AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಬ್​ನಲ್ಲಿ ಬಂದು ಸೇತುವೆ ಮೇಲಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ ಕಾರು ಚಾಲಕ

ಕ್ಯಾಬ್​​ನಲ್ಲಿ ಬಂದಿದ್ದ ಮಹಿಳೆಯ ಆತಂಕಕಾರಿ ವರ್ತನೆಯನ್ನು ಗಮನಿಸಿದ ಚಾಲಕ ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾನೆ. ಬಳಿಕ ಮಹಿಳೆ ಅಟಲ್ ಸೇತುವಿನ ಬಳಿ ಕಾರು ನಿಲ್ಲಿಸಲು ಹೇಳಿದ್ದು, ಮಹಿಳೆ ಇದ್ದಕ್ಕಿದ್ದಂತೆ ಸಮುದ್ರಕ್ಕೆ ಹಾರಲು ಮುಂದಾಗಿದ್ದಾಳೆ. ಈ ವೇಳೆ ಅಲ್ಲಿದ್ದ ಕ್ಯಾಬ್​ ಡ್ರೈವರ್​​​ ಮಹಿಳೆಯ ಜುಟ್ಟು ಹಿಡಿದು ಎಳೆದಿದ್ದು, ಪೊಲೀಸರು ಸೇರಿ ಮಹಿಳೆಯನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ.

ಕ್ಯಾಬ್​ನಲ್ಲಿ ಬಂದು ಸೇತುವೆ ಮೇಲಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ ಕಾರು ಚಾಲಕ
ಅಕ್ಷತಾ ವರ್ಕಾಡಿ
|

Updated on:Aug 17, 2024 | 3:44 PM

Share

ಮುಂಬೈ: ಸೇತುವೆಯಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಮಹಿಳೆಯನ್ನು ರೀಮಾ ಮುಖೇಶ್ ಪಟೇಲ್(56) ಎಂದು ಗುರುತಿಸಲಾಗಿದ್ದು, ಇವರು ಅಟಲ್ ಸೇತು ಎಂದೂ ಕರೆಯಲ್ಪಡುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‍ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ್ದಾರೆ. ಆದರೆ ಮಹಿಳೆಯನ್ನು ಕ್ಯಾಬ್ ಡ್ರೈವರ್​​ ಮತ್ತು ಪೊಲೀಸ್ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಆ.16ರಂದು ಸಂಜೆ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯ ಅಧಿಕಾರಿಗಳು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಸಿಸಿಟಿವಿ ವೀಡಿಯೋದಲ್ಲಿ ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಲೆ ಮಹಿಳೆ ಕುಳಿತಿರುವುದು ಕಂಡುಬಂದಿದೆ. ಕ್ಯಾಬ್​​ನಲ್ಲಿ ಬಂದಿದ್ದ ಮಹಿಳೆಯ ಆತಂಕಕಾರಿ ವರ್ತನೆಯನ್ನು ಗಮನಿಸಿದ ಚಾಲಕ ತಕ್ಷಣವೇ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾನೆ. ಮಹಿಳೆ ಇದ್ದಕ್ಕಿದ್ದಂತೆ ಸಮುದ್ರಕ್ಕೆ ಹಾರಲು ಮುಂದಾಗಿದ್ದು, ಈ ವೇಳೆ ಅಲ್ಲಿದ್ದ ಕ್ಯಾಬ್​ ಡ್ರೈವರ್​​​ ಆಕೆಯನ್ನು ಹಿಡಿದುಕೊಂಡಿದ್ದಾನೆ. ಬಳಿಕ ಪೊಲೀಸರು ಸೇರಿ ಮಹಿಳೆಯನ್ನು ಸುರಕ್ಷಿತವಾಗಿ ಎಳೆದೊಯ್ಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ‌Richard Lugner: 2 ತಿಂಗಳ ಹಿಂದಷ್ಟೇ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯನೇರ್ ನಿಧನ

ಮಹಿಳೆಯ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಎಂಬುದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. @CPMumbaiPolice ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಇಂದು (ಆ.17) ಬೆಳಗ್ಗೆ 1.47ಕ್ಕೆ ಹಂಚಿಕೊಂಡಿರುವ ವಿಡಿಯೋ ಇದೀಗಾಗಲೇ 3ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:43 pm, Sat, 17 August 24

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಟಫ್ ಟಾಸ್ಕ್; ಹೈರಾಣಾದ ಸ್ಪರ್ಧಿಗಳು
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