Kolkata rape-murder: ಕೋಲ್ಕತ್ತಾ ಅತ್ಯಾಚಾರ-ಕೊಲೆ: ಬಂಗಾಳದ 42 ವೈದ್ಯರ ‘ವರ್ಗಾವಣೆ’ ವಿವಾದ; ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ವಾಗ್ದಾಳಿ
ರಾಜ್ಯ ಸರ್ಕಾರದ ಆದೇಶಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಮಮತಾ ಬ್ಯಾನರ್ಜಿ ವೈದ್ಯಕೀಯ ಕಾಲೇಜು ಕೋಲ್ಕತ್ತಾ ಮತ್ತು ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಅವರ "ಫ್ಯಾಸಿಸ್ಟ್ ಆಡಳಿತ" ವಿರುದ್ಧದ ಪ್ರತಿಭಟನೆಗಳ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದಾರೆ.
ಕೋಲ್ಕತ್ತಾ ಆಗಸ್ಟ್ 17: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹಿರಿಯ ವೈದ್ಯರು ಮತ್ತು ಪ್ರಾಧ್ಯಾಪಕರನ್ನು ವರ್ಗಾವಣೆ ಮಾಡಿದ್ದಾರೆ ಎಂದು ಬಿಜೆಪಿ (BJP) ಆರೋಪಿಸಿದೆ. ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31ರ ಹರೆಯದ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ವೈದ್ಯರು ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿದ್ದಾರೆ. ವರ್ಗಾವಣೆಗೊಂಡ 42 ವೈದ್ಯರಲ್ಲಿ ಇಬ್ಬರು, ಡಾ. ಸಂಗೀತಾ ಪಾಲ್ ಮತ್ತು ಡಾ. ಸುಪ್ರಿಯಾ ದಾಸ್ ಅವರು ಈ ಹಿಂದೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿದ್ದರು ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ಆದೇಶಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಮಮತಾ ಬ್ಯಾನರ್ಜಿ ವೈದ್ಯಕೀಯ ಕಾಲೇಜು ಕೋಲ್ಕತ್ತಾ ಮತ್ತು ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಅವರ “ಫ್ಯಾಸಿಸ್ಟ್ ಆಡಳಿತ” ವಿರುದ್ಧದ ಪ್ರತಿಭಟನೆಗಳ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದಾರೆ.
ಆಗಸ್ಟ್ 16 ರಂದು, ಪಶ್ಚಿಮ ಬಂಗಾಳ ಸರ್ಕಾರದ ಆರೋಗ್ಯ ಸಚಿವಾಲಯವು ಈಗಾಗಲೇ ಅಸ್ತವ್ಯಸ್ತವಾಗಿರುವ ಪರಿಸ್ಥಿತಿಯನ್ನು ಹೆಚ್ಚಿಸುವ ವರ್ಗಾವಣೆ ಆದೇಶಗಳ 8 ಪುಟಗಳ ದೀರ್ಘ ಪಟ್ಟಿಯನ್ನು ನೀಡಿದೆ. ಮಮತಾ ಬ್ಯಾನರ್ಜಿಯವರ ಗುರಿ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಕಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜು. ಇವೆರಡೂ ಆಕೆಯ ಫ್ಯಾಸಿಸ್ಟ್ ಆಡಳಿತದ ವಿರುದ್ಧದ ಪ್ರತಿಭಟನೆಯ ಕೇಂದ್ರಬಿಂದುವಾಗಿದೆ” ಎಂದು ಮಾಳವಿಯಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಳವಿಯಾ ಟ್ವೀಟ್
On 16th Aug, West Bengal Govt’s Health Ministry has issued an 8 page long list of transfer orders, adding to the already chaotic situation.
