​ ಶಾಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ

ರಾಹುಲ್ ಗಾಂಧಿ vs ಹಿಮಂತ ಬಿಸ್ವ ಶರ್ಮಾ

ಕಳೆದ ಕೆಲವು ದಿನಗಳಿಂದ ರಾಹುಲ್ ಗಾಂಧಿ ಮತ್ತು ಹಿಮಂತ ಬಿಸ್ವಾ ಶರ್ಮಾ ಪರಸ್ಪರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಶರ್ಮಾ ಅವರನ್ನು ಅತ್ಯಂತ ಭ್ರಷ್ಟ ಸಿಎಂ ಎಂದಿದ್ದಾರೆ ರಾಹುಲ್. ಇತ್ತ, ಸೋಮವಾರ, ಅಸ್ಸಾಂನ ದೇಗುಲಕ್ಕೆ ಭೇಟಿ ನೀಡದಂತೆ ಗಾಂಧಿಯನ್ನು ತಡೆದರು. ರಾಮ ಮಂದಿರದ ಪ್ರತಿಷ್ಠಾಪನೆ ಉತ್ಸವಗಳೊಂದಿಗೆ ಅನಗತ್ಯ ಜಂಜಾಟ ತಪ್ಪಿಸಲು ಜನವರಿ 22 ರಂದು ದೇಗುಲಕ್ಕೆ ಭೇಟಿ ನೀಡದಂತೆ ಶರ್ಮಾ ಗಾಂಧಿಯನ್ನು ಒತ್ತಾಯಿಸಿದ್ದರು. ಗಾಂಧಿ ಕೂಡ ಶರ್ಮಾ ಅವರ ಇಡೀ ಕುಟುಂಬವನ್ನು ಭ್ರಷ್ಟರು ಎಂದು ಕರೆದಿದ್ದರು.ಹಿಮಂತ ಬಿಸ್ವಾ ಶರ್ಮಾ ಅವರು 2015 ರವರೆಗೆ ಬಿಜೆಪಿ ಸೇರುವವರೆಗೂ ಕಾಂಗ್ರೆಸ್ ನಾಯಕರಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