ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪುಣ್ಯಸ್ಮರಣೆಗೆ ಮಾಣಿಕ್ಶಾ ಫೊಟೊ ಬಳಕೆ; ಟ್ವಿಟರ್ನಲ್ಲಿ ಮುಜುಗರ ಅನುಭವಿಸಿದ ಕಾಂಗ್ರೆಸ್
ಹಂಚಿಕೊಂಡಿದ್ದ ಫೊಟೊ ತಪ್ಪಾಗಿ ಎಡವಟ್ಟಾಗಿತ್ತು. ಕಾರಿಯಪ್ಪ ಬದಲು ಮಣಿಕ್ಶಾ ಅವರ ಫೊಟೊವನ್ನು ಟ್ವೀಟ್ನಲ್ಲಿ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ನೂರಾರು ಮಂದಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಪಕ್ಷ ಟ್ವಿಟರ್ನಲ್ಲಿ ತಪ್ಪಾಗಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಪೇಚಿಗೆ ಸಿಲುಕಿದ ಘಟನೆ ಶನಿವಾರ ನಡೆದಿದೆ. ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಪುಣ್ಯಸ್ಮರಣೆ ಹಂಚಿಕೊಳ್ಳುವ ವೇಳೆಯಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ಶಾ ಫೊಟೊ ಹಂಚಿಕೊಂಡು ಮುಜುಗರಕ್ಕೆ ಒಳಗಾಗಿದೆ.
ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಡಿದ್ದ ಟ್ವೀಟ್ನಲ್ಲಿ, ಫೀಲ್ಡ್ ಮಾರ್ಷಲ್ ಕಾರಿಯಪ್ಪ ಇಂಡಿಯನ್ ಆರ್ಮಿಯ ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದರು. ಅವರ ಪುಣ್ಯಸ್ಮರಣೆಯ ದಿನದಂದು 1947ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದ ಅವರ ನಾಯಕತ್ವಕ್ಕೆ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಬರೆದುಕೊಂಡಿತ್ತು.
ಈ ವಿವರಗಳು ಸರಿಯಾಗಿಯೇ ಇದ್ದರೂ ಹಂಚಿಕೊಂಡಿದ್ದ ಫೊಟೊ ತಪ್ಪಾಗಿ ಎಡವಟ್ಟಾಗಿತ್ತು. ಕಾರಿಯಪ್ಪ ಬದಲು ಮಣಿಕ್ಶಾ ಅವರ ಫೊಟೊವನ್ನು ಟ್ವೀಟ್ನಲ್ಲಿ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ನೂರಾರು ಮಂದಿ ನೆಟ್ಟಿಗರು ಪ್ರತಿಕ್ರಿಯೆ ನೀಡಿದರು. ಆ ಬಳಿಕ ಕಾಂಗ್ರೆಸ್ ತಾನು ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿತು.
60 years of administrative experience, still unable to distinguish between Sam Manekshaw and KM Cariappa https://t.co/oupjJEmlpl pic.twitter.com/1osdEX5h3b
— CK (@chaos_2406) May 15, 2021
Not knowing national icons is one thing, doesn’t the person handling @INCIndia page even know how to read English? Field Marshall Sam Manekshaw’s name is written crystal clear on the name badge. How ridiculous. pic.twitter.com/IrcAK5j6ps
— Anusha Ravi Sood (@anusharavi10) May 15, 2021
Congress doesn’t know the difference between KM Cariappa & Sam Manekshaw.
Maybe they could have read his name badge at least? pic.twitter.com/sGVieTXRI5
— Vasudha (@WordsSlay) May 15, 2021
ಇದನ್ನೂ ಓದಿ: ಕೊವಿಡ್ ಪರಿಹಾರ ಸಾಮಾಗ್ರಿ ಹಂಚಿಕೆಯಲ್ಲಿ ಅವ್ಯವಹಾರ ಆರೋಪ; ಇದಕ್ಕೆಲ್ಲಾ ಹೆದರುವುದಿಲ್ಲ ಎಂದ ಯುವ ಕಾಂಗ್ರೆಸ್ ನಾಯಕ
ಪೊಲೀಸರು ಹಲ್ಲೆ ಮಾಡಿದ್ದಾರೆಂಬ ವಿಡಿಯೋ ವೈರಲ್; ಕಾಂಗ್ರೆಸ್ ಸದಸ್ಯೆಯನ್ನು ವಶಕ್ಕೆ ಪಡೆದ ಬೆಂಗಳೂರು ಸೈಬರ್ ಪೊಲೀಸರು
Published On - 7:32 pm, Sat, 15 May 21