Covid 19 India Update: ಭಾರತದಲ್ಲಿ 1.79 ಲಕ್ಷ ಮಂದಿಗೆ ಕೊರೊನಾ ಸೋಂಕು, ನಿನ್ನೆಗಿಂತ ಶೇ 12.5ರಷ್ಟು ಹೆಚ್ಚಳ

ಭಾರತದ ವಿವಿಧ ರಾಜ್ಯಗಳಲ್ಲಿ ಭಾನುವಾರ ಮುಂಜಾನೆ 8 ಗಂಟೆಯಿಂದ ಸೋಮವಾರ ಮುಂಜಾನೆ 8 ಗಂಟೆ ನಡುವಣ ಅವಧಿಯಲ್ಲಿ 1,79,723 (1.79 ಲಕ್ಷ) ಮಂದಿಯಲ್ಲಿ ಹೊಸದಾಗಿ ಕೊವಿಡ್ ಸೋಂಕು ಕಾಣಿಸಿಕೊಂಡಿದೆ.

Covid 19 India Update: ಭಾರತದಲ್ಲಿ 1.79 ಲಕ್ಷ ಮಂದಿಗೆ ಕೊರೊನಾ ಸೋಂಕು, ನಿನ್ನೆಗಿಂತ ಶೇ 12.5ರಷ್ಟು ಹೆಚ್ಚಳ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 10, 2022 | 10:45 AM

ದೆಹಲಿ: ಭಾರತದ ವಿವಿಧ ರಾಜ್ಯಗಳಲ್ಲಿ ಭಾನುವಾರ ಮುಂಜಾನೆ 8 ಗಂಟೆಯಿಂದ ಸೋಮವಾರ ಮುಂಜಾನೆ 8 ಗಂಟೆ ನಡುವಣ ಅವಧಿಯಲ್ಲಿ 1,79,723 (1.79 ಲಕ್ಷ) ಮಂದಿಯಲ್ಲಿ ಹೊಸದಾಗಿ ಕೊವಿಡ್ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 4,033 ಮಂದಿ ಒಮಿಕ್ರಾನ್ ರೂಪಾಂತರಿಯಿಂದ ಸೋಂಕಿತರಾಗಿದ್ದಾರೆ. ದೇಶದ ಎಲ್ಲ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ದಿನ ಒಟ್ಟು 146 ಮಂದಿ ನಿಧನರಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆಯ ಹೋಲಿಕೆಯಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 2.03 ಇದೆ. ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರಮಾಣವು ಶೇ 96.62ಕ್ಕೆ ಕುಸಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು ಒಂದೇ ದಿನ 1,33,008 ಲಕ್ಷದಷ್ಟು ಹೆಚ್ಚಾಗಿದೆ. ದೇಶದಲ್ಲಿ ಪ್ರಸ್ತುತ 7,23,619 ಸಕ್ರಿಯ ಪ್ರಕರಣಗಳಿವೆ.

ದೈನಂದಿನ ಪಾಸಿಟಿವಿಟಿ ಸರಾಸರಿ ಶೇ 13.29 ಇದ್ದರೆ, ವಾರದ ಸರಾಸರಿ ಪ್ರಮಾಣವು ಶೇ 7.92 ಇದೆ. ಈವರೆಗೆ ಒಟ್ಟು 151.94 ಡೋಸ್ ಲಸಿಕೆ ನೀಡಲಾಗಿದೆ. ಕೊವಿಡ್ 3ನೇ ಅಲೆಯು ಮಹಾರಾಷ್ಟ್ರವನ್ನೇ ಹೆಚ್ಚಾಗಿ ಬಾಧಿಸುತ್ತಿದೆ. ಭಾನುವಾರ ಮಹಾರಾಷ್ಟ್ರದಲ್ಲಿ 44,388 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 69,20,044 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪ್ರಸ್ತುತ 2,02,259 ಸಕ್ರಿಯ ಪ್ರಕರಣಗಳಿವೆ.

ಚುನಾವಣೆ ಹೊಸಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಸೋಂಕು ಪ್ರಮಾಣವು ಶೇ 1300ರಷ್ಟು ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 7,695 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ವಾರಕ್ಕೆ ಹೋಲಿಸಿದರೆ ಇದು 13 ಪಟ್ಟು ಹೆಚ್ಚು. ಈ ಪೈಕಿ ರಾಜಧಾನಿ ಲಖನೌದಲ್ಲಿ 1,115 ಮತ್ತು ದೆಹಲಿ ಸಮೀಪದ ನೊಯ್ಡಾದಲ್ಲಿ 1,149 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕಳೆದ ಭಾನುವಾರ (ಜ 3) ರಾಜ್ಯದಲ್ಲಿ ಒಟ್ಟು 552 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.

ದೆಹಲಿಯಲ್ಲಿ ಭಾನುವಾರ ಕೊವಿಡ್​ನಿಂದ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷದ ಜೂನ್ 16ರಿಂದೀಚೆಗೆ ವರದಿಯಾಗಿರುವ ಹೆಚ್ಚಿನ ಸಂಖ್ಯೆಯ ಮರಣ ಸಂಖ್ಯೆಯಿದು. ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 22,751 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ 23.53 ಇದೆ.

ಪರಿಸ್ಥಿತಿಯ ತೀವ್ರತೆ ಅರ್ಥ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಟಿಂಗ್​ಗೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದ್ದರು. ಹದಿಹರೆಯದವರಿಗೆ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಬೇಕು. ಕೊವಿಡ್ ಸುರಕ್ಷೆಯ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ಮಾಡಿದ್ದರು.

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 12,000 ಜನರಿಗೆ ಕೊರೊನಾ ದೃಢ; 4 ಮಂದಿ ಸಾವು ಇದನ್ನೂ ಓದಿ: ಸುಪ್ರೀಂಕೋರ್ಟ್​​ನಲ್ಲಿ 150ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ ಸೋಂಕು; ಕೋರ್ಟ್​ ಆವರಣಕ್ಕೆ ಕಾಲಿಡದಿರಲು ವಕೀಲರಿಗೆ ಸೂಚನೆ