ತೆಲಂಗಾಣ ರಾಜ್ಯದಲ್ಲೂ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್​: 6 ಗ್ಯಾರಂಟಿ ಯೋಜನೆ ಜಾರಿ ಭರವಸೆ

ಕಾಂಗ್ರೆಸ್​ ತೆಲಂಗಾಣ ರಾಜ್ಯದಲ್ಲೂ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 6 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಭರವಸೆ ನೀಡಲಾಗಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ನಡೆದ ಕಾಂಗ್ರೆಸ್​ ರ‍್ಯಾಲಿಯಲ್ಲಿ ಕಾಂಗ್ರೆಸ್​ ಮುಖಸ್ಥೆ ಸೋನಿಯಾ ಗಾಂಧಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ತೆಲಂಗಾಣ ರಾಜ್ಯದಲ್ಲೂ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್​: 6 ಗ್ಯಾರಂಟಿ ಯೋಜನೆ ಜಾರಿ ಭರವಸೆ
ಸೋನಿಯಾ ಗಾಂಧಿ
Follow us
ಗಂಗಾಧರ​ ಬ. ಸಾಬೋಜಿ
|

Updated on: Sep 17, 2023 | 9:03 PM

ತೆಲಂಗಾಣ, ಸೆಪ್ಟೆಂಬರ್​ 17: ಕರ್ನಾಟಕದಲ್ಲಿ ಪಂಚ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರಾಜ್ಯದಲ್ಲಿ ಗೆದ್ದಿರುವ ಕಾಂಗ್ರೆಸ್ (Congress)​ ಸರ್ಕಾರ, ಇದೀಗ ತೆಲಂಗಾಣ ರಾಜ್ಯದಲ್ಲೂ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 6 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಭರವಸೆ ನೀಡಲಾಗಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡದಲ್ಲಿ ನಡೆದ ಕಾಂಗ್ರೆಸ್​ ರ‍್ಯಾಲಿಯಲ್ಲಿ ಮೊದಲ ಗ್ಯಾರಂಟಿ ‘ಮಹಾಲಕ್ಷ್ಮೀ’ ಯೋಜನೆಯನ್ನು ಕಾಂಗ್ರೆಸ್​ ಮುಖಸ್ಥೆ ಸೋನಿಯಾ ಗಾಂಧಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

‘ಮಹಾಲಕ್ಷ್ಮೀ’ ಯೋಜನೆಯಡಿ ತೆಲಂಗಾಣದಲ್ಲಿ ಮಹಿಳೆಯರಿಗೆ ಮಾಸಿಕ 2,500 ಹಣ ನೀಡುವ ಸ್ಕೀಂ ಆಗಿದ್ದು, ಪ್ರತಿ ಸಿಲಿಂಡರ್‌ಗೆ 500 ರೂಪಾಯಿ ಸಬ್ಸಿಡಿ ಮತ್ತು ತೆಲಂಗಾಣದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ಕಟ್ಟಿದಾಕ್ಷಣ ರಾಮನಾಗುವುದಿಲ್ಲ: ಕಪಿಲ್ ಸಿಬಲ್ ವ್ಯಂಗ್ಯ

2ನೇ ಗ್ಯಾರಂಟಿ ‘ರೈತ ಭರೋಸಾ’ ಯೋಜನೆಯಡಿ ಆರ್ಥಿಕ ಸಹಾಯ ಮುಂದಾಗಿದ್ದು, ಅನ್ನದಾತರಿಗೆ ಪ್ರತಿ ವರ್ಷ 15 ಸಾವಿರ ರೂಪಾಯಿ ನೀಡುವ ಯೋಜನೆ ಇದಾಗಿದೆ. ರೈತ ಕೂಲಿ ಕಾರ್ಮಿಕರಿಗೂ ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ಘೋಷಿಸಿದೆ. ರೈತ ಕೂಲಿ ಕಾರ್ಮಿಕರಿಗೆ ಪ್ರತಿ ವರ್ಷ 12 ಸಾವಿರ ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ. ಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 500 ರೂಪಾಯಿ, ಮಾಸಿಕ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆ ಕೂಡ ಘೋಷಣೆ ಮಾಡಲಾಗಿದೆ.

