ಹಾಡಹಗಲೇ ಅಕ್ಕ-ತಂಗಿಯನ್ನು ರಸ್ತೆಯಿಂದ ಕಿಡ್ನಾಪ್ ಮಾಡಿ, ಕಚ್ಚಿ ಚಿತ್ರಹಿಂಸೆ ನೀಡಿದ ಯುವಕರು

ಬಿಹಾರದಲ್ಲಿ ಹಗಲು ಹೊತ್ತಿನಲ್ಲಿಯೇ ಇಬ್ಬರು ಸಹೋದರಿಯರನ್ನು ರಸ್ತೆಯಿಂದ ಕಿಡ್ನಾಪ್ ಮಾಡಿ, ಆಕೆಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾರೆ. ಅವರಿಗೆ ಅತ್ಯಾಚಾರ ಮಾಡಲು ಸಾಧ್ಯವಾಗದಿದ್ದಾಗ ಅವರನ್ನು ಕಚ್ಚಿ ಹಿಂಸೆ ನೀಡಿದ್ದಾರೆ. ಇದನ್ನು ವಿರೋಧಿದ್ದಕ್ಕೆ ಅವರ ತಾಯಿಯನ್ನೂ ಥಳಿಸಿದ್ದಾರೆ.

ಹಾಡಹಗಲೇ ಅಕ್ಕ-ತಂಗಿಯನ್ನು ರಸ್ತೆಯಿಂದ ಕಿಡ್ನಾಪ್ ಮಾಡಿ, ಕಚ್ಚಿ ಚಿತ್ರಹಿಂಸೆ ನೀಡಿದ ಯುವಕರು
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Aug 07, 2024 | 9:16 PM

ಪಾಟ್ನಾ: ಅತ್ಯಾಚಾರದ ಪ್ರಯತ್ನದ ವಿರುದ್ಧ ಪ್ರತಿಭಟಿಸಿದ ಇಬ್ಬರು ಸಹೋದರಿಯರನ್ನು ದುಷ್ಕರ್ಮಿಗಳು ಕಿಡ್ನಾಪ್ ಮಾಡಿ, ಕೆಸರಿನಲ್ಲಿ ಬೀಳಿಸಿ ಕಚ್ಚಿದ್ದಾರೆ. ಅವರಲ್ಲಿ ಓರ್ವ ಬಿಎ ವಿದ್ಯಾರ್ಥಿನಿಗೆ ತೀವ್ರವಾಗಿ ಗಾಯವಾಗಿದೆ. ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಇಬ್ಬರು ಸಹೋದರಿಯರನ್ನು ಹಾಡಹಗಲೇ ರಸ್ತೆಯಿಂದ ಎತ್ತಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಮಂಗಳವಾರ ವೀರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲತ್ರಾಹಿ ಚೌಕ್ ಬಳಿ ಮೂವರು ದುಷ್ಕರ್ಮಿಗಳು ಸೇರಿ ಇಬ್ಬರು ಸಹೋದರಿಯರನ್ನು ಹಾಡಹಗಲೇ ರಸ್ತೆಯಿಂದ ಬಲವಂತವಾಗಿ ಅಪಹರಿಸಿದ್ದಾರೆ. ಬಳಿಕ ಅವರನ್ನು ಜೋಳದ ಹೊಲಕ್ಕೆ ಕರೆದೊಯ್ದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ.

ಅತ್ಯಾಚಾರದ ಯತ್ನದ ವಿರುದ್ಧ ಪ್ರತಿಭಟಿಸಿದಾಗ ದುಷ್ಕರ್ಮಿಗಳು ಸಹೋದರಿಯರಿಬ್ಬರನ್ನೂ ಕೆಸರಿನಲ್ಲಿ ಎಸೆದಿದ್ದಾರೆ. ಅವರಲ್ಲಿ ಓರ್ವ ಬಿಎ ವಿದ್ಯಾರ್ಥಿನಿಗೆ ಹಲ್ಲಿಂದ ಕಚ್ಚಿದ್ದರಿಂದ ಗಾಯಗೊಂಡಿದ್ದಾರೆ. ಪ್ರತಿಭಟನೆ ವೇಳೆ ದುಷ್ಕರ್ಮಿಗಳು ವಿದ್ಯಾರ್ಥಿನಿಯರ ಬಟ್ಟೆ ಹರಿದಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯವನ್ನು ವಿರೋಧಿಸಿ ಮತ್ತೊಬ್ಬ ಸಹೋದರಿ ಕಿರುಚಾಡಿದಾಗ ಜನ ಜಮಾಯಿಸಿದ್ದು, ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: Crime News: ಹಾಸಿಗೆ ಹಿಡಿದಿದ್ದ 80 ವರ್ಷದ ವೃದ್ಧೆ ಮೇಲೆ ಅತ್ಯಾಚಾರ; ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ

ಸಂತ್ರಸ್ತ ಸಹೋದರಿಯರು ಅವರ ಮನೆಗೆ ತೆರಳಿ ಈ ಘಟನೆಯ ಬಗ್ಗೆ ತಮ್ಮ ತಾಯಿಗೆ ತಿಳಿಸಿದ್ದಾರೆ. ಆತನ ತಾಯಿ ಆರೋಪಿಯ ಮನೆಗೆ ತೆರಳಿ ದೂರು ನೀಡಿದಾಗ ಮೂವರು ದುಷ್ಕರ್ಮಿಗಳು ಆಕೆಗೆ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಮೊದಲು ಹೋಗಿ ಚಿಕಿತ್ಸೆ ಪಡೆಯುವಂತೆ ತಿಳಿಸಲಾಯಿತು ಎಂದು ಸಂತ್ರಸ್ತೆ ಹೇಳಿದ್ದಾರೆ. ಆ ಬಳಿಕ ಪ್ರಕರಣದ ವಿಚಾರಣೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