AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯೋಗ ಖಾತರಿ ಯೋಜನೆ ಕುರಿತು ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಮತ್ತು ಸಚಿವ ಅನುರಾಗ್ ಠಾಕೂರ್ ನಡುವೆ ವಾಕ್ಸಮರ

MGNREGA scheme ಕೆಲವು ವರ್ಷಗಳ ಹಿಂದೆ ಹಲವಾರು ಜನರಿಂದ ಅಪಹಾಸ್ಯಕ್ಕೊಳಗಾದ ಎಂಜಿಎನ್‌ಆರ್‌ಇಜಿಎ ಕೊವಿಡ್ ಮತ್ತು ಲಾಕ್‌ಡೌನ್ ಸಮಯದಲ್ಲಿ ಕೋಟ್ಯಂತರ ಪೀಡಿತ ಬಡ ಕುಟುಂಬಗಳಿಗೆ ಸಮಯೋಚಿತ ಸಹಾಯವನ್ನು ನೀಡಿತು.

ಉದ್ಯೋಗ ಖಾತರಿ ಯೋಜನೆ ಕುರಿತು ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಮತ್ತು ಸಚಿವ ಅನುರಾಗ್ ಠಾಕೂರ್ ನಡುವೆ ವಾಕ್ಸಮರ
ಸೋನಿಯಾ ಗಾಂಧಿ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Mar 31, 2022 | 11:22 PM

Share

ಉದ್ಯೋಗ ಖಾತರಿ ಯೋಜನೆಯಾದ ಎಂಜಿಎನ್‌ಆರ್‌ಇಜಿಎ (MGNREGA) ಕುರಿತು ಗುರುವಾರ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ ಗಾಂಧಿ (Sonia Gandhi), ಆಡಳಿತ ಪಕ್ಷವು ಬಜೆಟ್ ಹಂಚಿಕೆಯನ್ನು ಕಡಿತಗೊಳಿಸುತ್ತಿದೆ ಎಂದು ಆರೋಪಿಸಿದರು. ಎಂಜಿಎನ್‌ಆರ್‌ಇಜಿಎ ಯೋಜನೆ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ) ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಪ್ರಾರಂಭಿಸಲಾದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. “ಕೆಲವು ವರ್ಷಗಳ ಹಿಂದೆ ಹಲವಾರು ಜನರಿಂದ ಅಪಹಾಸ್ಯಕ್ಕೊಳಗಾದ ಎಂಜಿಎನ್‌ಆರ್‌ಇಜಿಎ ಕೊವಿಡ್ (Covid 19) ಮತ್ತು ಲಾಕ್‌ಡೌನ್ ಸಮಯದಲ್ಲಿ ಕೋಟ್ಯಂತರ ಪೀಡಿತ ಬಡ ಕುಟುಂಬಗಳಿಗೆ ಸಮಯೋಚಿತ ಸಹಾಯವನ್ನು ನೀಡಿತು.ಇದು ಸರ್ಕಾರಕ್ಕೆ ಮುಖ ಉಳಿಸುವಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಿತು. ಆದರೂ, ಬಜೆಟ್‌ನಲ್ಲಿ ಯೋಜನೆಗೆ ಹಂಚಿಕೆಗೆ ನಿರಂತರ ಕಡಿತವನ್ನು ಮಾಡಲಾಗುತ್ತಿದೆ. ಈ ವರ್ಷ ಮನರೇಗಾ ಬಜೆಟ್ 2020 ಕ್ಕೆ ಹೋಲಿಸಿದರೆ ಉದ್ಯೋಗವು ಹೆಚ್ಚುತ್ತಿರುವಾಗಲೂ 35 ಪ್ರತಿಶತ ಕಡಿಮೆಯಾಗಿದೆ. ಬಜೆಟ್‌ಗೆ ಕತ್ತರಿ ಬಿದ್ದಾಗ ಸುಪ್ರೀಂಕೋರ್ಟ್‌ನಿಂದ ‘ಪ್ರಥಮ ಕಾರ್ಮಿಕ’ ಎಂದು ಪರಿಗಣಿಸಿರುವ ಕಾರ್ಮಿಕರಿಗೆ ವೇತನ ಪಾವತಿ ವಿಳಂಬವಾಗುತ್ತದೆ. ಈ ವರ್ಷ ಮಾರ್ಚ್ 26 ರಂದು ಎಲ್ಲಾ ರಾಜ್ಯಗಳು ಯೋಜನೆಯ ಅಡಿಯಲ್ಲಿ ತಮ್ಮ ಖಾತೆಗಳಲ್ಲಿ ಋಣಾತ್ಮಕ ಸಮತೋಲನವನ್ನು ಪ್ರತಿಬಿಂಬಿಸಿವೆ. ₹ 5,000 ಕೋಟಿ ಮೊತ್ತದ ಬಾಕಿ ಇನ್ನೂ ಬಾಕಿ ಉಳಿದಿದೆ. ವಾರ್ಷಿಕ ಬಜೆಟ್‌ಗೆ ಅನುಮೋದನೆ ನೀಡಲಾಗುವುದಿಲ್ಲ ಎಂದು ಇತ್ತೀಚೆಗೆ ರಾಜ್ಯಗಳಿಗೆ ತಿಳಿಸಲಾಗಿದೆ. ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಬಲಪಡಿಸಬೇಕು ಆದರೆ ಅದು ಬಜೆಟ್ ಅನ್ನು ನಿಲ್ಲಿಸಲು ಅದು ಆಧಾರವಾಗಿರಬಾರದು.

