ಸುಪ್ರೀಂಕೋರ್ಟ್​​ನಲ್ಲಿ 150ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ ಸೋಂಕು; ಕೋರ್ಟ್​ ಆವರಣಕ್ಕೆ ಕಾಲಿಡದಿರಲು ವಕೀಲರಿಗೆ ಸೂಚನೆ

ಸುಪ್ರೀಂಕೋರ್ಟ್​​ನಲ್ಲಿ 150ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ ಸೋಂಕು; ಕೋರ್ಟ್​ ಆವರಣಕ್ಕೆ ಕಾಲಿಡದಿರಲು ವಕೀಲರಿಗೆ ಸೂಚನೆ
ಸುಪ್ರೀಂ ಕೋರ್ಟ್

ಕೊವಿಡ್ ಸೋಂಕು ತಗುಲಿರುವ ಸುಪ್ರೀಂ ಕೋರ್ಟ್​ನ ನಾಲ್ವರು ಜಡ್ಜ್​ಗಳ ಪೈಕಿ ಓರ್ವ ನ್ಯಾಯಮೂರ್ತಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನುಳಿದ ಮೂವರು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. 

TV9kannada Web Team

| Edited By: Lakshmi Hegde

Jan 10, 2022 | 10:07 AM

ಸುಪ್ರೀಂಕೋರ್ಟ್​​ನಲ್ಲಿರುವ ಒಟ್ಟು 32 ನ್ಯಾಯಾಧೀಶರ ಪೈಕಿ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅದಕ್ಕೂ ಮಿಗಿಲಾಗಿ ಸುಪ್ರೀಂಕೋರ್ಟ್​​ನಲ್ಲಿರುವ ಇತರ ಸಿಬ್ಬಂದಿಯಲ್ಲಿ ಶೇ.5ರಷ್ಟು ಸಿಬ್ಬಂದಿಗೆ, ಅಂದರೆ ಒಟ್ಟಾರೆ 3 ಸಾವಿರ ಸಿಬ್ಬಂದಿಯಲ್ಲಿ  ಸುಮಾರು 150 ಮಂದಿ ಕೊರೊನಾಕ್ಕೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಲ್ವರು ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದ್ದು ಜನವರಿ 8ರಂದು ವರದಿಯಾಗಿತ್ತು. ಅದಾದ ಮೇಲೆ ಸುಮಾರು 150ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನೂ ಅನೇಕರ ವರದಿ ಬರಬೇಕಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಇನ್ನು ದೆಹಲಿ ಹೈಕೋರ್ಟ್​​ನಲ್ಲೂ ಕೂಡ ಇದೇ ಕತೆಯಾಗಿದೆ. ಅಲ್ಲಿಯೂ ನಾಲ್ವರು ನ್ಯಾಯಾಧೀಶರು, ಹಲವು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.  

ಸುಪ್ರೀಂಕೋರ್ಟ್ ಆವರಣದಲ್ಲಿ ಟೆಸ್ಟ್​ ಕೊವಿಡ್ 19 ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿದ್ದಂತೆ ಸುಪ್ರೀಂಕೋರ್ಟ್​ ಆವರಣದಲ್ಲಿ ಕೊವಿಡ್​ 19 ತಪಾಸಣಾ ವ್ಯವಸ್ಥೆ ಮಾಡಲಾಗಿದೆ.  ಸೋಮವಾರದಿಂದ ಶನಿವಾರದವರೆಗೂ ಇಲ್ಲಿ ಕೊವಿಡ್​ 19 ಟೆಸ್ಟ್​ ನಡೆಯುತ್ತದೆ.  ಕೊರೊನಾ ಹರಡುವಿಕೆ ಮತ್ತು ಒಮಿಕ್ರಾನ್​ ಹರಡುವಿಕೆ ತಡೆಯಲು , ಸುಪ್ರೀಂಕೋರ್ಟ್​ ಪ್ರವೇಶಿಸುವವರಿಗಾಗಿ ಕೊರೊನಾ ತಪಾಸಣೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ.  ಇನ್ನು ಸುಪ್ರೀಂಕೋರ್ಟ್​ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, ವಕೀಲರು ಸಾಧ್ಯವಾದಷ್ಟು ಅಲ್ಲಿಗೆ ಹೋಗುವುದನ್ನು ಬಿಡಬೇಕು ಎಂದು ಸುಪ್ರೀಂಕೋರ್ಟ್​ ಬಾರ್​ ಅಸೋಸಿಯೇಶನ್​ ಹೇಳಿದೆ.

ಕೊವಿಡ್ ಸೋಂಕು ತಗುಲಿರುವ ಸುಪ್ರೀಂ ಕೋರ್ಟ್​ನ ನಾಲ್ವರು ಜಡ್ಜ್​ಗಳ ಪೈಕಿ ಓರ್ವ ನ್ಯಾಯಮೂರ್ತಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನುಳಿದ ಮೂವರು ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.  ಇಂದಿನಿಂದ ಸುಪ್ರೀಂ ಕೋರ್ಟ್​ನ ವಿಚಾರಣೆಗಳು ವಿಡಿಯೋ ಕಾನ್ಫೆರನ್ಸ್ ಮೂಲಕ ನಡೆಯಲಿದೆ. ಇನ್ನು ಕೇವಲ ದೆಹಲಿ ಹೈಕೋರ್ಟ್​ನಲ್ಲಿ ಅಷ್ಟೇ ಅಲ್ಲ, ಬಾಂಬೆ, ಕೋಲ್ಕತ್ತ, ಅಲಹಾಬಾದ್​ ಹೈಕೋರ್ಟ್​​ಗಳ ನ್ಯಾಯಾಧೀಶರಿಗೂ ಕೊರೊನಾ ಕಾಣಿಸಿಕೊಂಡಿದೆ.

ಇಂದಿನಿಂದ ಬೂಸ್ಟರ್​ ಡೋಸ್​ ನೀಡಿಕೆ ಭಾರತದಲ್ಲಿ ಕೊವಿಡ್​ 19 ಸೋಂಕಿನ ಮೂರನೇ ಅಲೆ ಶುರುವಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಈ ಮಧ್ಯೆ ಇಂದಿನಿಂದ ದೇಶದಲ್ಲಿ ಆರೋಗ್ಯ ಕಾರ್ಯಕರ್ತರು, ಕೊವಿಡ್​ 19 ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟು, ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್​ ನೀಡುವ ಅಭಿಯಾನ ಶುರುವಾಗುತ್ತಿದೆ. ಹಾಗೇ, ಇನ್ನೊಂದೆಡೆ 15-18 ವರ್ಷದವರಿಗೆ ಕೂಡ ಕೊರೊನಾ ಲಸಿಕೆ ನೀಡಲಾಗುತ್ತಿದೆ.

ಇದನ್ನೂ ಓದಿ: Viral Video: ಮರಕ್ಕೆ ಗುದ್ದಿ ಬಾಕ್ಸಿಂಗ್​ ಅಭ್ಯಾಸ ಮಾಡುವ 12ರ ಬಾಲಕಿ: ಈಕೆಯ ತಾಕತ್ತು ನೋಡಿ ಬೆರಗಾದ ನೆಟ್ಟಿಗರು

Follow us on

Related Stories

Most Read Stories

Click on your DTH Provider to Add TV9 Kannada