On Mamata Banerjee’s target is Medical College Kolkata and Calcutta National Medical College. These two are the epicentre of protests… pic.twitter.com/TyLZqGA2fO
— Amit Malviya (@amitmalviya) August 17, 2024
ಇಲ್ಲಿಯವರೆಗೆ ಈ ಎರಡು ಪ್ರತಿಷ್ಠಿತ ಸಂಸ್ಥೆಗಳಿಂದ ಐವರು ಪ್ರಾಧ್ಯಾಪಕರನ್ನು ಸಿಲಿಗುರಿ, ತಾಮ್ಲುಕ್, ಜಾರ್ಗ್ರಾಮ್ ಮುಂತಾದ ಕಾಲೇಜುಗಳಿಗೆ ವರ್ಗಾಯಿಸಲಾಗಿದೆ. ಇದು ಹಿರಿಯ ವೈದ್ಯ ಸಮುದಾಯವನ್ನು ಹೆದರಿಸುವ ಹತಾಶ ಪ್ರಯತ್ನವಾಗಿದೆ. ಮಮತಾ ಬ್ಯಾನರ್ಜಿ ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ? ಎಂದು ಮಾಳವಿಯಾ ಪ್ರಶ್ನಿಸಿದ್ದಾರೆ.
ಸರ್ಕಾರದ ಈ ನಡೆಯನ್ನು ವೈದ್ಯರ ಸಂಘ ಖಂಡಿಸಿದ್ದು, ಇದು ಪಿತೂರಿ. ಹಿರಿಯ ಆರೋಗ್ಯ ವೃತ್ತಿಪರರನ್ನು ಬೆದರಿಸುವ ಪ್ರಯತ್ನ ಎಂದು ಹೇಳಿದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಗ್ಗೆ ಕಿಡಿ ಕಾರಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, “ಬಂಗಾಳ ಆರ್‌ಜಿ ಕರ್ ಆಸ್ಪತ್ರೆಯ ಗ್ಯಾಂಗ್ ರೇಪಿಸ್ಟ್‌ಗಳನ್ನು ಹತ್ತಿಕ್ಕುವ ಬದಲು ಮಮತಾ ಸರ್ಕಾರವು ನ್ಯಾಯಕ್ಕಾಗಿ ಹೋರಾಟ ಮಾಡುವವರನ್ನು ದಮನ ಮಾಡುವಲ್ಲಿ ನಿರತವಾಗಿದೆ. ಧ್ವನಿ ಎತ್ತಿದ 43 ವೈದ್ಯರನ್ನು ತಾಲಿಬಾನಿ ಫತ್ವಾದಂತೆ ವರ್ಗಾವಣೆ ಮಾಡಿದೆ. ಕೋಲ್ಕತ್ತಾ ಪೊಲೀಸರು ನಾಗರಿಕರು ಮತ್ತು ಪತ್ರಕರ್ತರಿಗೆ ತಮ್ಮ ಧ್ವನಿ ಎತ್ತುವ ಮತ್ತು ಸೋಷ್ಯಲ್ ಮೀಡಿಯಾ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಬೆದರಿಕೆ ಹಾಕಲು ನೋಟಿಸ್ ಕಳುಹಿಸುತ್ತಿದ್ದಾರೆ. 5000 ಗೂಂಡಾಗಳನ್ನು ಶಾಂತಿಯುತ ಮೆರವಣಿಗೆಗೆ ಅಡ್ಡಿಪಡಿಸಲು ಮತ್ತು ಅಪರಾಧದ ಸ್ಥಳವನ್ನು ಲೂಟಿ ಮಾಡಲು ಮತ್ತು ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಸಾಕ್ಷ್ಯ ನಾಶಪಡಿಸಲು ಕಳುಹಿಸಲಾಗಿದೆ ”ಎಂದು ಹೇಳಿದ್ದಾರೆ.
