AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covishield ಕೊವಿಶೀಲ್ಡ್ ಡೋಸ್ ಅಂತರ 12-16 ರಿಂದ 8-16 ವಾರಗಳಿಗೆ ಇಳಿಕೆ

ಕೊವಿಶೀಲ್ಡ್ ಮೊದಲ ಡೋಸ್ ನಂತರ 8- 16 ವಾರಗಳ ನಡುವೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡುವಂತೆ ಭಾರತದ ಉನ್ನತ ಸಂಸ್ಥೆ ಎನ್‌ಟಿಜಿಐ ಶಿಫಾರಸು ಮಾಡಿದೆ

Covishield ಕೊವಿಶೀಲ್ಡ್ ಡೋಸ್ ಅಂತರ 12-16 ರಿಂದ 8-16 ವಾರಗಳಿಗೆ ಇಳಿಕೆ
ಕೊವಿಶೀಲ್ಡ್
TV9 Web
| Edited By: |

Updated on: Mar 20, 2022 | 5:59 PM

Share

ದೆಹಲಿ: ಮೊದಲ ಡೋಸ್ ನಂತರ 8- 16 ವಾರಗಳ ನಡುವೆ ಎರಡನೇ ಡೋಸ್ ಕೊವಿಡ್-19 (Covid 19) ಲಸಿಕೆ ಕೊವಿಶೀಲ್ಡ್ (Covishield Dose) ಅನ್ನು ನೀಡುವಂತೆ ಭಾರತದ ಉನ್ನತ ಸಂಸ್ಥೆ ಎನ್‌ಟಿಜಿಐ ಶಿಫಾರಸು ಮಾಡಿದೆ ಎಂದು ಪಿಟಿಐಗೆ ನಿಕಟವಾಗಿರುವ ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ. ಪ್ರಸ್ತುತ, ಕೊವಿಶೀಲ್ಡ್‌ನ ಎರಡನೇ ಡೋಸ್ ಅನ್ನು 12-16 ವಾರಗಳ ರ ನಡುವೆ ನೀಡಲಾಗುತ್ತದೆ. ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (NTAGI) ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ಇನ್ನೂ ಸೂಚಿಸಿಲ್ಲ, ಅದರ ಎರಡನೇ ಡೋಸ್ ಅನ್ನು ಮೊದಲ ಡೋಸ್ ನೀಡಿದ 28 ದಿನಗಳ ನಂತರ ನೀಡಲಾಗುತ್ತದೆ. “ಎನ್‌ಟಿಎಜಿಐನ ಇತ್ತೀಚಿನ ಶಿಫಾರಸುಗಳು ಪ್ರೋಗ್ರಾಮ್ಯಾಟಿಕ್ ಡೇಟಾದಿಂದ ಪಡೆದ ಇತ್ತೀಚಿನ ಜಾಗತಿಕ ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದೆ” ಎಂದು ಅಧಿಕೃತ ಮೂಲವೊಂದು ತಿಳಿಸಿದೆ.  “ಅದರ ಪ್ರಕಾರ, ಕೊವಿಶೀಲ್ಡ್‌ನ ಎರಡನೇ ಡೋಸ್ ಅನ್ನು ಎಂಟು ವಾರಗಳ ನಂತರ ನೀಡಿದಾಗ, 12 ರಿಂದ 16 ವಾರಗಳ ಮಧ್ಯಂತರದಲ್ಲಿ ನಿರ್ವಹಿಸಿದಾಗ ಉತ್ಪತ್ತಿಯಾಗುವ ಪ್ರತಿಕಾಯ ಪ್ರತಿಕ್ರಿಯೆಯು ಬಹುತೇಕ ಹೋಲುತ್ತದೆ” ಎಂದು ಮೂಲವು ವಿವರಿಸಿದೆ.  ಹಲವಾರು ದೇಶಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಉಳಿದ ಆರರಿಂದ ಏಳು ಕೋಟಿ ವ್ಯಕ್ತಿಗಳಿಗೆ ಕೊವಿಶೀಲ್ಡ್‌ನ ಎರಡನೇ ಡೋಸ್‌ನ ವೇಗವರ್ಧಿತ ನೀಡಿಕೆಗೆ ಈ ನಿರ್ಧಾರವು ಕಾರಣವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಎನ್‌ಟಿಎಜಿಐ ಶಿಫಾರಸುಗಳ ಆಧಾರದ ಮೇಲೆ ಸರ್ಕಾರವು ಮೇ 13, 2021 ರಂದು ಕ`ವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್‌ಗಳ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳವರೆಗೆ ವಿಸ್ತರಿಸಿತ್ತು ಎನ್‌ಟಿಎಜಿಐ ದೇಶದಲ್ಲಿ ಲಸಿಕೆ-ತಡೆಗಟ್ಟಬಹುದಾದ ರೋಗಗಳ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಪ್ರತಿರಕ್ಷಣೆ ಸೇವೆಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುತ್ತದೆ.

ಇದನ್ನೂ ಓದಿ: ಕೊವಿಡ್ ಪ್ರಕರಣಗಳು ಜಾಗತಿಕವಾಗಿ ಹೆಚ್ಚಾಗುತ್ತಿದ್ದಂತೆ ಒಮಿಕ್ರಾನ್ ಬಗ್ಗೆ ಇರುವ ತಪ್ಪು ಮಾಹಿತಿಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕಳವಳ

2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!