“ಸರ್ಕಾರದ ನಡೆ ಅನುಚಿತ ಮತ್ತು ಅಮಾನವೀಯವಾಗಿದೆ ಎಂದು ಒತ್ತಿ ಹೇಳಿದ ಸೋನಿಯಾ, ಇದಕ್ಕೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು. ಯೋಜನೆಗೆ ಸೂಕ್ತ ಬಜೆಟ್‌ ನಿಗದಿಪಡಿಸುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇನೆ. 15 ದಿನಗಳೊಳಗೆ ಕೂಲಿ ಕಾರ್ಮಿಕರಿಗೆ ವೇತನ ನೀಡಬೇಕು. ಮೂರನೆಯದಾಗಿ, ವೇತನ ವಿಳಂಬವಾದರೆ, ಪರಿಹಾರವನ್ನು ಖಾತರಿಪಡಿಸಬೇಕು ಎಂದು ಹೇಳಿದ್ದಾರೆ.

ಇತ್ತ ಕಾಂಗ್ರೆಸ್ ಪಕ್ಷ ಇಂಧನ ಬೆಲೆ ಏರಿಕೆಯ ಕುರಿತು ರಾಷ್ಟ್ರವ್ಯಾಪಿ ಪ್ರತಿಭಟನೆ ‘ಮೆಹಂಗಾಯಿ ಮುಕ್ತ್ ಭಾರತ್’ ಪ್ರಾರಂಭಿಸಿರುವ ಹೊತ್ತಲ್ಲೇ ಸಂಸತ್ತಿನಲ್ಲಿ ಕಾಂಗ್ರೆಸ್ ಮುಖ್ಯಸ್ಥರ ಈ ಟೀಕೆ ಬಂದಿದೆ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ವಿರೋಧ ಪಕ್ಷದ ಸಂಸದರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸೋನಿಯಾ ಗಾಂಧಿಯವರ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸಂಸತ್ತಿನಲ್ಲಿ ಪ್ರತಿದಾಳಿ ನಡೆಸಿದ್ದಾರೆ. ನಾವು ಜಿಯೋಟ್ಯಾಗ್ ಮಾಡಲು ಪ್ರಾರಂಭಿಸಿ ಕೆಲಸ ಮಾಡಿದೆವು. ಇಂದು ಎಂಜಿಎನ್‌ಆರ್‌ಇಜಿಎ ಕಾರ್ಯಕರ್ತರು ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ತಮ್ಮ ಖಾತೆಗಳಿಗೆ ಹಣವನ್ನು ಪಡೆಯುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಖಾತೆಗಳನ್ನು ತೆರೆದರು ಮತ್ತು ಎಂಜಿಎನ್‌ಆರ್‌ಇಜಿಎ ಕಾರ್ಮಿಕರ ಹಣವನ್ನು ಆ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಠಾಕೂರ್ ಹೇಳಿರುವುಗಾಗಿ ಎಎನ್ಐ ವರದಿ ಮಾಡಿದೆ. ಠಾಕೂರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಹಲವು ಕಾಂಗ್ರೆಸ್ ಸಂಸದರು ನಂತರ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:  ಅವಿಶ್ವಾಸ ನಿರ್ಣಯ ಮತದಾನ ಮೊದಲು ಪಾಕ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಎಂದಿಗೂ ಸೋಲೊಪ್ಪಲಾರೆ: ಇಮ್ರಾನ್ ಖಾನ್

-ವರದಿ: ಚಂದ್ರಮೋಹನ್

Published On - 11:21 pm, Thu, 31 March 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್