#WATCH | On rape and murder of woman resident doctor at RG Kar Medical College and Hospital, BJP leader Shehzad Poonawalla says, “…Everyone in this country is outraged and all are demanding only one thing that there should be justice. But instead of giving justice, the agenda… pic.twitter.com/PP1a93NCck
— ANI (@ANI) August 17, 2024
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಸಂವಿಧಾನವನ್ನು ಉಳಿಸಿ” ಎಂದು ಕರೆ ನೀಡುವವರು ಮೌನವಾಗಿದ್ದಾರೆ. ರಾಹುಲ್ ಗಾಂಧಿ ಯಾಕೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. “ಈ ಮಧ್ಯೆ ಸಂವಿಧಾನ್ ಬಚಾವೋ ಎನ್ನುವವರು ಸುಮ್ಮನಿದ್ದಾರೆ. ರಾಹುಲ್ ಜೀ ಕುಚ್ ತೋ ಬೋಲೋ? ಮಮತಾ ಸರ್ಕಾರ ಮತ್ತು NCW ಮೇಲೆ ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಾಗಲೂ ಇದು ನಡೆಯುತ್ತಿದೆ. ಎನ್‌ಸಿಡಬ್ಲ್ಯೂ ವಿಚಾರಣಾ ಸಮಿತಿಯು ಟ್ರೇನಿ ವೈದ್ಯೆಯ ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಭದ್ರತೆ, ಮೂಲಸೌಕರ್ಯ ಮತ್ತು ತನಿಖೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿದೆ ಎಂದು ಪೂನಾವಾಲ ಹೇಳಿದ್ದಾರೆ.
ಇದನ್ನೂ ಓದಿ: Kolkata rape-murder: ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ: ಆರ್‌ಜಿ ಕರ್ ಆಸ್ಪತ್ರೆ ತಲುಪಿದ ಸಿಬಿಐ ತಂಡ
ಮಗಳ ಹತ್ಯೆಗೆ ವೈದ್ಯರೇ ಕಾರಣ: ಶಂಕೆ ವ್ಯಕ್ತಪಡಿಸಿದ ಪೋಷಕರು
ಆಗಸ್ಟ್ 9 ರಂದು ಆಸ್ಪತ್ರೆಯ ಎದೆ ವಿಭಾಗದ 31 ವರ್ಷದ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಿದ ಆರೋಪದಲ್ಲಿ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ ಸಂದೀಪ್ ಘೋಷ್ ಅವರನ್ನು ಶುಕ್ರವಾರ ಕೇಂದ್ರೀಯ ತನಿಖಾ ದಳ (ಸಿಬಿಐ) ವಶಕ್ಕೆ ತೆಗೆದುಕೊಂಡಿದೆ. ಏತನ್ಮಧ್ಯೆ, ತಮ್ಮ ಮಗಳ ಕೊಲೆಯಲ್ಲಿ ಆಸ್ಪತ್ರೆಯ ಹಲವಾರು ಇಂಟರ್ನ್‌ಗಳು ಮತ್ತು ವೈದ್ಯರು ಭಾಗಿಯಾಗಿರಬಹುದು ಎಂದು ಪೋಷಕರು ಕೇಂದ್ರೀಯ ತನಿಖಾ ಸಂಸ್ಥೆಗೆ ತಿಳಿಸಿದ್ದಾರೆ. ಕಲ್ಕತ್ತಾ ಹೈಕೋರ್ಟ್ ಆದೇಶದ ಅಡಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಏಜೆನ್ಸಿಗೆ ಅವರು ಶಂಕಿತ ವ್ಯಕ್ತಿಗಳ ಹೆಸರನ್ನು ಸಹ ಒದಗಿಸಿದ್ದಾರೆ.
ಆರಂಭಿಕ ತನಿಖೆಯಲ್ಲಿ ಭಾಗಿಯಾಗಿರುವ ಈ ವ್ಯಕ್ತಿಗಳು ಹಾಗೂ ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಲು ಸಂಸ್ಥೆ ಗಮನಹರಿಸುತ್ತಿದೆ. ಕೊಲೆಯಾದ ರಾತ್ರಿ ವೈದ್ಯರೊಂದಿಗೆ ಕರ್ತವ್ಯದಲ್ಲಿದ್ದ ಗೃಹ ಸಿಬ್ಬಂದಿ ಮತ್ತು ಇಬ್ಬರು ಸ್ನಾತಕೋತ್ತರ ತರಬೇತಿ ನಿರತರನ್ನು ಸಿಬಿಐ ಶುಕ್ರವಾರ ಕರೆಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