‘ಇಂದಿರಮ್ಮ ಗೃಹ ನಿರ್ಮಾಣ’ ಯೋಜನೆ ಘೋಷಿಸಿದ ಕಾಂಗ್ರೆಸ್‌, ಮನೆ ಇಲ್ಲದವರಿಗೆ ನಿವೇಶನ ಖರೀದಿಸಲು 5 ಲಕ್ಷ ರೂ. ನೀಡುವ ಭರವಸೆ ನೀಡಿದ್ದಾರೆ. ತೆಲಂಗಾಣ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಹೋರಾಟ ಮಾಡಿದವರಿಗೆ ಉಚಿತ ನಿವೇಶನ ನೀಡಲು ಕಾಂಗ್ರೆಸ್​ ಮುಂದಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಯಶೋಭೂಮಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ವಿಶ್ವದರ್ಜೆಯ ಈ ಸೆಂಟರ್​ನ ವಿಶೇಷತೆಗಳೇನು?

ಹಿರಿಯ ನಾಗರಿಕರಿಗೆ ಮಾಸಿಕ 4 ಸಾವಿರ ರೂಪಾಯಿ ಪಿಂಚಣಿ, 10 ಲಕ್ಷ ರೂಪಾಯಿ ಮೊತ್ತದ ರಾಜೀವ್‌ ಆರೋಗ್ಯಶ್ರೀ ವಿಮಾ ಯೋಜನೆ, ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ‘ವಿದ್ಯಾ ಭರೋಸಾ’ ಕಾರ್ಡ್‌ ಯೋಜನೆ, ಪ್ರತಿ ಮಂಡಲಂನಲ್ಲೂ ‘ತೆಲಂಗಾಣ ಇಂಟರ್‌ನ್ಯಾಷನಲ್‌’ ಶಾಲೆ ತೆರೆಯುವುದಾಗಿ ಹೇಳಿದ್ದು, ಮೊದಲ ಸಂಪುಟ ಸಭೆಯಲ್ಲೇ ಗ್ಯಾರಂಟಿ ಯೋಜನೆ ಅನುಷ್ಠಾನ ಭರವಸೆ ನೀಡಿದೆ.

6 ಗ್ಯಾರಂಟಿ ಯೋಜನೆಗಳು ಹೀಗಿವೆ

  • ಮಹಾಲಕ್ಷ್ಮೀ
  • ರೈತ ಭರೋಸಾ
  • ಇಂದಿರಮ್ಮ ಗೃಹ ನಿರ್ಮಾಣ
  • ವಿದ್ಯಾ ಭರೋಸಾ
  • ಯುವ ವಿಕಾಸ
  • ಚೆಯುತ

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರದ ಕನಸು: ಸೋನಿಯಾ ಗಾಂಧಿ

ಕಾಂಗ್ರೆಸ್​ ರ‍್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್​ ಮುಖಸ್ಥೆ ಸೋನಿಯಾ ಗಾಂಧಿ, ತೆಲಂಗಾಣ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಾವು ಆರು ಗ್ಯಾರಂಟಿಗಳನ್ನು ಘೋಷಿಸಿದ್ದು, ಅವುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ನಾನು ಕನಸು ಕಾಣುತ್ತೇನೆ, ಇಲ್ಲಿ ಸಮಾಜದ ಪ್ರತಿಯೊಂದು ವರ್ಗವು ದಣಿವರಿಯದೆ ಕೆಲಸ ಮಾಡುತ್ತಿದೆ. ನೀವು ನಮ್ಮನ್ನು ಬೆಂಬಲಿಸುವಿರಾ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.