ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯ ಆಸ್ಪತ್ರೆಗೆ ದಾಖಲು; ಆರೋಗ್ಯದ ಸ್ಥಿತಿ ಸ್ಥಿರ ರಣದೀಪ್ ಸುರ್ಜೆವಾಲಾ ಹೇಳಿಕೆ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (75) ಅವರು ಇಂದು (ಜೂನ್​​ 12) ರಂದು "ಕೋವಿಡ್ ಸಂಬಂಧಿತ ಸಮಸ್ಯೆಗಳ ಕಾರಣ" ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯ ಆಸ್ಪತ್ರೆಗೆ ದಾಖಲು; ಆರೋಗ್ಯದ ಸ್ಥಿತಿ ಸ್ಥಿರ ರಣದೀಪ್ ಸುರ್ಜೆವಾಲಾ ಹೇಳಿಕೆ
ಸೋನಿಯಾ ಗಾಂಧಿ
Edited By:

Updated on: Jun 12, 2022 | 4:57 PM

ನವದೆಹಲಿ: ಕಾಂಗ್ರೆಸ್ (Congress) ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) (75) ಅವರು ಇಂದು (ಜೂನ್​​ 12) ರಂದು “ಕೋವಿಡ್ (Covid) ಸಂಬಂಧಿತ ಸಮಸ್ಯೆಗಳ ಕಾರಣ” ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ (Randeep Surjewal) ತಿಳಿಸಿದ್ದಾರೆ. ಆಸ್ಪತ್ರೆಯ  ತುರ್ತು ವಿಭಾಗದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು,  ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂದು ಸುರ್ಜೆವಾಲ್​ ಟ್ವೀಟ್​ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಕೋವಿಡ್ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರಿಂದ  ಅವರನ್ನು ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ವೀಕ್ಷಣೆಗೆ ಇಡಲಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಪಕ್ಷದ ಎಲ್ಲ ಕಾರ್ಯಕರ್ಗುತರಿಗು ಮತ್ತು  ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು ಎಂದು ಸುರ್ಜೇವಾಲಾ ಟ್ವಿಟರ್​​ನಲ್ಲಿ ಹೇಳಿದ್ದಾರೆ.

ಇದನ್ನು ಓದಿ: ರಾಜಸ್ಥಾನದ ಸಚಿವರ ಮಗನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ಮಹಿಳೆ ಮೇಲೆ ಮಸಿ ದಾಳಿ

ಸೋನಿಯಾ ಗಾಂಧಿ ಅವರಿಗೆ 10 ದಿನಗಳ ಹಿಂದೆ ಕೋವಿಡ್-19 ಪತ್ತೆಯಾಗಿತ್ತು. ಆ ಸಮಯದಲ್ಲಿ ರಣದೀಪ್ ಸುರ್ಜೆವಾಲಾ ಅವರು ಸೌಮ್ಯವಾದ ಜ್ವರ ಮತ್ತು ಇತರ ಕೆಲವು ರೋಗಲಕ್ಷಣಗಳು ಇರುವುದರಿಂದ ಅವರು  ಹೋಮ್​​ ಕ್ವಾರೆಂಟನ್​​ ಆಗಿದ್ದರು ಎಂದು ಸುರ್ಜೆವಾಲ್​​ ಹೇಳಿದ್ದಾರೆ.

ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿರವಾಗಿವೆ ಎಂದು ಹೇಳಿದರು. ಮೂಗಿನ ರಕ್ತಸ್ರಾವಕ್ಕೆ ಚಿಕಿತ್ಸೆ ಪಡೆದ ನಂತರ, ಅವರನ್ನು “ವೀಕ್ಷಣೆಗೆ” ಆಸ್ಪತ್ರೆಯ ಹಳೆಯ ಬ್ಲಾಕ್‌ನಲ್ಲಿರುವ ಖಾಸಗಿ ಕೋಣೆಗೆ ಸ್ಥಳಾಂತರಿಸಲಾಯಿತು. ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಆಸ್ಪತ್ರೆಗೆ ಬಂದಿದ್ದರು. ನಂತರ, ಅವರ ಮಗ ರಾಹುಲ್ ಗಾಂಧಿ ಅವರು ಕೂಡ ಬಂದಿದ್ದರು.

ಈ ಸಂಬಂಧ ಟ್ವೀಟ್​ ಮಾಡಿದ ವಿಪಕ್ಷನಾಯಕ ಸಿದ್ದರಾಮಯ್ಯ ಸೋನಿಯಾ ಗಾಂಧಿ ಅವರು ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಪ್ರಾರ್ಥಿಸುತ್ತೇನೆ ಎಂದು ಪ್ರಾರ್ಥಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:02 pm, Sun, 12 June 22